ಕರ್ನಾಟಕ

karnataka

ETV Bharat / state

ಬೆಳಗೆರೆ ಮಧ್ಯರಾತ್ರಿ ಬಂದು ರೌಡಿಗಳ ಮಾಹಿತಿ ಕಲೆ ಹಾಕ್ತಿದ್ದರು: ರವಿ ನೆನಪಿಸಿಕೊಂಡ ಟೈಗರ್​ - Retired Tiger Ashok Kumar condolence to ravi belagere death

ಖ್ಯಾತ ಪತ್ರಕರ್ತ ರವಿಬೆಳಗೆರೆ ಇಂದು ನಿಧನರಾಗಿದ್ದು, ಹೀಗಾಗಿ ಬಹಳಷ್ಟು ಸಂತಾಪಗಳು ಎಲ್ಲೆಡೆಯಿಂದ ಕೇಳಿ ಬರ್ತಿದೆ. ತನಿಖಾ ವರದಿಗಾರಿಕೆಯಲ್ಲಿ ತನ್ನದೇ ಛಾಪು ಮೂಡಿಸಿದ ರವಿ ಬೆಳೆಗೆರೆ ಪೊಲೀಸ್ ಇಲಾಖೆಯಲ್ಲಿ ಕೂಡ ಬಹಳ ಹಿರಿಯ ಅಧಿಕಾರಿಗಳು, ನಿವೃತ್ತ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಅಚ್ಚು ಮೆಚ್ಚಾಗಿದ್ದರು.

ravi-belagere
ರವಿಬೆಳೆಗೆರೆ

By

Published : Nov 13, 2020, 1:59 PM IST

ಬೆಂಗಳೂರು: ಇಂದು ಮುಂಜಾನೆ ಐದು ಗಂಟೆ ಸುಮಾರಿಗೆ ಆತ್ಮೀಯ, ಮಿತ್ರ ಪತ್ರಕರ್ತ ರವಿ ಬೆಳಗೆರೆಯವರು ನಿಧನರಾದರು ಅನ್ನೋ ವಿಚಾರ ತಿಳಿಯಿತು. ಇದರಿಂದ ಮನಸ್ಸಿಗೆ ಬಹಳ ದುಃಖವಾಯಿತು. ಆದರೆ ಸದ್ಯ ಬೆಂಗಳೂರಿನಲ್ಲಿ ಇಲ್ಲದೇ ಇರುವ ಕಾರಣ ಅಂತಿಮ ದರ್ಶನ ಮಾಡಲು ಸಾಧ್ಯವಿಲ್ಲ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ನಿವೃತ ಹಿರಿಯ ಪೊಲೀಸ್​ ಅಧಿಕಾರಿ ಟೈಗರ್ ಅಶೋಕ್ ಕುಮಾರ್ ಸಂತಾಪ ಸೂಚಿಸಿದ್ದಾರೆ.

ನಿವೃತ್ತ ಟೈಗರ್ ಅಶೋಕ್ ಕುಮಾರ್ ರವಿ ಬೆಳಗೆರೆ ಬಗ್ಗೆ ಮಾತನಾಡಿದ್ದಾರೆ.
ವೀರಪ್ಪನ್ ಕಾರ್ಯಾಚರಣೆ ಸಂದರ್ಭದಲ್ಲಿ ಮಲೆಮಹಾದೇಶ್ವರ ಬೆಟ್ಟದಲ್ಲಿ ಪರಿಚಯವಾದ ರವಿಬೆಳೆಗೆರೆ, ತನಿಖೆಯ ಬಗ್ಗೆ ಮಾಹಿತಿ ಪಡೆದು ಫೋಟೊ, ಆರ್ಟಿಕಲ್ ಬಹಳ ಚೆನ್ನಾಗಿ ನಿರೂಪಣೆ ಮಾಡಿದ್ದರು. ಅವರ ಬರಹದ ಶೈಲಿ, ಓದಿಸಿಕೊಂಡು ಹೋಗ್ತಿದ್ದ ರೀತಿ ಬಹಳ ಅದ್ಭುತವಾಗಿತ್ತು. ಬೆಂಗಳೂರು ಕೆಂಗೇರಿ ಪೊಲೀಸ್ ಠಾಣೆಗೆ ಇನ್ಸ್​ಪೆಕ್ಟರ್​​ ಆಗಿ ಬಂದಾಗ ಕೂಡ ರವಿ ಬೆಳೆಗೆರೆ ನನ್ನನ್ನು ಭೇಟಿಯಾಗಿದ್ರು. ನಾನು ನೈಟ್ ರೌಂಡ್ಸ್ ಮಾಡ್ತಿರುವಾಗ ಮಧ್ಯರಾತ್ರಿ ಬಂದು ಮಾಹಿತಿ ಪಡಿತಿದ್ರು. ಹಾಗೆ ಕೆಲ ರೌಡಿಗಳ ಜೀವನ ಚರಿತ್ರೆ ಬರೆಯಲು ಮಾಹಿತಿ ಕಲೆ ಹಾಕಲು ನನ್ನ ಸಹಾಯ ಕೇಳ್ತಿದ್ರು ಎಂದಿದ್ದಾರೆ.

ಅಶೋಕ್ ಕುಮಾರ್ ಎನ್​​ಕೌಂಟರ್​ಗೆ ಬಹಳ ಹೆಸರುವಾಸಿಯಾದ ವ್ಯಕ್ತಿ. ಸದ್ಯ ಪೊಲೀಸ್ ಇಲಾಖೆಯಲ್ಲಿ ನಿವೃತ್ತಿಯಾಗಿದ್ದು, ಇವರ ಕುರಿತ ಕೆಲ ಬರವಣಿಗೆಯನ್ನ ಕೂಡ ರವಿ ಬೆಳಗೆರೆ ಬರೆದಿದ್ರು.

For All Latest Updates

ABOUT THE AUTHOR

...view details