ಕರ್ನಾಟಕ

karnataka

ETV Bharat / state

ಬೆಂಗಳೂರಿನಲ್ಲಿ ಮಳೆ ನಿಂತ್ರೂ ದೂರುಗಳು ಮಾತ್ರ ನಿಂತಿಲ್ವಂತೆ! - BESCOM

ಇತ್ತೀಚೆಗೆ ಗಾಳಿ‌ ಸಹಿತ ಸುರಿದ ಭಾರಿ ಮಳೆಗೆ ನಗರದ ಹಲವೆಡೆ ಸಾಕಷ್ಟು ಮರ ಹಾಗೂ ವಿದ್ಯುತ್​ ಕಂಬಗಳು ಧರೆಗುರುಳಿವೆ. ಇವುಗಳ ರಿಪೇರಿ ಮಾತ್ರ ಮಂದಗತಿಯಲ್ಲಿ ಸಾಗುತ್ತಿದ್ದು, ಬೆಸ್ಕಾಂ ಕಚೇರಿಗೆ ನಿತ್ಯ ಸಾವಿರಾರು ದೂರುಗಳು ಬರುತ್ತಿವೆ.

ಗಾಳಿ‌ ಸಹಿತ ಸುರಿದ ಭಾರಿ ಮಳೆಗೆ ಧರೆಗುರುಳಿದ ಮರ

By

Published : Jun 10, 2019, 9:53 PM IST

ಬೆಂಗಳೂರು:ಉದ್ಯಾನ ನಗರಿಯಲ್ಲಿ ಕಳೆದೆರಡು ದಿನಗಳಿಂದ ಮಳೆರಾಯನ‌ ಸದ್ದು ಸ್ವಲ್ಪ ಕಡಿಮೆ ಆಗಿದೆ. ಆದರೆ, ಮಳೆ ನಿಂತರೂ ಮಳೆಯಿಂದಾದ ಅನಾಹುತದ ದೂರುಗಳು ಮಾತ್ರ ಇನ್ನು ಮುಂದುವರೆದಿವೆ.

ಹೌದು, ಕಳೆದೊಂದು ವಾರದಿಂದ ಗಾಳಿ‌ ಸಹಿತ ಸುರಿದ ಭಾರಿ ಮಳೆಗೆ ಮರಗಳು ಧರೆಗುರುಳಿದ್ದವು. ಜೊತೆಗೆ ವಿದ್ಯುತ್​ ಕಂಬಗಳು ನೆಲಕಚ್ಚಿದ್ದವು. ಇದರ ರಿಪೇರಿ ಕೆಲಸಗಳು ಮಾತ್ರ ನಿಧಾನವಾಗಿ ಸಾಗುತ್ತಿದ್ದು, ಈ ಹಿನ್ನೆಲೆ ಬೆಸ್ಕಾಂಗೆ ನಿತ್ಯ ಸಾವಿರಾರು ದೂರುಗಳು ಬರುತ್ತಿವೆ.ನಿನ್ನೆ ಒಂದೇ ದಿನ ಬರೋಬ್ಬರಿ 9534 ಕರೆಗಳು ಬಂದಿವೆ. ನಮ್ಮ ಏರಿಯಾದಲ್ಲಿ ಕಂಬ ಬಿದ್ದಿದೆ, ತೆರವು ಮಾಡಿಲ್ಲ. ಕರೆಂಟ್​ ಕಟ್​ ಆಗಿದೆ, ಇನ್ನು ಕರೆಂಟ್ ಬಂದಿಲ್ಲ ಎಂಬೆಲ್ಲ ದೂರುಗಳು ಬರುತ್ತಿವೆ.

ಗಾಳಿ‌ ಸಹಿತ ಸುರಿದ ಭಾರಿ ಮಳೆಗೆ ಧರೆಗುರುಳಿದ ಮರ

ಬೆಸ್ಕಾಂ ಹೆಲ್ಪ್​ಲೈನ್​ಗೆ 9150 ಕರೆಗಳು ಬಂದಿದ್ದು, 8981 ದೂರುಗಳಿಗೆ ಪರಿಹಾರ ನೀಡಲಾಗಿದೆ.‌ ಆನ್​ಲೈನ್ 12, ಎಸ್​ಎಂಎಸ್​ನಲ್ಲಿ 116 ಮತ್ತು ವಾಟ್ಸಪ್​​ನಲ್ಲಿ 94, ಇ ಮೇಲ್ ಮುಖಾಂತರ ಬಂದ ದೂರಗಳ ಸಂಖ್ಯೆ 75, ಟಿಟರ್​ನಿಂದ 19, ಫೇಸ್​ಬುಕ್​ನಲ್ಲಿ 68 ಸೇರಿದಂತೆ ಒಟ್ಟು 9534 ದೂರುಗಳು ಬಂದಿವೆ. ಅದರಲ್ಲಿ ಒಟ್ಟು 9348 ದೂರಗಳಿಗೆ ಪ್ರತಿಕ್ರಿಯಿಸಿದ್ದು, ಸಮಸ್ಯೆ ಬಗೆಹರಿಸಲಾಗಿದೆ. ಇನ್ನು 186 ದೂರಗಳು ಪೆಂಡಿಂಗ್​ನಲ್ಲಿವೆ ಎನ್ನಲಾಗಿದೆ.

ABOUT THE AUTHOR

...view details