ಬೆಂಗಳೂರು :ಮೆಟ್ರೋ ಓಡಾಟದಲ್ಲಿ ನಾಳೆ ಸಂಜೆ 5 ಗಂಟೆಯಿಂದ ಸಮಯ ಬದಲಾವಣೆ ಆಗಲಿದೆ. ನಾಳೆ ಸಂಜೆ 5 ಗಂಟೆಯಿಂದ ನೇರಳೆ ಮಾರ್ಗದ ಟ್ರಿನಿಟಿ ಹಾಗೂ ಹಲಸೂರು ಮೆಟ್ರೋ ನಿಲ್ದಾಣಗಳ ನಡುವೆ ದುರಸ್ಥಿ ಕಾಮಗಾರಿಯನ್ನು ಕೈಗೊಳ್ಳಲಾಗುತ್ತಿದೆ.
ಈ ಕಾಮಗಾರಿಯನ್ನು ನಿರ್ವಹಿಸಲು ನೇರಳೆ ಮಾರ್ಗದ ಎಂ ಜಿ ರಸ್ತೆ ಮೆಟ್ರೋ ನಿಲ್ದಾಣದಿಂದ ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದವರೆಗೆ ವಾಣಿಜ್ಯ ಸೇವೆಯನ್ನು ಡಿಸೆಂಬರ್ 4ರಿಂದ ಸಂಜೆ 5 ಗಂಟೆಯಿಂದ ಡಿಸೆಂಬರ್ 5ರ ಬೆಳಗ್ಗೆ 7 ಗಂಟೆಯವರೆಗೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತಿದೆ.