ಕರ್ನಾಟಕ

karnataka

ETV Bharat / state

1670ರಿಂದಲೇ ಕಪಾಲ ಬೆಟ್ಟದಲ್ಲಿ ಕ್ರೈಸ್ತರಿಂದ ರೇಷ್ಮೆ ಕೃಷಿ.. ಸತ್ಯಶೋಧನಾ ವರದಿಯಲ್ಲಿ ಇನ್ನೇನಿದೆ?

ಇತ್ತೀಚೆಗೆ ಕಪಾಲ ಬೆಟ್ಟದಲ್ಲಿ ಏಸು ಪ್ರತಿಮೆ ನಿರ್ಮಾಣ ವಿಚಾರದಲ್ಲಿ ಗೊಂದಲ ಸೃಷ್ಟಿಯಾಗಿತ್ತು. ವಾಸ್ತವ ಸ್ಥಿತಿ ಅರಿಯಲು ಕ್ರಿಸ್ಚಿಯನ್ ಸಮುದಾಯದ ಮುಖಂಡರ ಸತ್ಯ ಶೋಧನಾ ಸಮಿತಿ ರಚಿಸಿ ವರದಿ ಸಿದ್ಧಪಡಿಸಿದ್ದೇವೆ ಎಂದು ವಿಧಾನಪರಿಷತ್ ಸದಸ್ಯ ಐವಾನ್ ಡಿಸೋಜಾ ತಿಳಿಸಿದ್ದಾರೆ.

By

Published : Jan 23, 2020, 2:48 PM IST

Ivan DiSouza
ಐವಾನ್ ಡಿಸೋಜ

ಬೆಂಗಳೂರು:ಇತ್ತೀಚೆಗೆ ಕಪಾಲ ಬೆಟ್ಟದಲ್ಲಿ ಏಸು ಪ್ರತಿಮೆ ನಿರ್ಮಾಣ ವಿಚಾರದಲ್ಲಿ ಗೊಂದಲ ಸೃಷ್ಟಿಯಾಗಿತ್ತು. ವಾಸ್ತವ ಸ್ಥಿತಿ ಅರಿಯಲು ಕ್ರೈಸ್ತ ಸಮುದಾಯದ ಮುಖಂಡರ ಸತ್ಯ ಶೋಧನಾ ಸಮಿತಿ ರಚಿಸಿ ವರದಿ ಸಿದ್ಧಪಡಿಸಲಾಗಿದೆ ಎಂದು ವಿಧಾನಪರಿಷತ್ ಸದಸ್ಯ ಐವಾನ್ ಡಿಸೋಜಾ ತಿಳಿಸಿದ್ದಾರೆ.

ಐವಾನ್ ಡಿಸೋಜ

ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು, ಈ ಸತ್ಯ ಶೋಧನಾ ಸಮಿತಿ ಪ್ರಕರಣ ಸಂಬಂಧ ವರದಿ ಸಿದ್ಧಪಡಿಸಿದೆ. ಈ ವರದಿಯನ್ನು ಸಿಎಂ ಯಡಿಯೂರಪ್ಪ ಮತ್ತು ಕಂದಾಯ ಸಚಿವ ಆರ್ ಅಶೋಕ್​ಗೆ ಸಲ್ಲಿಸ್ತೇವೆ. ಕನಕಪುರ ಹಾರೋಬೆಲೆಯ ಕಪಾಲ ಬೆಟ್ಟದಲ್ಲಿ ಏಸು ಪ್ರತಿಮೆ ನಿರ್ಮಾಣ ವಿಚಾರದಲ್ಲಿ ಅನಗತ್ಯ ಕಾನೂನು ತೊಡಕು ಸೃಷ್ಟಿಸುವ ಕಾರ್ಯ ನಡೆದಿದೆ. ಇಲ್ಲಿನ ಇತಿಹಾಸ ಕೆದಕಿದರೆ ಮತ್ತು ಸ್ಥಳೀಯರ ಅಭಿಪ್ರಾಯ ಸಂಗ್ರಹಿಸಿ ವರದಿ ಸಿದ್ಧಪಡಿಸಿದ್ದೇವೆ ಎಂದರು.

