ಕರ್ನಾಟಕ

karnataka

ETV Bharat / state

ಒಮಿಕ್ರೋನ್ ಬಾಧಿತ ದೇಶಗಳ ಪ್ರಜೆಗಳಿಗೆ ನಿರ್ಬಂಧ: ಕೇಂದ್ರಕ್ಕೂ ಮನವಿ ಮಾಡಿದ ಸಿಎಂ ಬೊಮ್ಮಾಯಿ - Omicron affected countries

ರಾಜ್ಯದಲ್ಲಿ ಕೋವಿಡ್ ಪರೀಕ್ಷೆ​ಗಳನ್ನು ಹೆಚ್ಚಿಸಲು ಸೂಚಿಸಲಾಗಿದೆ. ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರವಿದೆ. ವಿದೇಶಿ ಪ್ರಜೆಗಳಿಗೆ ಕೋವಿಡ್‌ ನೆಗೆಟಿವ್ ಬಂದರೆ ಮಾತ್ರ ರಾಜ್ಯ ಪ್ರವೇಶಕ್ಕೆ ಅನುಮತಿಸಲಾಗುತ್ತದೆ. ಒಮಿಕ್ರೋನ್ ಇರುವ ದೇಶಗಳ ಪ್ರಜೆಗಳ ಪ್ರವೇಶಕ್ಕೆ ನಿರ್ಬಂಧ ವಿಧಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೇವೆ ಎಂದು ಸಿಎಂ ತಿಳಿಸಿದರು.

CM Basavaraj Bommai
ಸಿಎಂ ಬಸವರಾಜ ಬೊಮ್ಮಾಯಿ

By

Published : Nov 28, 2021, 11:55 AM IST

ಬೆಂಗಳೂರು: ಒಮಿಕ್ರೋನ್ ಹೊಸ ರೂಪಾಂತರಿ ತಳಿ ಬಹಳ ವೇಗವಾಗಿ ಹರಡುತ್ತದೆ ಎನ್ನಲಾಗಿದೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಬಹಳ ಎಚ್ಚರ ವಹಿಸಿದ್ದೇವೆ. ಒಮಿಕ್ರೋನ್ ಇರುವ ದೇಶಗಳ ಪ್ರಜೆಗಳ ಪ್ರವೇಶಕ್ಕೆ ನಿರ್ಬಂಧಕ್ಕೆ ಕೇಂದ್ರಕ್ಕೂ ಮನವಿ ಮಾಡಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಆರ್.ಟಿ.ನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ಎರಡನೇ ಅಲೆ ನಿಯಂತ್ರಣಕ್ಕೆ ಬಂದಿದೆ ಎನ್ನುವ ಸಂದರ್ಭದಲ್ಲಿ ಬೆಳವಣಿಗೆ ಆಗಿದೆ. ದಕ್ಷಿಣ ಆಫ್ರಿಕಾ, ಹಾಂಕಾಂಗ್ ದೇಶದಲ್ಲಿ ಒಮಿಕ್ರೋನ್ ವೈರಸ್ ಕಂಡು ಬಂದಿದೆ. ಇದು ಯಾವ ರೀತಿ ಪರಿಣಾಮ ಬೀರುತ್ತದೆ ಎಂದು ಗೊತ್ತಿಲ್ಲ, ಆದರೆ ಬಹಳ ವೇಗವಾಗಿ ಹರಡುತ್ತದೆ ಎನ್ನಲಾಗಿದೆ. ಭಾರತದಲ್ಲಿಯೂ ಈ ಬಗ್ಗೆ ಎಚ್ಚರಿಕೆ ವಹಿಸಲಾಗಿದೆ. ಪ್ರಧಾನಿ ಮೋದಿಯವರು ಈಗಾಗಲೇ ನಿನ್ನೆ ಸಭೆ ಮಾಡಿದ್ದಾರೆ. ನಾವೂ ಅಗತ್ಯ ಎಚ್ಚರ ವಹಿಸಿದ್ದೇವೆ, ನಮ್ಮಲ್ಲಿ ಈ ಸೋಂಕು ಕಂಡುಬಂದಿಲ್ಲ ಎಂದರು.

