ಕರ್ನಾಟಕ

karnataka

By

Published : Apr 18, 2021, 4:03 AM IST

Updated : Apr 18, 2021, 6:33 AM IST

ETV Bharat / state

ಬಿಡಿಎ ಆಯುಕ್ತ ಮಹದೇವ್‌ಗೆ ನಿವೃತ್ತಿ ಸಂಕಷ್ಟ : ತಮ್ಮ ಮನವಿ ಪರಿಗಣಿಸುವಂತೆ ಸಿಎಂಗೂ ಪತ್ರ

ಬಿಡಿಎ ಆಯುಕ್ತ ಮಹದೇವ್‌ ಅವರಿಗೆ ನಿವೃತ್ತಿ ಸಂಕಷ್ಟ ಎದುರಾಗಿದ್ದು, ತಮ್ಮ ಮನವಿ ಪರಿಗಣಿಸುವಂತೆ ಸಿಎಂಗೆ ಪತ್ರ ಬರೆದಿದ್ದಾರೆ.

retirement issue, retirement issue: bda Mahadev wrote latter to CM Yadiyurappa, retirement issue: bda_Mahadev wrote latter to CM Yadiyurappa news,  ನಿವೃತ್ತಿ ವಿವಾದ, ನಿವೃತ್ತಿ ವಿವಾದ ಸುದ್ದಿ, ಬಿಡಿಎ ಆಯುಕ್ತ ಮಹದೇವ್‌ಗೆ ನಿವೃತ್ತಿ ಸಂಕಷ್ಟ, ಸಿಎಂ ಯಡಿಯೂರಪ್ಪರಿಗೆ ಪತ್ರ ಬರೆದ ಮಹಾದೇವ್​, ಸಿಎಂ ಯಡಿಯೂರಪ್ಪರಿಗೆ ಪತ್ರ ಬರೆದ ಮಹಾದೇವ್ ಸುದ್ದಿ,
ತಮ್ಮ ಮನವಿ ಪರಿಗಣಿಸುವಂತೆ ಸಿಎಂಗೂ ಪತ್ರ

ಬೆಂಗಳೂರು : ಬಿಡಿಎ ಅಧ್ಯಕ್ಷ ಮಹದೇವ್ ಅವರಿಗೆ ತಿಂಗಳಾಂತ್ಯದಲ್ಲಿ ಸರ್ಕಾರಿ ಸೇವೆಯಿಂದ ನಿವೃತ್ತಿ ಆಗಲೇಬೇಕಾದ ಸಂಕಷ್ಟ ಇದೀಗ ಎದುರಾಗಿದೆ. ಆದ್ರೆ ನಿವೃತ್ತಿ ಅಂಚಿನಲ್ಲಿರುವ ಇವರು, ಇನ್ನೂ ಒಂದೂವರೆ ವರ್ಷಗಳ ಕಾಲ ಅಧಿಕಾರದಲ್ಲಿರಬೇಕೆಂದು ಆಶಿಸಿದ್ದಾರೆ. ತಮ್ಮ ಜನ್ಮ ದಿನಾಂಕವನ್ನ ತಿದ್ದುಪಡಿ ಮಾಡುವಂತೆ ಮಾಡಿದ್ದ ಮನವಿಯನ್ನ‌ ಸರ್ಕಾರ ತಳ್ಳಿ ಹಾಕಿದೆ. ಇದರಿಂದ ಮಹದೇವ್‌ಗೆ ಸಂಕಷ್ಟ ಎದುರಾಗಿದೆ.

ತಮ್ಮ ಮನವಿ ಪರಿಗಣಿಸುವಂತೆ ಸಿಎಂಗೂ ಪತ್ರ

ತಮ್ಮ ಜನ್ಮ ದಿನಾಂಕ ದಾಖಲೆಗಳಲ್ಲಿ ತಪ್ಪಾಗಿದೆ. ಹೀಗಾಗಿ ಅದನ್ನು ವಂಶವೃಕ್ಷದ ಪ್ರಕಾರ ಸರಿಪಡಿಸಿ ಸೇವಾವಧಿಯನ್ನು ವಿಸ್ತರಿಸಬೇಕು ಎಂದು ಈ ಮೊದಲು ಮಹದೇವ್ ಕೇಂದ್ರಕ್ಕೆ ಮನವಿ ಮಾಡಿದ್ದರು‌. ಈ ಬಗ್ಗೆ ಕೇಂದ್ರ ಕಾರ್ಮಿಕ ಮತ್ತು ಸಿಬ್ಬಂದಿ ಇಲಾಖೆ ಅಪರ ಕಾರ್ಯದರ್ಶಿ ಸಂದೀಪ್ ಕುಮಾರ್ ಸಿನ್ಹಾ, ರಾಜ್ಯ ಸರ್ಕಾರದ ಸಿಬ್ಬಂದಿ ಮತ್ತು ನೇಮಕಾತಿ ಇಲಾಖೆ ಪ್ರಧಾನ ಕಾರ್ಯದರ್ಶಿಯವರಿಗೆ ಏಪ್ರಿಲ್ 9ರಂದು ಪತ್ರ ಬರೆದು ಮಹದೇವ್‌ರ ಮನವಿಯನ್ನು ಪರಿಗಣಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದರು.

