ಬೆಂಗಳೂರು: ಕಂದಾಯ ಸಚಿವ ಆರ್. ಅಶೋಕ್ ಅವರು ಇಂದು ಪಾಲಿಕೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಈ ವೇಳೆ ನಗರದ ರಸ್ತೆಗುಂಡಿ ಸಮಸ್ಯೆ, ಗಣೇಶೋತ್ಸವ ಆಚರಣೆ ಹಾಗೂ ಕೋವಿಡ್ ವಿಚಾರವಾಗಿ ಚರ್ಚಿಸಿದರು.
ಸಭೆ ಬಳಿಕ ಮಾತನಾಡಿದ ಅವರು, ನಗರದ ಮುಖ್ಯರಸ್ತೆಗಳನ್ನು ಮುಚ್ಚಲು ಸೆ.20 ಹಾಗೂ ವಾರ್ಡ್ ರಸ್ತೆಗಳ ಗುಂಡಿಗಳನ್ನೂ ಮುಚ್ಚಲು ಸೆಪ್ಟೆಂಬರ್ ಅಂತ್ಯದವರೆಗೆ ಗಡುವು ನೀಡಲಾಗಿದೆ. ಮಳೆಯಿಂದ ರಸ್ತೆಗಳು ಹಾಳಾಗಿವೆ. ಬಹುತೇಕ ರಸ್ತೆಗಳಲ್ಲಿ ಗುಂಡಿಗಳು ನಿರ್ಮಾಣವಾಗಿವೆ. ಗುಂಡಿಯನ್ನು ತ್ವರಿತವಾಗಿ ಮುಚ್ಚುವಂತೆ ಸೂಚನೆ ನೀಡಲಾಗಿದೆ. 1,332 ಕಿ.ಮೀ ಮೇಜರ್ ರಸ್ತೆಯಲ್ಲಿ ಗುಂಡಿಗಳಿವೆ. ವಾರ್ಡ್ವಾರು 8,5791 ಕಿ.ಮೀ ರಸ್ತೆ ಇದೆ. 2,650 ಕಿ.ಮೀ ರಸ್ತೆಗಳು ಈಗಾಗಲೇ ಗುಂಡಿಗಳಿಂದ ಹಾಳಾಗಿವೆ. 887 ಕಿಲೋ ಮೀಟರ್ ಉದ್ದದ ರಸ್ತೆಯಲ್ಲಿ ರಸ್ತೆ ಗುಂಡಿಗಳಿವೆ. ಪಾಲಿಕೆ ಬಳಿಯೇ ಡಾಂಬರೀಕರಣ ವ್ಯವಸ್ಥೆ ಇದ್ದು, ಪ್ರತಿದಿನ 20 ಲೋಡ್ ಕಾಂಕ್ರಿಟ್ ಪೂರೈಕೆ ಆಗುತ್ತಿದೆ. ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿ ಗುಂಡಿ ಮುಚ್ಚಿಸಬೇಕು ಎಂದು ತಾಕೀತು ಮಾಡಿದರು.
ಈ ಬಾರಿ ಹೊಸದಾಗಿ ಜಿಯೋ ಸ್ಟಾಂಪ್ ಆ್ಯಪ್ ಆರಂಭಿಸಲಾಗಿದೆ. ಈ ಆ್ಯಪ್ ಮೂಲಕ ರಸ್ತೆ ಗುಂಡಿ ಮುಚ್ಚುವ ಮಾಹಿತಿ ಸಾರ್ವಜನಿಕರಿಗೆ ತಕ್ಷಣವೇ ಸಿಗಲಿದೆ. ಗುಣಮಟ್ಟದ ಡಾಂಬರ್ ಹಾಕುವಂತೆ ಸೂಚನೆ ನೀಡಿದ್ದೇನೆ. ಡೆಡ್ಲೈನ್ ಮೀರಿದರೆ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ನಿಯಮಗಳ ಪಾಲನೆ ಕಡ್ಡಾಯ:
ಗಣೇಶೋತ್ಸವ ಆಚರಣೆಗೆ ಬಿಬಿಎಂಪಿಗೆ ಪ್ರತ್ಯೇಕ ನಿಯಮ ಇದ್ದು, ಬೆಂಗಳೂರಿನಲ್ಲಿ ಕೆರೆಗಳಲ್ಲಿ ಪ್ರತ್ಯೇಕ ಪಾಂಡ್ ನಿರ್ಮಾಣ ಮಾಡಲಾಗಿದೆ. ಸಾರ್ವಜನಿಕವಾಗಿ ಇಟ್ಟ ಗಣಪತಿಗೆ ಮಾತ್ರ ನಿಮಜ್ಜನೆಗೆ ಅವಕಾಶ ಇರಲಿದೆ. ನಾಲ್ಕು ಅಡಿ ಎತ್ತರದ ಮೂರ್ತಿಗಳ ಪ್ರತಿಷ್ಠಾಪನೆಗೆ ಅವಕಾಶ ಇದ್ದು, ರಾತ್ರಿ 9 ರವರೆಗೆ ಮಾತ್ರ ನಿಮಜ್ಜನಕ್ಕೆ ಅವಕಾಶ, ನಂತರ ಎಂದಿನಂತೆ ಕರ್ಫ್ಯೂ ಇರಲಿದೆ. ಈಜುಗಾರರಿಗೆ ಮಾತ್ರ ನಿಮಜ್ಜನಕ್ಕೆ ಅವಕಾಶವಿದೆ. ಎಸಿಪಿ ದರ್ಜೆಯ ಅಧಿಕಾರಿ ನೇತೃತ್ವದಲ್ಲಿ ಮಾನಿಟರಿಂಗ್ ನಡೆಯಲಿದೆ. ಮೆರವಣಿಗೆಗೆ ಯಾವುದೇ ಅವಕಾಶ ಇರೋದಿಲ್ಲ. 20 ಜನರಿಗೆ ಮಾತ್ರ ನಿಮಜ್ಜನ ಪೂಜೆಗೆ ಅವಕಾಶ ಇರಲಿದೆ. ಸಾರ್ವಜನಿಕರಿಗೆ ಇಡುವ ಗಣಪತಿ ಬಳಿ ಲಸಿಕೆ ಅಭಿಯಾನ ನಡೆಯಲಿದೆ. ಕೋವಿಡ್ ನಿಯಮ ಪಾಲನೆ ಮಾಡೋದು ಕಡ್ಡಾಯ ಎಂದರು.
ಮೊಬೈಲ್ ಟ್ಯಾಂಕ್ :