ಕರ್ನಾಟಕ

karnataka

ETV Bharat / state

ಅಶ್ಲೀಲ ವಿಡಿಯೋ ವೀಕ್ಷಣೆ ಪರಿಣಾಮ: ಪರಿಷತ್​ನಲ್ಲಿ ಎಮ್ಎಲ್​ಸಿಗಳ ಮೊಬೈಲ್ ಬಳಕೆಗೆ ನಿರ್ಬಂಧ..! - ವಿಧಾನ ಪರಿಷತ್​

2011ರ ಜೂನ್ 3ರಲ್ಲಿಯೇ ಕಲಾಪ ನಡೆಯುವ ಸಮಯದಲ್ಲಿ ಸದಸ್ಯರು ಸದನದಲ್ಲಿ ಮೊಬೈಲ್ ಬಳಕೆ ಮಾಡಬಾರದು ಎಂದು ಆದೇಶವಾಗಿತ್ತು. ಆದರೆ ಈಗಲೂ ಸದನದೊಳಗೆ ಆಗಾಗ ಮೊಬೈಲ್‌ಗಳು ರಿಂಗಣಿಸುತ್ತಿವೆ. ಇದು ಕಡೆಯ ಎಚ್ಚರಿಕೆ. ಇನ್ಮುಂದೆ ಕಲಾಪದ ಸಮಯದಲ್ಲಿ ಸದನದೊಳಗೆ ಮೊಬೈಲ್ ತರುವಂತಿಲ್ಲ ಪ್ರಕಟಣೆ ಮೂಲಕ ಆದೇಶಿಸಿದ್ದಾರೆ.

ಪರಿಷತ್​ನಲ್ಲಿ ಎಮ್ಎಲ್​ಸಿಗಳ ಮೊಬೈಲ್ ಬಳಕೆಗೆ ನಿರ್ಬಂಧ
ಪರಿಷತ್​ನಲ್ಲಿ ಎಮ್ಎಲ್​ಸಿಗಳ ಮೊಬೈಲ್ ಬಳಕೆಗೆ ನಿರ್ಬಂಧ

By

Published : Feb 2, 2021, 3:33 AM IST

ಬೆಂಗಳೂರು: ಕಲಾಪ ನಡೆಯುವಾಗ ಪದೇ ಪದೇ ಮೊಬೈಲ್ ರಿಂಗ್ ಆಗುವುದು ಮತ್ತು ಕಾಂಗ್ರೆಸ್ ಸದಸ್ಯ ಪ್ರಕಾಶ್ ರಾಥೋಡ್ ಸದನದಲ್ಲಿ ಅಶ್ಲೀಲ ವಿಡಿಯೋ ವೀಕ್ಷಿಸಿದ ಆರೋಪಕ್ಕೆ ಗುರಿಯಾಗಿರುವ ಹಿನ್ನಲೆಯಲ್ಲಿ ಸದನದಲ್ಲಿ ಸದಸ್ಯರು ಮೊಬೈಲ್ ಬಳಕೆ ಮಾಡದಂತೆ ಸಭಾಪತಿ ಪ್ರತಾಪ್‌ಚಂದ್ರ ಶೆಟ್ಟಿ ಆದೇಶ ಹೊರಡಿಸಿದ್ದಾರೆ.

2011ರ ಜೂನ್ 3ರಲ್ಲಿಯೇ ಕಲಾಪ ನಡೆಯುವ ಸಮಯದಲ್ಲಿ ಸದಸ್ಯರು ಸದನದಲ್ಲಿ ಮೊಬೈಲ್ ಬಳಕೆ ಮಾಡಬಾರದು ಎಂದು ಆದೇಶವಾಗಿತ್ತು. ಆದರೆ ಈಗಲೂ ಸದನದೊಳಗೆ ಆಗಾಗ ಮೊಬೈಲ್‌ಗಳು ರಿಂಗಣಿಸುತ್ತಿವೆ. ಇದು ಕಡೆಯ ಎಚ್ಚರಿಕೆ. ಇನ್ಮುಂದೆ ಕಲಾಪದ ಸಮಯದಲ್ಲಿ ಸದನದೊಳಗೆ ಮೊಬೈಲ್ ತರುವಂತಿಲ್ಲ ಪ್ರಕಟಣೆ ಮೂಲಕ ಆದೇಶಿಸಿದ್ದಾರೆ. ಸದನದ ಕಾರ್ಯ ಕಲಾಪದ ವೇಳೆ ಸದಸ್ಯರ ಮೊಬೈಲ್ ಸ್ವಿಚ್ ಆಫ್ ಆಗಿರಬೇಕು. ಒಂದು ವೇಳೆ ರಿಂಗಣಿಸಿದಲ್ಲಿ ಸೂಕ್ತ ಕ್ರಮ ಜರುಗಿಸಲಾಗುತ್ತದೆ. ಮಾಹಿತಿಗಾಗಿ ಮೊಬೈಲ್ ತರುವುದಾರೆ ಸಭಾಪತಿ ಅವರಿಂದ ಅನುಮತಿ ಪಡೆಯಬೇಕು ಎಂದು ಪ್ರಕಟಣೆ ಬಿಡುಗಡೆ ಮಾಡಿದ್ದಾರೆ.

ಜೂನ್ 29 ರಂದು ವಿಧಾನ ಪರಿಷತ್​ನ ಪ್ರಶ್ನೋತ್ತರ ಕಲಾಪದ ವೇಳೆ ಸದಸ್ಯ ಪ್ರಕಾಶ್ ರಾಥೋಡ್ ಮೊಬೈಲ್‌ ಬಳಕೆ ಮಾಡುತ್ತಿದ್ದರು. ಗ್ಯಾಲರಿಯನ್ನು ಸ್ಕ್ರಾಲ್ ಮಾಡುವಾಗ ಅಶ್ಲೀಲ ವಿಡಿಯೋಗಳ ಚಿತ್ರಗಳು ಕಾಣಿಸಿದ್ದವು. ಖಾಸಗಿ ಸುದ್ದಿ ವಾಹಿನಿಗಳಲ್ಲಿ ಈ ದೃಶ್ಯ ಸೆರೆಯಾಗಿತ್ತು. ಈ ಪ್ರಕರಣವನ್ನು ಇಂದು ನೀತಿ ನಿರೂಪಣಾ ಸಮಿತಿಗೆ ವರ್ಗಾಯಿಸಿ ಸತ್ಯಾಸತ್ಯತೆ ವರದಿ ನೀಡುವಂತೆ ಸೂಚನೆ ನೀಡಲಾಗಿದೆ. ಅದರ ಬೆನ್ನಲ್ಲೇ ಸದನದಲ್ಲಿ ಮೊಬೈಲ್ ಬಳಕೆಗೆ ನಿರ್ಬಂಧ ವಿಧಿಸಲಾಗಿದೆ.

ABOUT THE AUTHOR

...view details