ಕರ್ನಾಟಕ

karnataka

ETV Bharat / state

ಇಂದು ಮಹತ್ವದ ಸಚಿವ ಸಂಪುಟ ಸಭೆ: ಬಜೆಟ್​, ಮೀಸಲಾತಿ ವಿಷಯ ಚರ್ಚೆ - ಸಿಎಂ ಯಡಿಯೂರಪ್ಪ,

ಸಚಿವ ಸಂಪುಟ ಸಭೆಯಲ್ಲಿ ಬಜೆಟ್​ ವಿಷಯ ಸೇರಿದಂತೆ ಮೀಸಲಾತಿ ವಿಷಯ ಚರ್ಚೆಗೆ ಬರಲಿದೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.

reservation issue discussing, reservation issue discussing in Cabinet meeting, reservation issue discussing in Cabinet meeting said CM Yediyurappa, CM Yediyurappa, CM Yediyurappa news, ಮೀಸಲಾತಿ ವಿಚಾರ ಚರ್ಚೆ, ಸಚಿವ ಸಂಪುಟ ಸಭೆಯಲ್ಲಿ ಮೀಸಲಾತಿ ವಿಚಾರ ಚರ್ಚೆ, ಸಚಿವ ಸಂಪುಟ ಸಭೆಯಲ್ಲಿ ಮೀಸಲಾತಿ ವಿಚಾರ ಚರ್ಚೆ ಇದೆ ಎಂದ ಸಿಎಂ, ಸಿಎಂ ಯಡಿಯೂರಪ್ಪ, ಸಿಎಂ ಯಡಿಯೂರಪ್ಪ ಸುದ್ದಿ,
ಸಚಿವ ಸಂಪುಟ ಸಭೆಯಲ್ಲಿ ಮೀಸಲಾತಿ ವಿಚಾರವೂ ಚರ್ಚೆಗೆ ಬರಲಿದೆ ಎಂದ ಸಿಎಂ

By

Published : Feb 18, 2021, 11:47 AM IST

ಬೆಂಗಳೂರು:ಇಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಮೀಸಲಾತಿ ವಿಚಾರ ಕುರಿತು ಚರ್ಚೆ ಮಾಡಲಿದ್ದೇವೆ ಎಂದು ಸಿಎಂ ಹೇಳಿದ್ದಾರೆ.

ಮೀಸಲಾತಿ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ ಯಡಿಯೂರಪ್ಪ, ಇವತ್ತು ಸಚಿವ ಸಂಪುಟ ಸಭೆ ಇದೆ. ಬಹಳಷ್ಟು ವಿಚಾರಗಳ ಬಗ್ಗೆ ಚರ್ಚೆ ಮಾಡುತ್ತೇವೆ. ಮೀಸಲಾತಿ ವಿಚಾರವಾಗಿಯೂ ಚರ್ಚೆ ಮಾಡುತ್ತೇವೆ ಎಂದರು.

ಸಚಿವ ಸಂಪುಟ ಸಭೆಯಲ್ಲಿ ಮೀಸಲಾತಿ ವಿಚಾರವೂ ಚರ್ಚೆಗೆ ಬರಲಿದೆ ಎಂದ ಸಿಎಂ

ವಾಲ್ಮೀಕಿ ಸಮುದಾಯದ ನಾಯಕರನ್ನು ನಾನೇ ಕರೆಸಿದ್ದೆ. ವಾಲ್ಮೀಕಿ ಸಮುದಾಯದ ನಾಯಕರ ಜೊತೆಗೆ ಚರ್ಚೆ ಮಾಡಿದ್ದೇನೆ. ಸಂವಿಧಾನದ ಚೌಕಟ್ಟಿನಲ್ಲಿ ಚರ್ಚೆ ಮಾಡಿ ನ್ಯಾಯ ಒದಗಿಸಲು ಪ್ರಯತ್ನಿಸುತ್ತೇವೆ ಎಂದು ಹೇಳಿದರು.

ಇಂದು ಬೆಳಗ್ಗೆ ವಾಲ್ಮೀಕಿ‌ ನಾಯಕರ ಜೊತೆ ನಡೆಸಿದ ಸಭೆ ವಿಚಾರವಾಗಿ ಮಾತನಾಡಿ, ಎಲ್ಲ ವಿಷಯಗಳ ಬಗ್ಗೆ ಚರ್ಚೆ ಮಾಡಿದ್ದೇನೆ. ಎಲ್ಲರಿಗೂ ನ್ಯಾಯ ಒದಗಿಸ್ತೇನೆ. ಕಾನೂನು ಚೌಕಟ್ಟಿನಲ್ಲಿ ಏನ್ ತೀರ್ಮಾನ ಕೈಗೊಳ್ಳಲು ಆಗುತ್ತೋ ನೋಡ್ತೇನೆ ಎಂದರು.

ದೇಣಿಗೆ ವಿಚಾರದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಎಂ ಅವರು, ಕುಮಾರಸ್ವಾಮಿ ತಪ್ಪು ಗ್ರಹಿಕೆಯಲ್ಲಿ ಇದ್ದಾರೆ. ತಪ್ಪು ಗ್ರಹಿಕೆಯಲ್ಲಿ‌ ಕುಮಾರಸ್ವಾಮಿ ಮಾತಾಡ್ತಿದ್ದಾರೆ. ಕುಮಾರಸ್ವಾಮಿಗೆ ವಿಷಯ ಮನದಟ್ಟು ಮಾಡ್ತೇವೆ ಎಂದು ತಿಳಿಸಿದರು‌.

ABOUT THE AUTHOR

...view details