ಕರ್ನಾಟಕ

karnataka

ETV Bharat / state

ಕಂಟೇನ್ಮೆಂಟ್ ಹಾಗೂ ಬಫರ್ ವಲಯಗಳಿಗೆ ಪರಿಷ್ಕೃತ ಮಾರ್ಗಸೂಚಿ ಬಿಡುಗಡೆ - ಬೆಂಗಳೂರು

ಕಂಟೇನ್ಮೆಂಟ್ ಝೋನ್ ಹಾಗೂ ಬಫರ್ ವಲಯಗಳಿಗೆ ಪರಿಷ್ಕೃತ ಮಾರ್ಗಸೂಚಿ ಬಿಡುಗಡೆ ಮಾಡಿ ಆರೋಗ್ಯ ಇಲಾಖೆ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ಆದೇಶ‌ ಹೊರಡಿಸಿದ್ದಾರೆ.

Revised Guideline Release
ಕಂಟೈನ್ಮೆಂಟ್, ಬಫರ್ ವಲಯಗಳಿಗೆ ಪರಿಷ್ಕೃತ ಮಾರ್ಗಸೂಚಿ ಬಿಡುಗಡೆ

By

Published : Aug 20, 2020, 12:13 PM IST

ಬೆಂಗಳೂರು: ರಾಜ್ಯದಲ್ಲಿ ಒಂದೆಡೆ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದರೆ, ಮತ್ತೊಂದು ಕಡೆ ಕಂಟೇನ್ಮೆಂಟ್ ಝೋನ್‌ಗಳ ನಿಯಮದಲ್ಲಿ ಸರ್ಕಾರ ಸಡಿಲಿಕೆ ತಂದಿದೆ.

ಕಂಟೈನ್ಮೆಂಟ್, ಬಫರ್ ವಲಯಗಳಿಗೆ ಪರಿಷ್ಕೃತ ಮಾರ್ಗಸೂಚಿ ಬಿಡುಗಡೆ
ಕಂಟೈನ್ಮೆಂಟ್, ಬಫರ್ ವಲಯಗಳಿಗೆ ಪರಿಷ್ಕೃತ ಮಾರ್ಗಸೂಚಿ ಬಿಡುಗಡೆ

ಕಂಟೇನ್ಮೆಂಟ್ ಝೋನ್ ಹಾಗೂ ಬಫರ್ ವಲಯಗಳಿಗೆ ಪರಿಷ್ಕೃತ ಮಾರ್ಗಸೂಚಿ ಬಿಡುಗಡೆ ಮಾಡಿ ಆರೋಗ್ಯ ಇಲಾಖೆ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ಆದೇಶ‌ ಹೊರಡಿಸಿದ್ದಾರೆ. 28 ದಿನಕ್ಕೆ ಇದ್ದ ಕಂಟೇನ್ಮೆಂಟ್ ಝೋನ್‌ಗಳ ಅವಧಿ 14 ದಿನಕ್ಕೆ ಇಳಿಕೆ ಮಾಡಲಾಗಿದೆ. ಮೊದಲು 28 ದಿನ ಕಂಟೇನ್ಮೆಂಟ್ ಝೋನ್‌ನಲ್ಲಿ ಯಾವುದೇ ಪಾಸಿಟಿವ್ ಕೇಸ್ ಬರದೇ ಇದ್ದಲ್ಲಿ, ಕಂಟೇನ್ಮೆಂಟ್ ಝೋನ್‌ನಿಂದ ತೆರವು ಮಾಡಬೇಕಿತ್ತು. ಇದೀಗ 14 ದಿನಗಳಲ್ಲಿ ಪಾಸಿಟಿವ್ ಕೇಸ್ ಬಾರದೇ ಹೋದರೆ ಕಂಟೇನ್ಮೆಂಟ್ ಝೋನ್ ತೆರವು ಮಾಡಬಹುದು.

ಇನ್ನು ಸೋಂಕಿತನ ಮನೆಯನ್ನು ಮಾತ್ರ ಪರಿಗಣಿಸಬೇಕು. ಸುತ್ತಮುತ್ತಲ ಪ್ರದೇಶದಲ್ಲಿ ಯಾವುದೇ ಬ್ಯಾರಿಕೇಡ್​​ ಹಾಕುವ ಅವಶ್ಯಕತೆ ಇಲ್ಲ ಹಾಗೂ ಸ್ಟಾಂಪಿಂಗ್ ಕಡ್ಡಾಯವಲ್ಲ. ವ್ಯಕ್ತಿಯ ಜೊತೆ ಸಂಪರ್ಕಿತರನ್ನು ಮ್ಯಾಪ್ ಮೂಲಕ ಮಾಡಬೇಕು. ಬಫರ್ ಝೋನ್‌ ಅನ್ನು ಆಯಾ ಜಿಲ್ಲಾಧಿಕಾರಿಗಳು, ಆಯುಕ್ತರು ಪ್ರತ್ಯೇಕಿಸಲು ನಿರ್ಧಾರ ಕೈಗೊಳ್ಳಬಹುದು.

ಹಾಗೇ ಸಡಿಲಿಕೆ ಕಾರಣ ರಾಜ್ಯದಲ್ಲಿ ಕೋವಿಡ್ ಹೆಚ್ಚುತ್ತಿರುವ ಸಂದರ್ಭದಲ್ಲಿ, ಅಕ್ಕ-ಪಕ್ಕದಲ್ಲಿರುವ ಅಥವಾ ಹತ್ತಿರದಲ್ಲಿಯೇ ಇರುವ ಮನೆಗಳು ಅಥವಾ ಅಪಾರ್ಟ್‌ಮೆಂಟ್ / ವಸತಿ ಸಮುಚ್ಛಯಗಳಲ್ಲ ವರದಿಯಾಗುತ್ತಿದೆ. ಇದರಿಂದ ಕಂಟೇನೈಂಟ್ ವಲಯಗಳ ಸಂಖ್ಯೆ ಮಿತಿ ಮೀರಿದ್ದು, ಪ್ರಾಧಿಕಾರಗಳಿಗೆ ಸರ್ವೇಕ್ಷಣಾ ಚಟುವಟಿಕೆಗಳನ್ನು ಸುಲಭವಾಗಿ ಕೈಗೊಳ್ಳಲು ಅಡ್ಡಿಯಾಗುವುದಲ್ಲದೇ, ಖಚಿತ ಪಡಿಸಿಕೊಳ್ಳುವುದು ಕಷ್ಟ ಸಾಧ್ಯವಾಗಿದೆ. ಹೀಗಾಗಿ ಈ ಸಡಿಲಿಕೆ ಮಾಡಲಾಗಿದೆ.

ABOUT THE AUTHOR

...view details