ಕರ್ನಾಟಕ

karnataka

ETV Bharat / state

ಭಾಷೆ ಬಗ್ಗೆ ಬಲವಂತ ಮಾಡುವ ಹಕ್ಕು ಯಾರಿಗೂ ಇಲ್ಲ: ಹಿಂದಿ ಹೇರಿಕೆಗೆ 'ಬುದ್ಧಿವಂತ' ಕಿಡಿ - hindi language clash

ನಮಗೆ ಬೇಕು ಎಂದರೇ 4 ಭಾಷೆ ಕಲಿಯುತ್ತೇವೆ. ಯಾರು ಇನ್ನೊಬ್ಬರ ಮೇಲೆ ಭಾಷೆಯನ್ನು ಒತ್ತಾಯಪೂರ್ವಕವಾಗಿ ಹೇರಬಾರದು ಎಂದು ಸ್ಯಾಂಡಲ್​ವುಡ್​ ಸೂಪರ್​ಸ್ಟಾರ್​ ಉಪೇಂದ್ರ ಅವರು ಕೇಂದ್ರ ಸರ್ಕಾರದ ತ್ರಿಭಾಷಾ ನೀತಿ ವಿರುದ್ಧ ಕಿಡಿಕಾರಿದರು.

actor upendra
ನಿರ್ದೇಶಕ ಉಪೇಂದ್ರ

By

Published : Aug 20, 2020, 6:07 PM IST

ಬೆಂಗಳೂರು: ಹಿಂದಿ ಭಾಷೆ ಕಲಿಯುತ್ತೇನೆ. ಆದರೆ, ಅದನ್ನು ಬಲವಂತವಾಗಿ ನನ್ನ ಮೇಲೆ ಹೇರುವ ಹಕ್ಕು ಯಾರಿಗೂ ಇಲ್ಲವೆಂದು ನಟ, ಪ್ರಜಾಕೀಯ ಸಂಸ್ಥಾಪಕ ಹಾಗೂ ನಿರ್ದೇಶಕ ಉಪೇಂದ್ರ ಕೇಂದ್ರದ ತ್ರಿಭಾಷಾ ನೀತಿ ವಿರುದ್ಧ ಕಿಡಿಕಾರಿದ್ದಾರೆ.

ನಾವೆಲ್ಲ ಮುಂಬೈಯಲ್ಲಿ ಶೂಟಿಂಗ್ ಮಾಡುತ್ತೇವೆ. ಹಾಗಾಗಿ ಹಿಂದಿ ಕಲಿಯುತ್ತೇನೆ. ತಮಿಳುನಾಡಿನಲ್ಲಿ ಹೋಗಿ ಕೂಡಾ ಸಿನಿಮಾ ಮಾಡುತ್ತೇವೆ. ಅದರಿಂದ ತಮಿಳು ಭಾಷೆಯನ್ನು ಕಲಿಯುತ್ತೇನೆ. ಇದನ್ನು ಸರ್ಕಾರ ನಮಗೆ ಹೇಳುವ ಅವಶ್ಯಕತೆ ಏನಿದೆ ಎಂದು ಪ್ರಶ್ನಿಸಿದರು.

ನಿರ್ದೇಶಕ ಉಪೇಂದ್ರ

ನಾಯಕರನ್ನು ಅವಲಂಭಿಸುವ ಮನಸ್ಥಿತಿ ಬದಲಾಗಬೇಕು. ನಾವು ನಾಯಕರ ಹಿಂದಿನ ಕುರಿಗಳಾಗಿದ್ದೇವೆ. ಒಂದು ಭಾಷೆಯನ್ನು ಕಲಿಯಿರಿ ಎಂದು ನಮಗೆ ಹೇಳೋಕೆ ಯಾರಿವರು? ಅಲ್ಲದೇ ದ್ವಿಭಾಷೆ ನೀತಿ ನಮಗೂ ಬೇಡ. ಯಾವುದೇ ಭಾಷೆಯನ್ನು ಬಲವಂತವಾಗಿ ನಮ್ಮ ಮೇಲೆ ಹೇರುವುದು ಸಮಂಜಸವಲ್ಲ ಎಂದು ಕುಟುಕಿದರು.

ಕಲಿಯುವುದು ನಮಗೆ ಸಂಬಂಧಪಟ್ಟ ವಿಷಯವಾಗಿದೆ. ತ್ರಿಭಾಷೆ ಕಲಿಯಲೇಬೇಕು ಎಂಬುದು ತಪ್ಪು ನಿರ್ಧಾರ. ಈಗ ಇದರ ಬಗ್ಗೆ ಅಭಿಯಾನ ಮಾಡಲಾಗುತ್ತಿದೆ. ನನಗೆ ಬೇಕು ಎಂದರೇ ನಾಲ್ಕು ಭಾಷೆ ಕಲಿಯುತ್ತೇನೆ. ಯೋಚನೆ ಮಾಡೋಕೆ ಬೇರೆ ವಿಷಯಗಳಿವೆ. ಸರ್ಕಾರ ಇದನ್ನು ಒತ್ತಡ ಹೇರಿ ಮಾಡಿಸುವುದಕ್ಕೆ ಆಗಲ್ಲವೆಂದು ಹಿಂದಿ ಹೇರಿಕೆಗೆ ಉಪ್ಪಿ ಆಕ್ಷೇಪ ವ್ಯಕ್ತಪಡಿಸಿದರು.

ABOUT THE AUTHOR

...view details