ಕರ್ನಾಟಕ

karnataka

ETV Bharat / state

ಇನ್ನೊಂದು ವಾರದಲ್ಲಿ ಬೆಂಗಳೂರಿನಲ್ಲಿ 7,300 ಬೆಡ್‌ ವ್ಯವಸ್ಥೆ.. ಕಂದಾಯ ಸಚಿವ ಆರ್ ಅಶೋಕ್ - ಬೆಂಗಳೂರಿನಲ್ಲಿ ಹೊಸದಾಗಿ 7,300 ಬೆಡ್​ಗಳ ವ್ಯವಸ್ಥೆ

ಖಾಸಗಿ ಆಸ್ಪತ್ರೆಯಲ್ಲೂ ಶೇ.50 ಬೆಡ್ ಮೀಸಲಿರಿಸಲು ಆದೇಶ. ವಿಧಾನಸಭಾ ಕ್ಷೇತ್ರದಲ್ಲಿ ಇಬ್ಬರು ನೋಡಲ್ ಅಧಿಕಾರಿ ನೇಮಕಕ್ಕೆ ಸಿಎಂ‌ ಸೂಚನೆ ನೀಡಿದ್ದಾರೆ. ಕಲ್ಯಾಣ ಮಂಟಪ, ವಸ್ತು ಪ್ರದರ್ಶನ ಕೇಂದ್ರಗಳನ್ನೂ ಕೋವಿಡ್ ಕೇರ್​ಗೆ ಬಳಸಿಕೊಳ್ಳಲು ತೀರ್ಮಾನ..

Revenue Minister Ashok statement
ಕಂದಾಯ ಸಚಿವ ಆರ್. ಅಶೋಕ್

By

Published : Jun 26, 2020, 5:35 PM IST

ಬೆಂಗಳೂರು :ಇನ್ನೊಂದು ವಾರದಲ್ಲಿ ಬೆಂಗಳೂರಿನಲ್ಲಿ ಹೊಸದಾಗಿ 7,300 ಬೆಡ್​ಗಳ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಎಲ್ಲಿ ಬೆಡ್ ಖಾಲಿ ಇದೆ ಅನ್ನೋ ಮಾಹಿತಿ ನೀಡಿ, ಅಲ್ಲಿಗೆ ರೋಗಿಯನ್ನು ಕಳಿಸಲು ಪ್ರತಿ ವಾರ್ಡ್​​ಗೂ ನೋಡಲ್ ಅಧಿಕಾರಿ ನೇಮಿಸಲಾಗುತ್ತದೆ ಎಂದು ಕೋವಿಡ್-19 ಉಸ್ತುವಾರಿ ಹೊತ್ತಿರುವ ಕಂದಾಯ ಸಚಿವ ಆರ್ ಅಶೋಕ್ ಹೇಳಿದರು.

ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಬೆಂಗಳೂರು‌ ಶಾಸಕರು, ಸಚಿವರು ಹಾಗೂ ಸಂಸದರ ಸಭೆ ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬೆಡ್ ಉಸ್ತುವಾರಿ ನೋಡಿಕೊಳ್ಳಲು ಹಿರಿಯ ಐಎಎಸ್ ಅಧಿಕಾರಿ ತುಷಾರ್ ಗಿರಿನಾಥ್ ಅವರಿಗೆ ವಹಿಸಲಾಗಿದೆ ಎಂದು ತಿಳಿಸಿದರು. ಶಾಸಕರು, ಸಂಸದರು ಸಲಹೆ ಕೊಟ್ಟಿದ್ದಾರೆ. ಅವುಗಳನ್ನು ಜಾರಿಗೆ‌ ತರುವ ಪ್ರಾಮಾಣಿಕ ಪ್ರಯತ್ನದ ಭರವಸೆ ನೀಡಿದ್ದೇವೆ. ಬೆಂಗಳೂರಿನಲ್ಲಿ 1,207 ಸಕ್ರಿಯ ಪ್ರಕರಣಗಳಿವೆ. ಬೇರೆ ನಗರಕ್ಕೆ‌ ಹೋಲಿಸಿದ್ರೆ ಬೆಂಗಳೂರಿನಲ್ಲಿ ಕಡಿಮೆ ಪ್ರಕರಣ ಪತ್ತೆಯಾಗಿವೆ ಎಂದರು.

