ಕರ್ನಾಟಕ

karnataka

ETV Bharat / state

ಗೌರವ ಕೊಟ್ಟು ಗೌರವ ತಗೋಬೇಕು: ದೊರೆಸ್ವಾಮಿಗೇ ಬುದ್ಧಿ ಹೇಳಿದ ರೇಣುಕಾಚಾರ್ಯ! - Renukacharya latest news

ಶಾಸಕ ರೇಣುಕಾಚಾರ್ಯ ವಿಧಾನಸೌಧದಲ್ಲಿ ಮಾತನಾಡಿ ದೊರೆಸ್ವಾಮಿ ಎಲ್ಲಾ ಪಕ್ಷದವರಿಗೂ ಮಾರ್ಗದರ್ಶನ ಮಾಡಲಿ. ಅದನ್ನು ಬಿಟ್ಟು ಒನ್ ಸೈಡ್ ಮಾತನಾಡಬಾರದು ಎಂದು ಶಾಸಕ ರೇಣುಕಾಚಾರ್ಯ ಬುದ್ಧಿ ಹೇಳಿದ್ದಾರೆ.

Renukacharya
ಶಾಸಕ ರೇಣುಕಾಚಾರ್ಯ

By

Published : Mar 2, 2020, 2:46 PM IST

ಬೆಂಗಳೂರು: ಯಾರೇ ಆಗಲಿ, ಗೌರವ ಕೊಟ್ಟು ಗೌರವ ತೆಗೆದುಕೊಳ್ಳಲಿ ಎಂದು ಶಾಸಕ ರೇಣುಕಾಚಾರ್ಯ ಹೇಳಿದ್ದಾರೆ.

ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗಿವ್ ರೆಸ್ಪೆಕ್ಟ್ ಆ್ಯಂಡ್ ಟೇಕ್ ರೆಸ್ಪೆಕ್ಟ್. ದೊರೆಸ್ವಾಮಿಯವರು ಎಲ್ಲಾ ಪಕ್ಷದವರಿಗೂ ಮಾರ್ಗದರ್ಶನ ಮಾಡಲಿ. ಅದನ್ನು ಬಿಟ್ಟು ಒನ್ ಸೈಡ್ ಮಾತನಾಡಬಾರದು ಎಂದು ಕಿಡಿಕಾರಿದರು.

ಗೌರವ ಕೊಟ್ಟು, ಗೌರವ ತಗೊಳ್ಳಿ ಅಂದ್ರು ಶಾಸಕ ರೇಣುಕಾಚಾರ್ಯ

ದೇಶದ್ರೋಹಿಗಳನ್ನು ಎನ್​ಕೌಂಟರ್ ಮಾಡಿ ಅನ್ನೋ ಯತ್ನಾಳ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಭಾರತ ಮಾತೆ ವಿರುದ್ಧ ಇರೋರ ಮೇಲೆ ಮೃಧು ದೋರಣೆ ತೋರಿಸುತ್ತಾ ಹೋದ್ರೆ ಅಂತಹವರ ಸಂಖ್ಯೆ ಹೆಚ್ಚಾಗುತ್ತದೆ. ಪಾಕಿಸ್ತಾನಕ್ಕೆ ಜಿಂದಾಬಾದ್ ಅಂದ್ರೆ ನಾವು ಸಹಿಸ್ಕೊಂಡು ಇರಬೇಕಾ ಎಂದು ಪ್ರಶ್ನಿಸಿದರು.

ಇವರಿಗೆ ತಾಕತ್ ಇದ್ದರೆ ಪಾಕಿಸ್ತಾನಕ್ಕೆ ಹೋಗಿ ಭಾರತ ಮಾತಾ ಜಿಂದಾಬಾದ್ ಎನ್ನಲಿ ನೋಡೋಣ. ಭಾರತ್ ಮಾತಾ ಜಿಂದಾಬಾದ್ ಅಂದು ಪಾಕಿಸ್ತಾನದಿಂದ ಜೀವಂತವಾಗಿ ಆಚೆ ಬರಲ್ಲ ಎಂದರು.

ABOUT THE AUTHOR

...view details