ಬೆಂಗಳೂರು: ರಾಜ್ಯದಲ್ಲಿ ಉಟಾಗಿರುವ ಭೀಕರ ಪ್ರವಾಹದಿಂದ ಮನೆ ಹಾಗೂ ಜಾನುವಾರು ಕಳೆದುಕೊಂಡು ಜನ ನಿರಾಶ್ರಿತರಾಗಿದ್ದು, ಈ ಸಂಬಂಧ ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘವು ತಮ್ಮ ಒಂದು ದಿನದ ಪಿಂಚಣಿ ಹಣವನ್ನು ಪ್ರವಾಹಪೀಡಿತರಿಗೆ ನೀಡಲು ನಿರ್ಧರಿಸಿದೆ ಎಂದು ಸಂಘದ ಅಧ್ಯಕ್ಷ ಡಾ.ಎಲ್.ಬೈರಪ್ಪ ತಿಳಿಸಿದ್ದಾರೆ.
ಪ್ರವಾಹ ಪೀಡಿತರಿಗೆ ನೆರವು : ಒಂದು ದಿನದ ಪಿಂಚಣಿ ಕಡಿತಗೊಳಿಸಿ ಎಂದ ನಿವೃತ್ತ ಸರ್ಕಾರಿ ನೌಕರರು - ಭೀಕರ ಪ್ರವಾಹ
ರಾಜ್ಯದಲ್ಲಿ ಉಟಾಗಿರುವ ಭೀಕರ ಪ್ರವಾಹದಿಂದ ಮನೆ ಹಾಗೂ ಜಾನುವಾರುಗಳನ್ನು ಕಳೆದುಕೊಂಡು ಜನ ನಿರಾಶ್ರಿತರಾಗಿದ್ದು, ಇವರಿಗೆ ನೆರವಾಗಲು ಕರ್ನಾಟಕ ರಾಜ್ಯ ನಿವೃತ್ತ ನೌಕರರು ತಮ್ಮ ಒಂದು ದಿನದ ಪಿಂಚಣಿ ಹಣವನ್ನು ಪ್ರವಾಹಪೀಡಿತರಿಗೆ ನೀಡಲು ನಿರ್ಧರಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಮಟ್ಟದ ಕಾರ್ಯಕಾರಿ ಸಮಿತಿ ಸಭೆ ನಡೆಸಿ ಈ ನಿರ್ಣಯ ಕೈಗೊಳ್ಳಲಾಗಿದೆ. ರಾಜ್ಯದಲ್ಲಿ 4.20 ಲಕ್ಷ ಸರ್ಕಾರಿ ಪಿಂಚಣಿದಾರರಿದ್ದು, ಒಂದು ದಿನದ ಪಿಂಚಣಿ ಹಣ ಅಂದರೆ ಸುಮಾರು 30 ಕೋಟಿ ರೂ. ನಿರಾಶ್ರಿತರಿಗೆ ಕೊಡಲಾಗುವುದು. ಹೀಗಾಗಿ ಸೆಪ್ಟಂಬರ್ ತಿಂಗಳಿನ ಪಿಂಚಣಿಯಲ್ಲಿ ಒಂದು ದಿನದ ಪಿಂಚಣಿ ಕಡಿತಗೊಳಿಸಲು ಸರ್ಕಾರ ಕೂಡಲೇ ಆದೇಶ ಹೊರಡಿಸಬೇಕೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಪತ್ರ ಸಲ್ಲಿಸಲಾಗಿದೆ ಎಂದರು.
ಇದೇ ವೇಳೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ನಿವೃತ್ತ ನೌಕರರ ಸಂಘದ ಸಹಭಾಗಿತ್ವದಲ್ಲಿ ಆ.23 ರಂದು ಬೆಳಗ್ಗೆ 11 ಗಂಟೆಗೆ ರಾಜ್ಯ ಸರ್ಕಾರಿ ನೌಕರರ ಭವನದಲ್ಲಿ ಪಿಂಚಣಿ ಅದಾಲತ್ ನಡೆಯಲಿದೆ ಎಂದು ಮಾಹಿತಿ ನೀಡಿದರು.