ಕರ್ನಾಟಕ

karnataka

ETV Bharat / state

ಸಿದ್ದರಾಮಯ್ಯ ಕೋಲಾರ ಸ್ಪರ್ಧೆ ಸಂಬಂಧ ರಾಹುಲ್​ ಗಾಂಧಿ ಭೇಟಿಯಾಗಿ ಮನವಿ: ಸೀತಾರಾಂ - karnataka assembly election

ಸಿದ್ದರಾಮಯ್ಯನವರ ನಿವಾಸದಲ್ಲಿ ಮಾಜಿ ಸಚಿವ ಎಂಆರ್ ಸೀತಾರಾಂ ನೇತೃತ್ವದಲ್ಲಿ ಸಭೆ ನಡೆದಿದೆ, ಸಿದ್ದರಾಮಯ್ಯ ಜೊತೆಗೆ ಕೋಲಾರದ ನಾಯಕರು ಮಾತುಕತೆ ನಡೆಸಿದ್ದಾರೆ.

request-to-meet-rahul-gandhi-regrding-siddaramaih-constuiency-sitaram
ಸಿದ್ದರಾಮಯ್ಯ ಕೋಲಾರ ಸ್ಪರ್ಧೆ ಸಂಬಂಧ ರಾಹುಲ್​ ಗಾಂಧಿ ಭೇಟಿಯಾಗಿ ಮನವಿ: ಸೀತಾರಾಂ

By

Published : Mar 18, 2023, 6:28 PM IST

ಬೆಂಗಳೂರು: ಸಿದ್ದರಾಮಯ್ಯ ಅವರಿಗೆ ಕೋಲಾರದಲ್ಲಿ ಈಗಲು ವಿಶ್ವಾಸ ಇದೆ. ಆದರೆ ಅರ್ಜಿಯಲ್ಲಿ ಕ್ಷೇತ್ರ ಆಯ್ಕೆ ಹೈಕಮಾಂಡ್​ಗೆ ಬಿಟ್ಟಿದ್ದು ಎಂದಿದ್ದಾರೆ. ರಾಹುಲ್ ಗಾಂಧಿ ಅವರನ್ನು ಈ ಸಂಬಂಧಿಸಿದಂತೆ ಭೇಟಿ ಮಾಡುತ್ತೇವೆ. ಕ್ಷೇತ್ರ ಹದವಾಗಿದೆ, ಈ ಕಾರಣಕ್ಕೆ ಕೋಲಾರದಲ್ಲಿ ಸ್ಪರ್ಧೆ ಮಾಡಿ ಎಂದು ಮನವಿ ಮಾಡಿದ್ದೇವೆ ಎಂದು ಮಾಜಿ ಸಚಿವ ಎಂ ಆರ್​ ಸೀತಾರಂ ಹೇಳಿದರು.

ಶನಿವಾರ ಬೆಳಗ್ಗೆ ಸಿದ್ದರಾಮಯ್ಯನವರ ಶಿವಾನಂದ ವೃತ್ತ ನಿವಾಸದಲ್ಲಿ ಮಾಜಿ ಸಚಿವ ಎಂಆರ್ ಸೀತಾರಾಂ ನೇತೃತ್ವದಲ್ಲಿ ಸಭೆ ನಡೆದಿದೆ. ಸಿದ್ದರಾಮಯ್ಯ ಜೊತೆಗೆ ಕೋಲಾರದ ಕಾಂಗ್ರೆಸ್ ನಾಯಕರ ಮಾತುಕತೆಯ ಬಳಿಕ ಎಂಆರ್ ಸೀತಾರಾಮ್ ಮಾಧ್ಯಮಗಳ ಜತೆ ಮಾತನಾಡಿ, ಸಿದ್ದರಾಮಯ್ಯ ಜೊತೆಗೆ ಕೋಲಾರದ ನಾಯಕರು ಮಾತುಕತೆ ನಡೆಸಿದ್ದೇವೆ. ರಾಹುಲ್ ಗಾಂಧಿ ಹಾಗೂ ಹೈಕಮಾಂಡ್ ತೀರ್ಮಾನಕ್ಕೆ ಬದ್ಧ ಎಂದು ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಕೋಲಾರದಲ್ಲಿ ಸ್ಪರ್ಧೆ ಮಾಡುವುದಾಗಿ ಹೈಕಮಾಂಡ್‌ಗೆ ಹೇಳಬೇಕು ಎಂದು ನಾವೂ ಮನವಿ ಮಾಡಿದ್ದೇವೆ. ಕೋಲಾರ ಸ್ಪರ್ಧೆ ಸುರಕ್ಷಿತ ಎಂದು ನಾವು ಅವರಲ್ಲಿ ಹೇಳಿದ್ದೇವೆ. ನೀವು ನಾಮಪತ್ರ ಸಲ್ಲಿಕೆ ಮಾಡಿ, ನಾವು ನೋಡಿಕೊಳ್ಳುತ್ತೇವೆ ಎಂದಿದ್ದೇವೆ ಎಂದರು.

