ಬೆಂಗಳೂರು:ರಾಜ್ಯಾದ್ಯಂತ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದೆ. ಇದರ ನಡುವೆ ಜವಾಬ್ದಾರಿಯುವ ಹುದ್ದೆಯಲ್ಲಿರುವ ರಾಜಕೀಯ ನಾಯಕರು ಬಂಡಾಯ ಎದ್ದಿರುವುದು ಸರಿಯಲ್ಲ. ಅನ್ಯಾಯವಾಗಿದ್ರೆ ಬೇರೆ ದಾರಿಯಿದೆ. ಮೊದಲು ಜನರಿಗಾಗಿ ಕೆಲಸ ಮಾಡುವಂತೆ ಹಿರಿಯ ನಿವೃತ್ತ ಅಧಿಕಾರಿ ಮಾಲಗತ್ತಿ ತಿಳಿಸಿದರು.
ಈ ಕುರಿತಂತೆ ಹಿರಿಯ ನಿವೃತ್ತ ಪೊಲೀಸ್ ಅಧಿಕಾರಿ ಬಸವರಾಜ ಮಾಲಗತ್ತಿ ಮಾತನಾಡಿ, ಮಹಾಮಾರಿಯಿಂದಾಗಿ ಜನರ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಮತ್ತೊಂದೆಡೆ ಉದ್ಯೋಗವಿಲ್ಲದೆ ಜನರು ಪರದಾಡುತ್ತಿದ್ದಾರೆ. ಇಂತಹ ಸಮಯದಲ್ಲಿ ರಾಜ್ಯ ಜನತೆಯ ಸಮಸ್ಯೆ ಪರಿಹರಿಸಬೇಕಾದ ರಾಜಕಾರಣಿಗಳು ಅಧಿಕಾರ ದಾಹಕ್ಕೆ ಜೋತು ಬಿದ್ದಿದ್ದು, ನಾಯಕರು ಸರ್ಕಾರದ ಸವಲತ್ತುಗಳನ್ನು ತಮ್ಮ ಜೇಬಿಗೆ ತುಂಬಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.