ಕರ್ನಾಟಕ

karnataka

ETV Bharat / state

ಸಿದ್ದರಾಮಯ್ಯ ಕಾರಿಗೆ ಕಾಂಗ್ರೆಸ್ ಕುತಂತ್ರಿಗಳೇ ಮೊಟ್ಟೆ ಎಸೆದಿದ್ದಾರೆ: ಎಂ ಪಿ ರೇಣುಕಾಚಾರ್ಯ - ಈಟಿವಿ ಭಾರತ್​ ಕನ್ನಡ

ಕಾಂಗ್ರೆಸ್​​ ಕಾರ್ಯಕತರು ಬಿಜೆಪಿಗೆ ಕೆಟ್ಟ ಹೆಸರು ತರಲೆಂದು ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆದಿದ್ದಾರೆ ಎಂದು ಕಾಂಗ್ರೆಸ್​​ ವಿರುದ್ಧ ರೇಣುಕಾಚಾರ್ಯ ಆರೋಪಿಸಿದರು.

KN_BNG_05_RENUKACHARYA_BYTE_SCRIPT_7201951
ಎಂ.ಪಿ. ರೇಣುಕಾಚಾರ್ಯ

By

Published : Aug 19, 2022, 7:52 PM IST

ಬೆಂಗಳೂರು:ಸಿದ್ದರಾಮಯ್ಯ ಕಾರಿಗೆ ಕಾಂಗ್ರೆಸ್​ನ ಕುತಂತ್ರಿಗಳೇ ಮೊಟ್ಟೆ ಎಸಿದಿದ್ದಾರೆಂದು ಬಿಜೆಪಿ ಮುಖಂಡ ಎಂ.ಪಿ.ರೇಣುಕಾಚಾರ್ಯ ಆರೋಪ ಮಾಡಿದ್ದಾರೆ.

ವಿಧಾನಸೌಧದಲ್ಲಿ ‌ಮಾತನಾಡಿದ ಅವರು, ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆದದ್ದು ಬಿಜೆಪಿ ಕಾರ್ಯಕರ್ತರಲ್ಲ, ಕಾಂಗ್ರೆಸ್ ಕಾರ್ಯಕರ್ತರೇ. ಬಿಜೆಪಿಗೆ ಕೆಟ್ಟ ಹೆಸರು ತರಲು ಈ ರೀತಿ ಮಾಡಿದ್ದಾರೆ. ಸಿದ್ದರಾಮಯ್ಯ ಅವರ ಹೇಳಿಕೆಗಳನ್ನು ಯಾರೂ ಸಮರ್ಥಿಸಿಕೊಳ್ಳಲ್ಲ. ಓಟ್ ಬ್ಯಾಂಕ್ ರಾಜಕೀಯ, ಮುಸ್ಲಿಂ ಒಲೈಕೆಗೆ ಕಾಂಗ್ರೆಸ್‌ನವರು ಹೀಗೆ ಬಿಜೆಪಿ ವಿರುದ್ದ ಅಪಪ್ರಚಾರ ಮಾಡ್ತಿದ್ದಾರೆ ಎಂದರು.

ಬಳಿಕ ಸಾವರ್ಕರ್​ ಕುರಿತು ಮಾತನಾಡುತ್ತಾ, ಸಾವರ್ಕರ್ ಬಗ್ಗೆ ಮಾತನಾಡಿದ್ರೆ ಕಾಂಗ್ರೆಸ್ ಅವನತಿ ಆಗುತ್ತದೆ. ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರ. ಆದರೆ ಟಿಪ್ಪು ಯಾರು? ಆತ ಸ್ವಾತಂತ್ರ್ಯ ಹೋರಾಟ ಮಾಡೇ ಇಲ್ಲ. ಕಾಂಗ್ರೆಸ್ ಮುಖಂಡರಿಗೆ ಸಾವರ್ಕರ್ ಬಗ್ಗೆ ಗೊತ್ತಿದ್ದರೂ ಜಾಣ ಕುರುಡು ತೋರಿಸ್ತಿದ್ದಾರೆ. ಅದಕ್ಕಾಗಿಯೇ ಕಾಂಗ್ರೆಸ್​​​ ವಿರುದ್ಧ ಸಾವರ್ಕರ್ ಪುಸ್ತಕ ಕೊಡುವ ಅಭಿಯಾನ ಪ್ರಾರಂಭ ಮಾಡಿದ್ದೇವೆ. ಸಿದ್ದರಾಮಯ್ಯ ಟಿಪ್ಪು ಜಯಂತಿ ಮಾಡಿ ವೈಭವೀಕರಿಸಿದ್ರು, ಅವರಿಗೆ ಸಾವರ್ಕರ್ ಬಗ್ಗೆ ಗೊತ್ತಿಲ್ಲದೆ ಹೋದ್ರೆ ಪುಸ್ತಕ ಕಳಿಸಿಕೊಡ್ತೀವಿ ಎಂದು ಹೇಳಿದರು.

ಇದನ್ನೂ ಓದಿ:ಮಹಾತ್ಮ ಗಾಂಧಿ ಕೊಂದವರು ನನ್ನನ್ನು ಬಿಡುತ್ತಾರಾ.. ಸಿದ್ದರಾಮಯ್ಯ ಪ್ರಶ್ನೆ

ABOUT THE AUTHOR

...view details