ಧಾರವಾಡ, ಬೆಂಗಳೂರು ಹಾಸ್ಟೆಲ್​ಗಳಲ್ಲಿ ಎಚ್ಚರಿಕೆ ವಹಿಸಲಾಗಿದೆ. ಹಾಸ್ಟೆಲ್​ಗಳನ್ನು ಕಂಟೈನ್ಮೆಂಟ್​ ಝೋನ್ ಆಗಿ ಮಾಡಿದ್ದೇವೆ, ಯಾರಿಗೆ ಪಾಸಿಟಿವ್ ಬಂದಿದೆಯೋ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮೈಸೂರಿನಲ್ಲೂ ಕಂಟೈನ್ಮೆಂಟ್ ಝೋನ್​ ಮಾಡಿ ನಿಗಾ ಇಡುವ ಮೂಲಕ ಹೊಸ ತಳಿಯ ಮೇಲೆ ಗಮನ ಇಟ್ಟಿದ್ದೇವೆ.

ರಾಜ್ಯದಲ್ಲಿ ಕೋವಿಡ್ ಪರೀಕ್ಷೆ​ಗಳನ್ನು ಹೆಚ್ಚಿಸಲು ಸೂಚಿಸಲಾಗಿದೆ. ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರವಿದೆ. ವಿದೇಶಿ ಪ್ರಜೆಗಳಿಗೆ ಕೋವಿಡ್‌ ನೆಗೆಟಿವ್ ಬಂದರೆ ಮಾತ್ರ ರಾಜ್ಯ ಪ್ರವೇಶಕ್ಕೆ ಅನುಮತಿ. ಒಮಿಕ್ರೋನ್ ಇರುವ ದೇಶಗಳ ಪ್ರಜೆಗಳ ಪ್ರವೇಶಕ್ಕೆ ನಿರ್ಬಂಧ ವಿಧಿಸುವಂತೆ ಕೇಂದ್ರಕ್ಕೆ ಮನವಿ ಮಾಡಿದ್ದೇವೆ ಎಂದು ತಿಳಿಸಿದರು.

ಕ್ರಿಸ್‌ಮಸ್ ಮತ್ತು ಹೊಸ ವರ್ಷಾಚರಣೆ ಸಂಭ್ರಮಗಳಿಗೆ ನಿರ್ಬಂಧ ವಿಚಾರದ ಬಗ್ಗೆ ಮುಂದಿನ ದಿನಗಳಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುತ್ತದೆ. ಕೋವಿಡ್ ಬೆಳವಣಿಗೆ ಹೇಗಿರುತ್ತದೆ ಎಂದು ನೋಡಿಕೊಂಡು ನಿರ್ಧಾರ ಮಾಡುತ್ತೇವೆ ಎಂದು ಸಿಎಂ ಹೇಳಿದರು.

'ರಾಜ್ಯದಲ್ಲಿ ಲಸಿಕೆ ಕೊರತೆ ಇಲ್ಲ':

ನಮ್ಮ ರಾಜ್ಯದಲ್ಲಿ ಕೋವಿಡ್ ಲಸಿಕೆ ಕೊರತೆ ಇಲ್ಲ, ನಮ್ಮಲ್ಲಿ ಸದ್ಯ 80 ಲಕ್ಷ ಲಸಿಕೆ ಡೋಸ್‌ ಲಭ್ಯವಿದೆ. ಅಗತ್ಯಕ್ಕೆ ತಕ್ಕಂತೆ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ಹೆಚ್ಚೆಚ್ಚು ವ್ಯಾಕ್ಸಿನೇಷನ್ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಿಎಂ ಬೊಮ್ಮಾಯಿ ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಪ್ರತಿ ಜಿಲ್ಲೆಯಲ್ಲಿ ಕನಿಷ್ಠ ಶೇ.30ರಷ್ಟು ಅರಣ್ಯ ನಿರ್ಮಾಣಕ್ಕೆ ಸಚಿವ ಉಮೇಶ್ ಕತ್ತಿ ಆದೇಶ

ABOUT THE AUTHOR

...view details