ಬೆಂಗಳೂರು:ಬಹುಮನಿ ಸುಲ್ತಾನರ ಕಾಲದಲ್ಲಿ ಕೊರೆದಿರುವ ಬೀದರ್ನ ವಿಶ್ವವಿಖ್ಯಾತ ಕರೇಜ್ ಸುರಂಗ ಬಾವಿ ಪುನಶ್ಚೇತನದ ಬಗ್ಗೆ ಪರಿಶೀಲನೆ ಮಾಡಲು ಸ್ವತಃ ತಾವೇ ಬೀದರ್ಗೆ ಭೇಟಿ ನೀಡುವುದಾಗಿ ಪ್ರವಾಸೋದ್ಯಮ ಹಾಗೂ ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಸಿಪಿ ಯೋಗೇಶ್ವರ್ ಹೇಳಿದ್ದಾರೆ.
ಪ್ರಶ್ನೋತ್ತರ ಕಲಾಪದಲ್ಲಿ ವಿಧಾನಪರಿಷತ್ನಲ್ಲಿ ಬಿಜೆಪಿ ಸದಸ್ಯ ರಘುನಾಥರಾವ್ ಮಲ್ಕಾಪುರೆ ಅವರು ಕರೇಜ್ ಸಿರಂಗ ಬಾವಿಯ ಪುನರುಜ್ಜೀವನಕ್ಕೆ ಬಿಡುಗಡೆಯಾದ ಅನುದಾನ ಕುರಿತು ಪ್ರಶ್ನೆಗೆ ಉತ್ತರಿಸಿದ ಸಚಿವರು, ಬೀದರ್ ನಗರ ವ್ಯಾಪ್ತಿಯಲ್ಲಿ ಬರುವ ಶಿಕಾರಗ ಮತ್ತು ಕರೇಜ್ ಪುನರುತ್ಥಾನ, ಕರೇಜ್‌ದಲ್ಲಿ ಹೂಳು ತೆಗೆದಯುವುದು, ಸುತ್ತುಗೋಡೆ, ನೀರು ಶುದ್ಧೀಕರಣ ಕಿಂಡಿಗಳ ಸಂರಕ್ಷಣೆ, ಪ್ರವಾಸಿಗರಿಗೆ ಮೂಲಭೂತ ಸೌಕರ್ಯ ಹಾಗು ಉದ್ಯಾನವನ ಕಾಮಗಾರಿಯನ್ನು 2.70 ಕೋಟಿ ವೆಚ್ಚದಲ್ಲಿ ಅನುಷ್ಠಾನಗೊಳಿಸಲು ಮೊದಲ ಕಂತಾಗಿ 50 ಲಕ್ಷಗಳನ್ನು ಜಿಲ್ಲಾಧಿಕಾರಿಗಳ ಖಾತೆಗೆ ಬಿಡುಗಡೆ ಮಾಡಲಾಗಿದೆ ಎಂದರು.