ಕೋವಿಡ್‌-19 ಕುರಿತಂತೆ ಕಂದಾಯ ಸಚಿವ ಆರ್ ಅಶೋಕ್ ಮಾಹಿತಿ..

ಖಾಸಗಿ ಆಸ್ಪತ್ರೆಯಲ್ಲೂ ಶೇ.50 ಬೆಡ್ ಮೀಸಲಿರಿಸಲು ಆದೇಶ ಹೊರಡಿಸಲಾಗಿದೆ. ನಗರದ ಎಲ್ಲಾ ಶಾಸಕರು ಸಹಕಾರ ನೀಡುವ ಭರವಸೆ ನೀಡಿದ್ದಾರೆ. ಸಿಎಂ ಕೂಡ ಅವರ ಸಲಹೆಯನ್ನು ಗಂಭೀರವಾಗಿ ಪರಿಗಣನೆ ಮಾಡಿದ್ದಾರೆ ಎಂದರು. ವಿಧಾನಸಭಾ ಕ್ಷೇತ್ರದಲ್ಲಿ ಇಬ್ಬರು ನೋಡಲ್ ಅಧಿಕಾರಿ ನೇಮಕಕ್ಕೆ ಸಿಎಂ‌ ಸೂಚನೆ ನೀಡಿದ್ದಾರೆ. ಕಲ್ಯಾಣ ಮಂಟಪ, ವಸ್ತು ಪ್ರದರ್ಶನ ಕೇಂದ್ರಗಳನ್ನೂ ಕೋವಿಡ್ ಕೇರ್​ಗೆ ಬಳಸಿಕೊಳ್ಳಲು ತೀರ್ಮಾನ ಮಾಡಲಾಗಿದೆ ಎಂದರು. ಆಯುರ್ವೇದ ಔಷಧಿ ಬಳಸಲು ಹಲವು ಶಾಸಕರು ಸಲಹೆ ನೀಡಿದ್ದಾರೆ. ಅದನ್ನು ಗಂಭೀರವಾಗಿ ಪರಿಗಣನೆ ಮಾಡಿದ್ದೇವೆ.

ಕೇರಳದಲ್ಲಿ ಬಳಕೆ ಮಾಡಿ ಅಲ್ಲಿನ ಸರ್ಕಾರ ಯಶಸ್ವಿಯಾಗಿದೆ. ಅದನ್ನು ಬೆಂಗಳೂರಿನಲ್ಲಿ ಬಳಕೆ ಮಾಡಲಿದ್ದೇವೆ. ರೋಗ ನಿರೋಧಕ ಶಕ್ತಿ ಹೆಚ್ಚಳಕ್ಕೆ ಇದನ್ನು ಮಾಡಬಹುದು. ಅದಕ್ಕೆ ಸಂಜೆ ಸಿಎಂ ಭೇಟಿ ಮಾಡಿ ಅಂತಿಮ‌ ತೀರ್ಮಾನ ಮಾಡಲಿದ್ದೇವೆ ಎಂದರು. ಆಸ್ಪತ್ರೆ ಅವ್ಯವಸ್ಥೆ ಬಗ್ಗೆ ಆರೋಪ ಬರುತ್ತಿದೆ. ಹಾಗಾಗಿ ಸ್ಥಳೀಯ ಶಾಸಕರೇ ಭೇಟಿ ನೀಡಿ ಊಟ, ಬೆಡ್ ಸಮಸ್ಯೆ ಪರಿಶೀಲನೆ ಮಾಡಲು ಸಲಹೆ ನೀಡಿದ್ದೇವೆ. ಅವ್ಯವಸ್ಥೆ ಇದ್ದರೆ ಗಮನಕ್ಕೆ ತನ್ನಿ ಪರಿಹರಿಸಲಾಗುತ್ತದೆ ಎಂದರು.

