ಬೆಂಗಳೂರು: ಕೊರೊನಾದಂತಹ ಸಂದಿಗ್ಧ ಪರಿಸ್ಥಿತಿಯ ನಡುವೆಯೂ ದಿಟ್ಟತನದಿಂದ ಉತ್ತಮವಾಗಿ ಕೆಲಸ ಮಾಡಿದ್ದ ಹೆಣ್ಣೂರು ಪೊಲೀಸ್ ಠಾಣೆಯ ಮಹಿಳಾ ಕಾನ್ಸ್ಟೇಬಲ್ ಚೆನ್ನಮ್ಮ ಅವರ ಕರ್ತವ್ಯವನ್ನು ಮೆಚ್ಚಿ ನಿವೃತ್ತ ಡಿಜಿ ಅಜಯ್ ಕುಮಾರ್ ಸಿಂಗ್ ಗೌರವಿಸಿದ್ದಾರೆ.
ಮಹಿಳಾ ಹೆಡ್ಕಾನ್ಸ್ಟೇಬಲ್ ಕಾರ್ಯಕ್ಕೆ ನಿವೃತ್ತ ಡಿಜಿ ಅಜಯ್ ಕುಮಾರ್ ಸಿಂಗ್ ಮೆಚ್ಚುಗೆ - Retired DG Ajay Kumar Singh News
ಕೊರೊನಾ ವಾರಿಯರ್ ಆಗಿ ಕಾರ್ಯ ನಿರ್ವಹಿಸಿದ್ದ ಮಹಿಳಾ ಕಾನ್ಸ್ಟೇಬಲ್ ಕಾರ್ಯವನ್ನು ಮೆಚ್ಚಿ ನಿವೃತ್ತ ಡಿಜಿ ಅಜಯ್ ಕುಮಾರ್ ಸಿಂಗ್ ಅವರು, ಚೆನ್ಮಮ್ಮ ಅವರಿಗೆ ಸನ್ಮಾನಿಸಿ ಐದು ಸಾವಿರ ನಗದು ನೀಡಿ ಪ್ರಶಂಸೆ ವ್ಯಕ್ತಪಡಿಸಿದರು.
ಲಾಕ್ಡೌನ್ ವೇಳೆ ತಮ್ಮ ಠಾಣಾ ವ್ಯಾಪ್ತಿಯಲ್ಲಿ ಶ್ರಮಿಸಿದ್ದ ಚೆನ್ನಮ್ಮ ಕೆಲಸವನ್ನು ನೋಡಿ ಇತ್ತೀಚೆಗೆ ಚಂದನಾ ವಾಹಿನಿ ಅತ್ಯುತ್ತಮ ಕೊರೊನಾ ವಾರಿಯರ್ಸ್ಗಳಾಗಿ ಪ್ರಶಸ್ತಿ ನೀಡಿ ಗೌರವಿಸಿತ್ತು. ಇದನ್ನು ಕಂಡ ನಿವೃತ್ತ ಐಪಿಎಸ್ ಅಧಿಕಾರಿ ಅಜಯ್ ಕುಮಾರ್ ಸಿಂಗ್ ಇಂದು ನಗರ ಪೂರ್ವ ಡಿಸಿಪಿ ಕಚೇರಿಗೆ ಬಂದು ಡಿಸಿಪಿ ಶರಣಪ್ಪ ನೇತೃತ್ವದಲ್ಲಿ ಚೆನ್ಮಮ್ಮ ಅವರನ್ನು ಸನ್ಮಾನಿಸಿ ಐದು ಸಾವಿರ ನಗದು ನೀಡಿ ಪ್ರಶಂಸೆ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಅವರು, ಪೊಲೀಸರ ಮನೋಬಲ ಹೆಚ್ಚಿಸುವ ನಿಟ್ಟಿನಲ್ಲಿ ಮಹಿಳಾ ಕಾನ್ಸ್ಟೇಬಲ್ ಚೆನ್ನಮ್ಮ ಅವರನ್ನು ಗೌರವಿಸಲಾಗಿದೆ. ಇದೇ ರೀತಿ ಎಲ್ಲರೂ ಉತ್ತಮವಾಗಿ ಕೆಲಸ ಮಾಡಿ ಎಂದು ಶುಭ ಹಾರೈಸಿದರು.