ಬೆಂಗಳೂರು: ದಿವಂಗತ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮನೆ ಮೇಲೆ ಸಿಸಿಬಿ ಅಧಿಕಾರಿಗಳು ಇಂದು ದಾಳಿ ನಡೆಸಿದ್ದು, ಕೆಲವು ಸಾಕ್ಷ್ಯಾಧಾರಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಸಿಸಿಬಿ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.
ಕೆಲವು ಸಾಕ್ಷ್ಯಾಧಾರಗಳನ್ನಿಟ್ಟುಕೊಂಡು ರಿಕ್ಕಿ ರೈ ಮನೆ ಮೇಲೆ ದಾಳಿ ನಡೆಸಲಾಗಿದೆ: ಸಂದೀಪ್ ಪಾಟೀಲ್ - ccb commissioner sandeep patil news
ನಾಪತ್ತೆಯಾಗಿದ್ದ ಆರೋಪಿಗಳಿಗೆ ರಿಕ್ಕಿ ರೈ ಸಹಾಯ ಮಾಡುತ್ತಿದ್ದ ಮತ್ತು ಬಹಳ ಆತ್ಮೀಯವಾಗಿ ನಡೆದುಕೊಂಡಿದ್ದ. ಅಷ್ಟು ಮಾತ್ರವಲ್ಲದೆ ಪಾರ್ಟಿ ಆಯೋಜಕ ವಿರೇನ್ ಖನ್ನಾ ಜೊತೆ ಕೂಡ ಈತ ಗುರುತಿಸಿಕೊಂಡಿದ್ದ ಎಂದು ಸಿಸಿಬಿ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.
ಸ್ಯಾಂಡಲ್ವುಡ್ಗೆ ಡ್ರಗ್ಸ್ ನಂಟು ಆರೋಪ ಪ್ರಕರಣ ಸಂಬಂಧ ತನಿಖೆ ನಡೆಯುತ್ತಿದ್ದು, ಆರೋಪಿ ಆದಿತ್ಯಾ ಆಳ್ವಾ ತಲೆಮರೆಸಿಕೊಂಡಿದ್ದ. ಈತನಿಗೆ ತಲೆಮರೆಸಿಕೊಂಡಿರಲು ರಿಕ್ಕಿ ರೈ ಸಹಾಯ ಮಾಡಿದ್ದ. ಸದ್ಯ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದರು.
ನಾಪತ್ತೆಯಾಗಿದ್ದ ಆರೋಪಿಗಳಿಗೆ ರಿಕ್ಕಿ ರೈ ಸಹಾಯ ಮಾಡುತ್ತಿದ್ದ ಮತ್ತು ಬಹಳ ಆತ್ಮೀಯವಾಗಿ ನಡೆದುಕೊಂಡಿದ್ದ. ಅಷ್ಟು ಮಾತ್ರವಲ್ಲದೆ ಪಾರ್ಟಿ ಆಯೋಜಕ ವಿರೇನ್ ಖನ್ನಾ ಜೊತೆ ಕೂಡ ಈತ ಗುರುತಿಸಿಕೊಂಡಿದ್ದ. ಈ ಕಾರಣಕ್ಕೆ ಇಂದು ದಾಳಿ ಮಾಡಲಾಗಿದ್ದು, ಸದ್ಯ ಶೋಧ ಕಾರ್ಯ ಮುಂದುವರೆದಿದೆ ಎಂದು ತಿಳಿಸಿದ್ದಾರೆ.