ಕಪಾಲ ಬೆಟ್ಟದಲ್ಲಿ 10 ಎಕರೆ ಭೂಮಿ ಸರ್ಕಾರದಿಂದ ಮಂಜೂರಾಗಿತ್ತು. ಕಪಾಲಬೆಟ್ಟ ಅಭಿವೃದ್ಧಿ ಟ್ರಸ್ಟ್ ಗೆ ಅಧಿಕೃತವಾಗಿ ಮಂಜೂರು ಮಾಡಲಾಗಿತ್ತು. ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರ್ಯಗಳಿಗೆ ಭೂಮಿ ಮಂಜೂರು ಮಾಡಿರುವುದಕ್ಕೆ ಸರ್ಕಾರಿ ದಾಖಲೆಯಲ್ಲಿ ಉಲ್ಲೇಖವಿದೆ. 1670ರಿಂದಲೇ ಕಪಾಲ ಬೆಟ್ಟದಲ್ಲಿ ಕ್ರೈಸ್ತರು ವಾಸ ಮಾಡಲಾರಂಭಿಸಿದ್ದಾರೆ. ಆ ಭಾಗದ ಕ್ರೈಸ್ತರು ರೇಷ್ಮೆ ಬೆಳೆಯುತ್ತಿದ್ದರು. ಬೇರೆ ಸಮುದಾಯಗಳ ಜೊತೆಗೆ ಕ್ರೈಸ್ತರ ಉತ್ತಮ ಸಂಬಂಧ, ಒಡನಾಟ ಇತ್ತು. ಕಪಾಲ ಬೆಟ್ಟ ಅಂತ ಹೆಸರು ಬರಲು ಕಾರಣ ಇದೆ. ಕಳವಾಯಿ ಬೆಟ್ಟದಲ್ಲಿ ಏಸುಕ್ರಿಸ್ತನನ್ನು ಶಿಲುಬೆಗೇರಿಸಲಾಗಿತ್ತು. ಹಾಗಾಗಿ ಆ ಪ್ರದೇಶಕ್ಕೆ ಕಪಾಲ ಬೆಟ್ಟ ಎಂದು ಕರೆಯಲಾಗುತ್ತಿದೆ. ಇದುವರೆಗೆ ಅಲ್ಲಿ ಯಾವುದೇ ವ್ಯಾಜ್ಯ, ಸಮಸ್ಯೆ ಇರಲಿಲ್ಲ. 1661 ರಲ್ಲಿ ಹಾರೋಬೆಲೆಯಲ್ಲಿ ಪ್ರಥಮ ಚರ್ಚ್ ನಿರ್ಮಿಸಲಾಗಿದೆ. ಆಗಲೇ 160 ಕ್ರೈಸ್ತ ಕುಟುಂಬಗಳು ಅಲ್ಲಿ ವಾಸವಾಗಿದ್ದಾರೆ ಎಂದರು.

ಸತ್ಯ ಶೋಧನಾ ಸಮಿತಿಯ ವರದಿಯಲ್ಲಿ ಹಲವು ಅಂಶಗಳಿವೆ: ಕಾವೇರಿ‌ ನೀರಿನ ಸಂಗ್ರಹಕ್ಕೆ ಅಲ್ಲಿ ದೊಡ್ಡ ಟ್ಯಾಂಕ್ ಕಟ್ಟಲಾಗಿದೆ. ಆ ಟ್ಯಾಂಕ್ ನಿರ್ಮಾಣಕ್ಕೆ ಅಗತ್ಯ ಪರಿಕರ, ಸಾಮಾಗ್ರಿ ತೆಗೆದುಕೊಂಡು ಹೋಗಲು ಅದರ ಗುತ್ತಿಗೆದಾರ ನಿರ್ಮಿಸಿದ ರಸ್ತೆ ಅದು. ಏಸು ಪ್ರತಿಮೆಗಾಗಿ ನಿರ್ಮಿಸಿದ ರಸ್ತೆಯಲ್ಲ. ರಸ್ತೆಯನ್ನು ಕಪಾಲಬೆಟ್ಟ ಅಭಿವೃದ್ಧಿ ಟ್ರಸ್ಟ್ ನಿರ್ಮಿಸಿಲ್ಲ. ಇನ್ನು ವಿದ್ಯುತ್ ಸಂಪರ್ಕವನ್ನೂ ಅಧಿಕೃತವಾಗಿಯೇ ಪಡೆದುಕೊಳ್ಳಲಾಗಿದೆ. ವಿದ್ಯುತ್ ಸಂಪರ್ಕ ಅನಧಿಕೃತ ಅಲ್ಲ. ರಾಜಕೀಯ ದುರುದ್ದೇಶಕ್ಕಾಗಿ ಪ್ರಕರಣಕ್ಕೆ ವಿವಾದ ಬಳಿಯಲಾಗಿದೆ. ಗೋಮಾಳ ಭೂಮಿಯನ್ನು ಹಿಂದೂ, ಮುಸ್ಲಿಂ, ಕ್ರೈಸ್ತ ಇತರೇ ಸಮುದಾಯಗಳಿಗೆ ಸರ್ಕಾರ ಮೊದಲಿಂದಲೂ ಮಂಜೂರು ಮಾಡುತ್ತಾ ಬಂದಿದೆ. ಹಾಗೆಯೇ ಕಪಾಲ ಬೆಟ್ಟದಲ್ಲಿ ಕ್ರೈಸ್ತರಿಗೂ ಭೂಮಿ ಮಂಜೂರು ಮಾಡಲಾಗಿದೆ. ವಿಷಬೀಜ ಬಿತ್ತುವ ಪ್ರಯತ್ನಗಳು ನಡೆದಿವೆ ಎಂದು ಐವಾನ್ ಡಿಸೋಜಾ ಸ್ಪಷ್ಟನೆ ನೀಡಿದರು.