ಕೇಂದ್ರ ಕೊರೊನಾ ಡಾಟಾವನ್ನು ಎಂಟು ಪ್ಯಾರಾ ಮೀಟರ್‌ನಲ್ಲಿ ಪ್ರತಿದಿನ ಸಂಗ್ರಹಿಸಲಿದೆ. ನಮ್ಮದು ಒಂದೇ ರಾಜ್ಯ ಎಂಟು ಪ್ಯಾರಾಮೀಟರ್‌ ನಲ್ಲೂ ಸರಿಯಾಗಿ ನೀಡುತ್ತಿದೆ. ಬೇರೆ ರಾಜ್ಯಗಳಿಗೆ ಕೊಡಲು ಆಗುತ್ತಿಲ್ಲ. ಈವರೆಗೆ ರಾಜ್ಯದಲ್ಲಿ 5,53,325 ಪರೀಕ್ಷೆ ನಡೆಸಲಾಗಿದೆ. ಬೆಂಗಳೂರಿನಲ್ಲಿ ಪ್ರತಿ ದಿನ 4 ಸಾವಿರ ಪರೀಕ್ಷೆ ಮಾಡುತ್ತಿದ್ದು, 7,500ಕ್ಕೆ ಹೆಚ್ಚಿಸಲು ಸೂಚನೆ ನೀಡಲಾಗಿದೆ ಎಂದರು.

ಬೆಡ್ ಸಮಸ್ಯೆ ಎದುರಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದ್ದು, ಹಾಗಾಗಿ ಹಿರಿಯ ಐಎಎಸ್ ಅಧಿಕಾರಿ ತುಷಾರ್ ಗಿರಿನಾಥ್ ಅವರಿಗೆಬೆಡ್ ಅಲಾಟ್‌ಮೆಂಟ್‌ನ ಉಸ್ತುವಾರಿ ನೀಡಲಾಗಿದೆ. ಅವರು ಗಮನ ಹರಿಸಲಿದ್ದಾರೆ ಎಂದರು. ಕೊರೊನಾ ಪಾಸಿಟಿವ್ ವಿಷಯ ರೋಗಿಗೆ‌ ತಿಳಿಸುವ ಮೊದಲೇ ಸರ್ಕಾರ ಅಥವಾ ನೋಡಲ್ ಅಧಿಕಾರಿಗೆ ತಿಳಿಸಿದ್ರೆ, ನಾವು ಅವರನ್ನು ಕರೆದೊಯ್ದು ಸರ್ಕಾರಿ ಆಸ್ಪತ್ರೆಯಲ್ಲಿ ಎಲ್ಲ ವ್ಯವಸ್ಥೆ ಮಾಡಲಿದ್ದೇವೆ.

ಪಾಸಿಟಿವ್ ವರದಿ ಬಂದ್ರೆ ಎಂಟು 8 ಗಂಟೆಯೊಳಗೆ ಆಸ್ಪತ್ರೆ ಅಥವಾ ಹೋಟೆಲ್‌ಗೆ ಸ್ಥಳಾಂತರ ಮಾಡಬೇಕು. ಅದಕ್ಕಾಗಿಯೇ ರೋಗ‌ಲಕ್ಷಣ ಇರುವವರು, ಇಲ್ಲದವರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ ಎಂದರು. ಬೆಂಗಳೂರಿನಲ್ಲಿ 150 ರಿಂದ 200 ಕೊರೊನಾ ಪಾಸಿಟಿವ್ ಪ್ರತಿ ದಿನ ಬರುತ್ತಿವೆ. ಇದೇ ರೀತಿ ಎರಡು ತಿಂಗಳು ಪಾಸಿಟಿವ್ ಅಂಕಿ ಅಂಶ ಬಂದರೆ ಯಾವ ರೀತಿ ಆಸ್ಪತ್ರೆ ವ್ಯವಸ್ಥೆ, ಹಾಸಿಗೆ ವ್ಯವಸ್ಥೆ ಮಾಡಿಕೊಳ್ಳಬೇಕು ಅನ್ನೋ ಕುರಿತು ಬ್ಲೂಪ್ರಿಂಟ್ ಸಿದ್ಧಪಡಿಸಲು ಸೂಚಿಸಲಾಗಿದೆ ಎಂದರು. ಎಲ್ಲಿ ಬೆಡ್ ಇರಲಿದೆ, ಎಲ್ಲಿಗೆ ಹೋಗಬೇಕು ಎಂದು ನೀಲನಕ್ಷೆ ಸಿದ್ದಪಡಿಸಲಾಗುತ್ತದೆ.

