ಕರ್ನಾಟಕ

karnataka

ETV Bharat / state

ರಾಜ್ಯದ ಜಿಎಸ್​​ಟಿ ಪರಿಹಾರ ಹಣ ಶೀಘ್ರ ಬಿಡುಗಡೆಗೆ ಮನವಿ.. ಗೃಹ ಸಚಿವ ಸಚಿವ ಬೊಮ್ಮಾಯಿ - Minister Bommayi

ಜಿಎಸ್​ಟಿ ತೆರಿಗೆ ರಿಟರ್ನ್ ಫೈಲಿಂಗ್ ಜುಲೈ ಮಧ್ಯವರೆಗೂ ವಿಸ್ತರಿಸಲಾಗಿದೆ. ಈ ಹಿನ್ನೆಲೆ ಲೇಟ್ ಫೀಯನ್ನು ಶೇ.18 ರಿಂದ 9ಕ್ಕಿಳಿಸಲು ತೀರ್ಮಾನ ಆಗಿದೆ. ಮುಂಬರುವ ದಿನದಲ್ಲಿ ರಾಜ್ಯದ ಆರ್ಥಿಕ ಪರಿಸ್ಥಿತಿ ನೋಡಿಕೊಂಡು ಪರಿಹಾರ ಹಣ ನೀಡುವಲ್ಲಿ ವಿಳಂಬ ಮಾಡಬಾರದು.

ಗೃಹ ಸಚಿವ ಬಸವರಾಜ್ ಬೊಮ್ಮಾಯಿ
ಗೃಹ ಸಚಿವ ಬಸವರಾಜ್ ಬೊಮ್ಮಾಯಿ

By

Published : Jun 12, 2020, 7:04 PM IST

ಬೆಂಗಳೂರು :ಮಾರ್ಚ್​ನಿಂದ ಮೇವರೆಗೆ ಬಾಕಿ ಇರುವ ಜಿಎಸ್​ಟಿ ಪರಿಹಾರ ಹಣ ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೇವೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

ಜಿಎಸ್​​ಟಿ ಕೌನ್ಸಿಲ್ ಸಭೆ ಬಳಿಕ ಮಾತಮಾಡಿದ ಅವರು, ಮಾರ್ಚ್​ನಿಂದ ಮೇವರೆಗೆ 10,208 ಕೋಟಿ ರೂ. ಜಿಎಸ್‌ಟಿ ಹಣ ಬರಬೇಕು. ಕೂಡಲೇ ಹಣ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದೇವೆ. ಅದರಲ್ಲೂ ಮಾರ್ಚ್ ತಿಂಗಳ 1,460 ಕೋಟಿ ರೂ. ಕೂಡಲೇ ಬಿಡುಗಡೆ ಮಾಡುವಂತೆ ಕೇಳಿದ್ದೇವೆ ಎಂದರು.

ಗೃಹ ಸಚಿವ ಬಸವರಾಜ್​ ಬೊಮ್ಮಾಯಿ

ಹಣಕಾಸು ಸಚಿವರು ಡಿಸೆಂಬರ್​ನಿಂದ ಫೆಬ್ರವರಿ ತಿಂಗಳಿನ 4,314 ಕೋಟಿ ನಮ್ಮ ರಾಜ್ಯದ ಪರಿಹಾರ ಹಣ ನೀಡಿದ್ದಾರೆ. ಕೇಂದ್ರದ ಹಣಕಾಸು ಪರಿಸ್ಥಿತಿ ಸರಿ ಇಲ್ಲ. ಇದರ ನಡುವೆಯೂ ರಾಜ್ಯಕ್ಕೆ ಬರಬೇಕಾದ ಜಿಎಸ್​​ಟಿ ಪರಿಹಾರ ಹಣವನ್ನ ನೀಡಬೇಕಿದೆ. ಕೊರೊನಾ ಹಿನ್ನೆಲೆಯಲ್ಲಿ ರಾಜ್ಯ ಆರ್ಥಿಕ ಸಂಕಷ್ಟದಲ್ಲಿ ಇದೆ. ಈ ಬಗ್ಗೆ ಕೇಂದ್ರದ ಹಣಕಾಸು ಸಚಿವರಲ್ಲಿ‌ ಮನವಿ‌ ಮಾಡಿದ್ದೇವೆ ಎಂದರು.

ಜಿಎಸ್​ಟಿ ತೆರಿಗೆ ರಿಟರ್ನ್ ಫೈಲಿಂಗ್ ಜುಲೈ ಮಧ್ಯವರೆಗೂ ವಿಸ್ತರಿಸಲಾಗಿದೆ. ಈ ಹಿನ್ನೆಲೆ ಲೇಟ್ ಫೀಯನ್ನು ಶೇ.18 ರಿಂದ 9ಕ್ಕಿಳಿಸಲು ತೀರ್ಮಾನ ಆಗಿದೆ. ಮುಂಬರುವ ದಿನದಲ್ಲಿ ರಾಜ್ಯದ ಆರ್ಥಿಕ ಪರಿಸ್ಥಿತಿ ನೋಡಿಕೊಂಡು ಪರಿಹಾರ ಹಣ ನೀಡುವಲ್ಲಿ ವಿಳಂಬ ಮಾಡಬಾರದು. ರಾಜ್ಯಕ್ಕೆ ಜಿಎಸ್​​​ಟಿ ಕೌನ್ಸಿಲ್ ಬೇರೆ ಮೂಲಗಳಿಂದ ಹಣ ಪಡೆಯಲು ಮಾರ್ಗ ಹುಡುಕಬೇಕು ಎಂದರು.

ರಾಜ್ಯದ ಜಿಎಸ್​​ಟಿ ಪಾಲು ಇರುವಷ್ಟು ಸಾಲ ಪಡೆಯಲು ಯಾವುದೇ ಷರತ್ತು ಇಲ್ಲದೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದೇವೆ. ಕೇಂದ್ರ ಹಣಕಾಸು ಸಚಿವರು ಪರಿಶೀಲನೆ ನಡೆಸುವ ಭರವಸೆ ನೀಡಿದ್ದಾರೆ ಎಂದರು.

ABOUT THE AUTHOR

...view details