ಡಾ.ಮಹದೇವ್‌ರ ಸೇವಾ ದಾಖಲೆಗಳಲ್ಲಿ ಅವರ ಜನ್ಮ ದಿನಾಂಕ 1961ರ ಏಪ್ರಿಲ್ 8 ಎಂದು ದಾಖಲಾಗಿದೆ. ಈ ಪ್ರಕಾರ ಮಹದೇವ್, ಏಪ್ರಿಲ್ ತಿಂಗಳಾಂತ್ಯದಲ್ಲಿ ಸರ್ಕಾರಿ ಸೇವೆಯಿಂದ ನಿವೃತ್ತಿ ಹೊಂದಬೇಕಿದೆ. ಆದರೆ, ಅವರ ವಂಶವೃಕ್ಷ ಮತ್ತು ಜಾತಕದ ಪ್ರಕಾರ ಇವರ ಜನ್ಮ ದಿನಾಂಕ 1962ರ ಸೆಪ್ಟಂಬರ್ 28 ಎಂದು ದಾಖಲಾಗಿದೆ ಎಂದು ಹೇಳಿಕೊಂಡಿದ್ದು. ಇದನ್ನು ಪರಿಗಣಿಸಿ, ತಮ್ಮ ಸೇವೆಯನ್ನು ವಿಸ್ತರಿಸಿ ಎಂದು ಕೇಂದ್ರ ಆಡಳಿತ ನ್ಯಾಯಮಂಡಳಿಗೆ ಮನವಿ ಮಾಡಿದ್ದರು.

ತಮ್ಮ ಮನವಿ ಪರಿಗಣಿಸುವಂತೆ ಸಿಎಂಗೂ ಪತ್ರ

ಈ ವಿಷಯಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದ ನ್ಯಾಯಮಂಡಳಿ, ಅರ್ಜಿಯನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿತ್ತು. ಮಹದೇವ್ ಅವರು, ಸಿಎಂ ಬಿ.ಎಸ್ ಯಡಿಯೂರಪ್ಪಗೂ ಸೇವಾವಧಿ ವಿಸ್ತರಿಸುವಂತೆ ಮನವಿ ಮಾಡಿದ್ದರು. ಅವರೂ ಕೂಡ, ಕೇಂದ್ರ ನ್ಯಾಯ ಮಂಡಳಿಯ ಆದೇಶದ ಪ್ರಕಾರ ಜನ್ಮ ದಿನಾಂಕದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮುಖ್ಯಕಾರ್ಯದರ್ಶಿಗೆ ಸೂಚಿಸಿದ್ದರು.

ಆದ್ರೆ ಮಹದೇವ್‌ ಮನವಿಯನ್ನ ಕೇಂದ್ರ ಕಾರ್ಮಿಕ ಮತ್ತು ಸಿಬ್ಬಂದಿ ಇಲಾಖೆ ಅಪರ ಕಾರ್ಯದರ್ಶಿ ಸಂದೀಪ್ ಕುಮಾರ್ ಸಿನ್ಹಾ ಮಾತ್ರ ತಳ್ಳಿ ಹಾಕಿದ್ದಾರೆ. ಮಹದೇವ್‌ರಿಂದ ಬಂದಿರುವ ಪತ್ರ ಸೂಕ್ತವಾದ ಮಾರ್ಗದಲ್ಲಿ ಬಂದಿಲ್ಲ. ಮನವಿಗೆ ಸಂಬಂಧಿಸಿದಂತೆ ಅರ್ಜಿದಾರರು ಯಾವುದೇ ಪೂರಕ ದಾಖಲೆಗಳನ್ನು ಒದಗಿಸಿಲ್ಲ ಎಂದು ಸಿನ್ಹಾ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

Last Updated : Apr 18, 2021, 6:33 AM IST

ABOUT THE AUTHOR

...view details