ಇನ್ನೊಂದು ವಾರದಲ್ಲಿ ಹೊಸದಾಗಿ 7,300 ಬೆಡ್ ಕ್ರಿಯೇಟ್ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ. ನಮಗೆ ಅಗತ್ಯ ಇರುವುದಕ್ಕಿಂತ ಶೇ.15 ರಿಂದ 20ರಷ್ಟು ಹೆಚ್ಚು ಬೆಡ್ ವ್ಯವಸ್ಥೆ ಮಾಡಿಕೊಳ್ಳಲಾಗುತ್ತದೆ ಎಂದರು. ಯಾರಿಗೂ ಆತಂಕ ಬೇಡ, ಕೊರೊನಾ ವೈರಸ್ ಜೊತೆ ಬದುಕಬೇಕಿದೆ, ಪ್ರಪಂಚವು ಹಾಗೆ ಬದುಕುತ್ತಿದೆ, ಕೋವಿಡ್ ಪಾಸಿಟಿವ್ ಬಂದರೆ ಅಂತಹವರನ್ನು ವಿಲನ್ ಮಾಡಬೇಡಿ, ಆ ರೀತಿ ನೋಡಬೇಡಿ, ಅದು ಒಂದು ಕಾಯಿಲೆ ಮಾತ್ರ. ಆ ರೋಗಿಗೆ‌ ಕಿರುಕುಳ ನೀಡಬೇಡಿ ಎಂದು ಮನವಿ ಮಾಡಿದರು.

ಲಾಕ್ ಡೌನ್ ಇಲ್ಲ, ಲಾಕ್‌ಡೌನ್ ಇಲ್ಲ :ಸರ್ಕಾರ ಲಾಕ್‌ಡೌನ್ ಮೂಡ್‌ನಲ್ಲಿ ಇಲ್ಲ. ಲಾಕ್‌ಡೌನ್ ಮಾಡುವುದೂ ಇಲ್ಲ. ಕೋವಿಡ್ ಜೊತೆ ಅಭಿವೃದ್ಧಿ ಕಾರ್ಯ ಆಗಬೇಕು ಎನ್ನುವುದು ಸರ್ಕಾರದ ನಿಲುವು. ಎಲ್ಲೆಲ್ಲಿ ಕೇಸ್ ಜಾಸ್ತಿ ಇವೆಯೋ ಅಲ್ಲಿ ಸೀಲ್‌ಡೌನ್ ಮಾಡಲಾಗುತ್ತದೆ. ಶಾಸಕರ ಸಲಹೆ ಕೂಡ ಇಡೀ ರಸ್ತೆ ಸೀಲ್‌ಡೌಡ್ ಮಾಡುವುದೇ ಆಗಿದೆ. ಅದು ನ್ಯಾಯಯುತವೂ ಹೌದು, ಈ ನಿಟ್ಟಿನಲ್ಲಿ ಸರ್ಕಾರ ಮುಂದುವರೆಯಲಿದೆ ಎಂದರು.