ಇದನ್ನೂ ಓದಿ :ಸೈಲೆಂಟ್ ಸುನಿಲ್ ಮತ್ತು ಬಿಜೆಪಿಗೆ ಯಾವುದೇ ಸಂಬಂಧವಿಲ್ಲ: ಅಶ್ವತ್ಥನಾರಾಯಣ್

ಸಿದ್ದರಾಮಯ್ಯ ಭೇಟಿಯಾದ ಅಖಂಡ:ಪುಲಕೇಶಿನಗರ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಇಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ. ತಾವು ಪುಲಕೇಶಿನಗರದಿಂದ ಸ್ಪರ್ಧಿಸುವ ಬಗ್ಗೆ ಹಾಗೂ ಇತರರ ಹೆಸರು ಈ ಕ್ಷೇತ್ರದಿಂದ ಕೇಳಿಬರುತ್ತಿರುವ ಬಗ್ಗೆ ಮಾತುಕತೆ ನಡೆಸಿದ್ದಾರೆ. ಅತ್ಯಂತ ಮುಖ್ಯವಾಗಿ ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ್​ ಹಾಗೂ ಮಾಜಿ ಸಚಿವ ಡಾ. ಎಚ್​.ಸಿ. ಮಹದೇವಪ್ಪ ಅವರು ಪುಲಕೇಶಿನಗರಿಂದ ಸ್ಪರ್ಧಿಸಲು ಮುಂದಾಗಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿ ಬರುತ್ತಿದ್ದಂತೇ ಆತಂಕಕ್ಕೆ ಒಳಗಾಗಿರುವ ಅಖಂಡ ನೇರವಾಗಿ ಸಿದ್ದರಾಮಯ್ಯರನ್ನು ಭೇಟಿಯಾಗಿದ್ದಾರೆ.

ಈಗಾಗಲೇ ಕ್ಷೇತ್ರದಲ್ಲಿ ಮಾಜಿ ಶಾಸಕ ಪ್ರಸನ್ನ ಕುಮಾರ್, ಮಾಜಿ ಮೇಯರ್ ಸಂಪತ್​ರಾಜ್ ಸೇರಿದಂತೆ ಹಲವರ ಹೆಸರು ಕೇಳಿಬರುತ್ತಿದೆ. ಈ ಮಧ್ಯೆ ಇನ್ನಷ್ಟು ಹೆಸರು ಸೇರುತ್ತಿರುವುದು ಅಖಂಡ ಶ್ರೀನಿವಾಸಮೂರ್ತಿಗೆ ಆತಂಕ ತರಿಸಿದೆ. ಸಿದ್ದರಾಮಯ್ಯ ಭೇಟಿ ಬಳಿಕ ಮಾತನಾಡಿದ ಶಾಸಕ ಅಖಂಡ ಶ್ರೀನಿವಾಸಮೂರ್ತಿ, ನಮ್ಮ ನಾಯಕರು ಸಿದ್ದರಾಮಯ್ಯ. ಹೀಗಾಗಿ ಅವರನ್ನು ಭೇಟಿ‌ಮಾಡಲು ಬಂದಿದ್ದೆ. ನನಗೆ ವಿಶ್ವಾಸವಿದೆ ನನಗೆ ಟಿಕೆಟ್ ಸಿಗುತ್ತೆ ಅಂತ. ಸಿದ್ದರಾಮಯ್ಯ, ಜಮೀರ್ ಅಹ್ಮದ್ ನನ್ನ ಪರವಾಗಿ ಇದ್ದಾರೆ.

2018ರಲ್ಲಿ ಅತಿ ಹೆಚ್ಚು ಮತಗಳಿಂದ ಗೆದ್ದಿದ್ದೆ. ಈ ಬಾರಿ ಕೂಡ ಹೆಚ್ಚು‌ ಮತಗಳಿಂದ ಗೆಲ್ಲುತ್ತೇನೆ. ಪಕ್ಷ ಅಂದ ಮೇಲೆ ಎಲ್ಲರೂ ಟಿಕೆಟ್ ಕೇಳುತ್ತಾರೆ. ಹಿರಿಯ ನಾಯಕರು ಯಾರು ಪುಲಕೇಶಿ ನಗರ ಟಿಕೆಟ್ ಬಯಸಿಲ್ಲ. ಟಿಕೆಟ್ ನನಗೆ ಸಿಕ್ಕೆ ಸಿಗುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ :ಒಕ್ಕಲಿಗರ ಸಂಘ ಕೂಡಲೇ ಮೂರು ಜನರ ಮೇಲೆ ಎಫ್​ಐಆರ್ ದಾಖಲಿಸಲಿ: ಕೆಪಿಸಿಸಿ ಮಾಧ್ಯಮ ವಕ್ತಾರ ಎಂ. ಲಕ್ಷ್ಮಣ್

ABOUT THE AUTHOR

...view details