ಸ್ಥಳೀಯ ಶಾಸಕರಾಗಿ ಕ್ರೈಸ್ತರಿಗೆ ಡಿಕೆಶಿ ಸಹಾಯ ಮಾಡಿದ್ದು ತಪ್ಪಲ್ಲ. ಪ್ರತಿಯೊಬ್ಬರೂ ತಮ್ಮ ತಮ್ಮ ಧಾರ್ಮಿಕ ನಾಯಕರ ಪ್ರತಿಮೆ ನಿರ್ಮಿಸಲು ಹಕ್ಕಿದೆ. ಕಲ್ಲಡ್ಕ ಪ್ರಭಾಕರ್ ಭಟ್ ಅವರು ಕೃಷ್ಣನ ಪ್ರತಿಮೆ ನಿರ್ಮಿಸಲಿ. ಕಲ್ಲಡ್ಕದಲ್ಲಿ ಅವರು ಪ್ರತಿಮೆ ನಿರ್ಮಿಸಿದರೆ ನಮ್ಮ ನೆರವು ಕೊಡ್ತೇವೆ. ಏಸು ಪ್ರತಿಮೆಯನ್ನು ಸರ್ಕಾರವೇ ಮುಂದೆ ನಿಂತು ನಿರ್ಮಿಸಲಿ ಎಂದು ನಾನು ಮನವಿ ಮಾಡುತ್ತೇನೆ ಎಂದರು.

ಸರ್ಕಾರದ ನಿರ್ದೇಶನ: ಏಸುಪ್ರತಿಮೆ ನಿರ್ಮಾಣ ರಿಜೆಕ್ಟ್ ಮಾಡಲು ಹೇಗೆ ಬೇಕೋ ಹಾಗೆ ವರದಿ ರೂಪಿಸುವಂತೆ ಸರ್ಕಾರ ನಿರ್ದೇಶಿಸಿತ್ತು. ಕನಕಪುರ ತಹಶೀಲ್ದಾರ್ ರಿಗೆ ಸರ್ಕಾರ ಈ ರೀತಿಯಾಗಿ ನಿರ್ದೇಶನ ನೀಡಿತ್ತು. ಸರ್ಕಾರ ಹೇಳಿದಂತೆ ಜಿಲ್ಲಾಡಳಿತ ವರದಿ ತಯಾರಿಸಿದೆ. ಈಗಲೂ ನಾವು ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತಿದ್ದು ಕಪಾಲ ಬೆಟ್ಟದಲ್ಲಿ ಯೇಸು ಪ್ರತಿಮೆ ನಿರ್ಮಾಣಕ್ಕೆ ಒಪ್ಪಿಗೆ ನೀಡಬೇಕು ಮತ್ತು ಅದಕ್ಕೆ ಅಗತ್ಯ ಅನುದಾನವನ್ನು ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿದರು.

ABOUT THE AUTHOR

...view details