25 ಲಕ್ಷ ರೂ.ಗಳನ್ನು ಬೆಂಗಳೂರಿನ ಪ್ರತಿ ವಾರ್ಡ್​​ಗೆ ಮೀಸಲಿರಿಸಿದ್ದೇವೆ. ಸೀಲ್‌ಡೌನ್ ವೆಚ್ಚಕ್ಕೆ ಅದನ್ನು ಬಳಕೆ ಮಾಡಲು ಅನುಮತಿ ನೀಡಲು ಪಾಲಿಕೆ ಆಯುಕ್ತರಿಗೆ ಸೂಚನೆ ನೀಡಲಾಗುತ್ತದೆ. ಆ ಹಣವನ್ನು ಕೋವಿಡ್ ಕೇರ್‌ಗೆ ಸದುಪಯೋಗ ಮಾಡಲು ಮನವಿ ಮಾಡಿದರು. ಖಾಸಗಿ ಆಸ್ಪತ್ರೆ ದರ ನಿಗದಿಪಡಿಸಲಾಗಿದೆ. ಸರ್ಕಾರಕ್ಕೆ ಈ ಬಗ್ಗೆ ಸಂಪೂರ್ಣ ಅಧಿಕಾರ ಇದೆ, ತುರ್ತು ಸ್ಥಿತಿಯಲ್ಲಿ ಸರ್ಕಾರ ತೆಗೆದುಕೊಳ್ಳುವ ನಿರ್ಧಾರವನ್ನು ಅವರು ಒಪ್ಪಲೇಬೇಕು, ಒಪ್ಪಿದ್ದಾರೆ, ಈಗ ಮತ್ತೆ ಅವರೊಂದಿಗೆ ಮಾತುಕತೆ ನಡೆಸಲಾಗುತ್ತದೆ. ನಮ್ಮ‌ ದರಕ್ಕೆ‌ ಚಿಕಿತ್ಸೆ ನೀಡಲು ಒಪ್ಪದೇ ಇದ್ದಲ್ಲಿ ಅಂತಹ ಆಸ್ಪತ್ರೆ ವಿರುದ್ಧ ಕ್ರಮಕೈಗೊಳ್ಳಲಾಗುತ್ತದೆ ಎಂದರು.

ಕೋವಿಡ್ ವಿಪತ್ತು ನಿರ್ವಹಣೆ ಅಡಿಯಲ್ಲಿ ಘೋಷಣೆ ಮಾಡಲಾಗಿದೆ, ಸರ್ಕಾರ ಗುರುತಿಸಿದ ಆಸ್ಪತ್ರೆ, ಸಿಬ್ಬಂದಿ, ವೈದ್ಯರು, ನರ್ಸ್ ಇದನ್ನು ವಿರೋಧಿಸಲು ಬರಲ್ಲ, ಒಪ್ಪಿಕೊಂಡು ಕೆಲಸ ಮಾಡಲೇಬೇಕು, ಇಲ್ಲದಿದ್ದರೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಬಿಜೆಪಿಯಲ್ಲಿ ಅಸಮಧಾನ ಇಲ್ಲ :ಅಶೋಕ್ ಜವಾಬ್ದಾರಿ ತೆಗೆದುಕೊಂಡರೆ ಅಲ್ಲಿ ವಿವಾದ ಇರಲ್ಲ, ಸಮಸ್ಯೆ ಉದ್ಭವ ಆಗಲ್ಲ. ಯಾರು ಉಸ್ತುವಾರಿ ಎನ್ನುವುದು ಮುಖ್ಯ ಅಲ್ಲ, ಜನರ ಸಮಸ್ಯೆ ಪರಿಹಾರ ಮುಖ್ಯ, ಎಲ್ಲಾ ಸಚಿವರ, ಶಾಸಕರ ಸಹಕಾರ ಪಡೆದು ಮುನ್ನಡೆಯುತ್ತೇನೆ ಎಂದು ಕೋವಿಡ್ ಉಸ್ತುವಾರಿ ಸಿಕ್ಕಿರುವುದಕ್ಕೆ ಪಕ್ಷದಲ್ಲಿ ಅಸಮeಧಾನ ವ್ಯಕ್ತವಾಗಿದೆ ಎನ್ನುವ ಕುರಿತು ತಮ್ಮದೇ ಶೈಲಿಯಲ್ಲಿ ಉತ್ತರಿಸಿದರು.

ABOUT THE AUTHOR

...view details