ಬೆಂಗಳೂರು:ಆಯಾ ರಾಜ್ಯದ ಸಮಸ್ಯೆಗಳು ಬೇರೆ ಬೇರೆ. ಹೀಗಾಗಿ ಈ ಫಲಿತಾಂಶ ರಾಜ್ಯದ ಮೇಲೆ ಪರಿಣಾಮ ಬೀರಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು. ವಿಧಾನಸೌಧದ ಮುಂಭಾಗ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಅವರು ಮಾತನಾಡಿದರು. ಗುಜರಾತ್ ಹಾಗೂ ಹಿಮಾಚಲ ಪ್ರದೇಶ ಚುನಾವಣೆಯಲ್ಲಿ ಬಿಜೆಪಿ ಗೆಲುವಿನ ಬಗ್ಗೆ ಮತಗಟ್ಟೆ ಸಮೀಕ್ಷೆ ವಿಚಾರವಾಗಿ ಮಾತನಾಡುತ್ತಾ, ಡಿಸೆಂಬರ್ 8ರ ವರೆಗೆ ಕಾಯೋಣ ಇರಿ ಎಂದರು.
ಆಮ್ ಆದ್ಮಿ ಪಾರ್ಟಿ ಕಾಂಗ್ರೆಸ್ ಮತಗಳನ್ನು ಪಡೆಯುತ್ತಿದೆ ಎಂಬುದು ನಿಜ. ಆಮ್ ಆದ್ಮಿ ಪಾರ್ಟಿ ಈಟಿಂಗ್ ದಿ ಕಾಂಗ್ರೆಸ್ ವೋಟ್ಸ್ ಎಂದು ಅವರು ಪ್ರತಿಕ್ರಿಯಿಸಿದರು.