ಕರ್ನಾಟಕ

karnataka

ETV Bharat / state

ಬಸ್‌ಗಳಲ್ಲಿ ಪದೇ ಪದೆ ಕಾಣಿಸಿಕೊಳ್ಳುವ ಬೆಂಕಿ: 186 ಲೈಲ್ಯಾಂಡ್‌ ಬಸ್​ಗಳ ಸಂಚಾರ ಸ್ಥಗಿತ - ಆಶೋಕ್ ಲೈಲ್ಯಾಂಡ್ ಬಸ್ ಸಂಚಾರ ರದ್ದು

ಒಂದೇ ಬ್ಯಾಚ್‌ನಲ್ಲಿ ಖರೀದಿಸಿದ್ದ ಲೈಲ್ಯಾಂಡ್ ಸಂಸ್ಥೆಯ ಬಸ್‌ಗಳಲ್ಲಿ ಬೆಂಕಿ ಹತ್ತಿಕೊಳ್ಳುತ್ತಿರುವುದು ಖಾತ್ರಿಯಾಗಿದೆ. ಈ ಹಿನ್ನೆಲೆಯಲ್ಲಿ ಬಸ್‌ಗಳ ಸಂಚಾರ ರದ್ದುಗೊಳಿಸಲು ತೀರ್ಮಾನಿಸಲಾಗಿದೆ ಎಂದು ಉಪಾಧ್ಯಕ್ಷ ಎಂ. ಆರ್. ವೆಂಕಟೇಶ್ ವಿವರಿಸಿದ್ದಾರೆ.

Repeatedly fire on buses
ಬಸ್‌ಗಳಲ್ಲಿ ಪದೇ ಪದೇ ಕಾಣಿಸಿಕೊಳ್ಳುತ್ತಿರುವ ಬೆಂಕಿ

By

Published : Apr 14, 2022, 8:18 PM IST

ಬೆಂಗಳೂರು: ಪದೇ ಪದೆ ಬಸ್‌ಗಳಲ್ಲಿ ಬೆಂಕಿ ಹತ್ತಿಕೊಳ್ಳುತ್ತಿರುವ ಘಟನೆಯಿಂದ ಎಚ್ಚೆತ್ತುಕೊಂಡಿರುವ ಬಿಎಂಟಿಸಿ, ಆಶೋಕ್ ಲೈಲ್ಯಾಂಡ್‌ ಕಂಪನಿಯ 186 ಬಸ್‌ಗಳ ಸಂಚಾರ ನಿಲ್ಲಿಸಿದೆ. ಕಳೆದ ಕೆಲವು ತಿಂಗಳಿನಲ್ಲಿ ಮೂರು ಬಿಎಂಟಿಸಿ ಬಸ್‌ಗಳು ಬೆಂಕಿಗೆ ಆಹುತಿಯಾಗಿವೆ. ಇದನ್ನು ಗಂಭೀರವಾಗಿ ಪರಿಗಣಿಸಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸಂಸ್ಥೆಯ ಉಪಾಧ್ಯಕ್ಷ ಎಂ.ಆರ್.ವೆಂಕಟೇಶ್ ತಿಳಿಸಿದ್ದಾರೆ.

ಕಳೆದ ಜನವರಿ 21 ರಂದು ಚಾಮರಾಜಪೇಟೆಯ ಮಕ್ಕಳ ಕೂಟದ ಬಳಿ ಒಂದು ಬಸ್ ಬೆಂಕಿಗೆ ಆಹುತಿಯಾಗಿತ್ತು. ಫೆಬ್ರವರಿ 1 ರಂದು ಜಯನಗರದ ಸೌತ್ ಎಂಡ್ ಸರ್ಕಲ್ ಬಳಿ ಪ್ರಯಾಣಿಕರಿದ್ದ ಸಂದರ್ಭದಲ್ಲೇ ಬಸ್​ಗೆ ಬೆಂಕಿ ಹತ್ತಿಕೊಂಡಿತ್ತು.

ಒಂದೇ ಬ್ಯಾಚ್‌ನಲ್ಲಿ ಖರೀದಿಸಿದ್ದ ಬಸ್​ಗಳಲ್ಲಿ ಬೆಂಕಿ:ಒಂದೇ ಬ್ಯಾಚ್‌ನಲ್ಲಿ ಖರೀದಿಸಿದ್ದ ಲೈಲ್ಯಾಂಡ್ ಸಂಸ್ಥೆಯ ಬಸ್‌ಗಳಲ್ಲಿ ಬೆಂಕಿ ಹತ್ತಿಕೊಳ್ಳುತ್ತಿರುವುದು ಖಾತ್ರಿಯಾಗಿದೆ. ಈ ಹಿನ್ನೆಲೆಯಲ್ಲಿ ಬಸ್‌ಗಳ ಸಂಚಾರ ರದ್ದುಗೊಳಿಸಲು ತೀರ್ಮಾನಿಸಲಾಗಿದೆ ಎಂದು ವೆಂಕಟೇಶ್ ವಿವರಿಸಿದ್ದಾರೆ.

ಇದನ್ನೂ ಓದಿ:ನಾಳೆ ಈಶ್ವರಪ್ಪ ರಾಜೀನಾಮೆ ನೀಡಲಿದ್ದಾರೆ: ಸಿಎಂ ಬೊಮ್ಮಾಯಿ

ತಜ್ಞರಿಂದ ಗ್ರೀನ್ ಸಿಗ್ನಲ್:ತಜ್ಞರು ಬಿಎಂಟಿಸಿ ಘಟಕಕ್ಕೆ ಭೇಟಿ ನೀಡಿ ಲೋಪದೋಷ ಸರಿಪಡಿಸಿ ಎಲ್ಲ ಸರಿಯಿದೆ ಎಂದು ತಿಳಿಸಿ ತೆರಳಿದ್ದರು. ಆದರೆ, ಒಂದು ತಿಂಗಳೊಳಗೆ ಅಂದರೆ ಏಪ್ರಿಲ್ 9ರಂದು ಶೇಷಾದ್ರಿ ರಸ್ತೆಯಲ್ಲಿ ಸಂಚರಿಸುತ್ತಿದ್ದ ಮತ್ತೊಂದು ಬಸ್ ಬೆಂಕಿಗೆ ಆಹುತಿಯಾಗಿದೆ. ವಾತಾವರಣದಲ್ಲಿ ತಾಪಮಾನ ಹೆಚ್ಚಳದಿಂದ ಕೂಡ ಈ ರೀತಿಯಾಗುತ್ತಿರಬಹುದು ಎಂದರು.

ಡಿಪೋಗಳಿಗೆ ಮಾಹಿತಿ ರವಾನೆ: ಆಶೋಕ್ ಲೈಲ್ಯಾಂಡ್ ಬಸ್ ಸಂಚಾರ ರದ್ದುಗೊಳಿಸಿರುವ ಕುರಿತು ಎಲ್ಲ ಡಿಪೋಗಳಿಗೆ ಮಾಹಿತಿ ನೀಡಲಾಗಿದೆ. ಒಂದು ವೇಳೆ ಯಾರಾದರೂ ನಿಯಮ ಉಲ್ಲಂಘಿಸಿ ಬಸ್ ಸಂಚಾರ ನಡೆಸಿ ಯಾವುದೇ ಅನಾಹುತ ಸಂಭವಿಸಿದರೆ ಸಂಬಂಧಪಟ್ಟ ಅಧಿಕಾರಿಗಳನ್ನೇ ನೇರ ಹೊಣೆ ಮಾಡಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ABOUT THE AUTHOR

...view details