ಬೆಂಗಳೂರು:ಕರ್ನಾಟಕ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ವತಿಯಿಂದ ಭಾನುವಾರ ಕಂಠೀರವ ಕ್ರೀಡಾಂಗಣದಲ್ಲಿ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ 'ರೈಡ್ ವಿತ್ ದಿ ರೋಲಾರ್ಸ್' ಕಾರ್ಯಕ್ರಮ ನಡೆಯಿತು. 450 ಸ್ಕೇಟಿಂಗ್ ಕ್ರೀಡಾಪಟುಗಳು ಮತ್ತು 200 ಮೋಟರ್ ಬೈಕ್ಗಳ ಮೂಲಕ ನಡೆದ ಜಾಥಾಗೆ ನಟ ಶ್ರೀನಗರ ಕಿಟ್ಟಿ ಹಾಗೂ ಕರ್ನಾಟಕ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಇಂದೂಧರ್ ಸೀತಾರಾಂ ಚಾಲನೆ ಕೊಟ್ಟರು.
450 ಸ್ಕೇಟಿಂಗ್ ಕ್ರೀಡಾಪಟುಗಳಿಂದ ರೈಡ್ ವಿತ್ ದಿ ರೋಲಾರ್ಸ್ ಅಮೃತ ಮಹೋತ್ಸವ ಜಾಥಾ - ಸ್ವಾತಂತ್ರ್ಯ ಅಮೃತ ಮಹೋತ್ಸವ
ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ಕರ್ನಾಟಕ ರೋಲರ್ ಸ್ಕೇಟಿಂಗ್ ಆಸೋಸಿಯೇಷನ್ ವತಿಯಿಂದ ರೈಡ್ ವಿತ್ ದಿ ರೋಲಾರ್ಸ್ ಕಾರ್ಯಕ್ರಮ ಆಯೋಜಿಸಲಾಗಿತ್ತು.
6 ಕಿ.ಮೀ ದೂರ ನಡೆದ ಸ್ಕೇಟಿಂಗ್ ಜಾಥಾ ಕಂಠೀರವ ಕ್ರೀಡಾಂಗಣದಿಂದ ಪ್ರಾರಂಭವಾಗಿ ರಾಜಭವನ, ವಿಧಾನಸೌಧ ಸುತ್ತಮುತ್ತಲ ಪ್ರದೇಶದಲ್ಲಿ ಸಾಗಿತು. "ಲಕ್ಷಾಂತರ ಜನರ ತ್ಯಾಗ, ಬಲಿದಾನದ ಫಲವಾಗಿ ಬ್ರಿಟಿಷರಿಂದ ಭಾರತಕ್ಕೆ ಸ್ವಾತಂತ್ರ್ಯ ಲಭಿಸಿತು. ಸ್ವಾತಂತ್ರ್ಯ ಹೋರಾಟಗಾರರ ಸ್ಮರಣೆ ಮತ್ತು ಜೀವನ ಸಿದ್ದಾಂತಗಳ ಕುರಿತಾಗಿ ಮುಂದಿನ ಯುವ ಸಮೂಹಕ್ಕೆ ಅರಿವು ಮೂಡಿಸಲು ಸ್ಕೇಟಿಂಗ್ ಜಾಥಾ ಹಮ್ಮಿಕೊಳ್ಳಲಾಗಿದೆ" ಎಂದು ಇಂದೂಧರ್ ಸೀತಾರಾಂ ಹೇಳಿದರು. ಇದೇ ವೇಳೆ, ಡಿಸೆಂಬರ್ ತಿಂಗಳಲ್ಲಿ 60ನೇ ರಾಷ್ಟ್ರೀಯ ಸ್ಕೇಟಿಂಗ್ ಚಾಂಪಿಯನ್ ಶಿಪ್ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಅವರು ತಿಳಿಸಿದರು.