ಕರ್ನಾಟಕ

karnataka

ETV Bharat / state

ಸೋಂಕು ಹರಡುವವರನ್ನ ಗುಂಡಿಕ್ಕಿ‌ ಕೊಲ್ಲಿ ಎಂಬ ಮಾತಿಗೆ ಈಗಲೂ ಬದ್ಧ : ರೇಣುಕಾಚಾರ್ಯ - ಕೊರೊನಾ ಸೋಂಕು

ಕೊರೊನಾ ಸೋಂಕು ಹರಡುವವರನ್ನ ಗುಂಡಿಕ್ಕಿ‌ ಕೊಲ್ಲಿ ಎಂದು ರೇಣುಕಾಚಾರ್ಯ ಅವರ ಮೇಲೆ ಎಫ್ ಐಆರ್ ದಾಖಲಿಸಿ ಬಂಧಿಸುವಂತೆ ಹೇಳಿರುವ ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ಅವರ ಹೇಳಿಕೆಗೆ ರೇಣುಕಾಚಾರ್ಯ ವಿಡಿಯೋ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.

Renukacharya
ರೇಣುಕಾಚಾರ್ಯ

By

Published : Apr 9, 2020, 7:22 PM IST

ದಾವಣಗೆರೆ:ಕೊರೊನಾ ವೈರಸ್ ಹರಡುವವರನ್ನು ಗುಂಡಿಕ್ಕಿ ಕೊಲ್ಲಬೇಕು ಎಂಬ ಮಾತು ಹೇಳಿದ್ದು ಸತ್ಯ. ನಾನು ಯಾವುದೇ ಧರ್ಮದ ವಿರೋಧಿ ಅಲ್ಲ. ಈ ಮಾತಿಗೆ ಈಗಲೂ ಬದ್ಧ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.‌ ಪಿ. ರೇಣುಕಾಚಾರ್ಯ ಮತ್ತೊಮ್ಮೆ ಸಮರ್ಥನೆ ಮಾಡಿಕೊಂಡಿದ್ದಾರೆ.

ಈ ಸಂಬಂಧ ವಿಡಿಯೋ ಬಿಡುಗಡೆ ಮಾಡಿರುವ ಅವರು, ನವದೆಹಲಿಯ ನಿಜಾಮುದ್ದೀನ್ ಧಾರ್ಮಿಕ ಸಭೆಗೆ ಹೋಗಿ ಬಂದ ಕೆಲ ಕೊರೊನಾ ಸೋಂಕಿತರು ಚಿಕಿತ್ಸೆ ಪಡೆದಿದ್ದಾರೆ. ಆದ್ರೆ ಮತ್ತೆ ಕೆಲವರು ಚಿಕಿತ್ಸೆ ಪಡೆದಿಲ್ಲ. ಪ್ರಧಾನಿ ಮೋದಿ ಹಾಗೂ ಸಿಎಂ ಯಡಿಯೂರಪ್ಪ ಮನವಿ ಮಾಡಿಕೊಂಡರೂ ಸೋಂಕಿತರು ಚಿಕಿತ್ಸೆ ಬಾರದೇ ತಲೆಮರೆಸಿಕೊಂಡು ಭಯೋತ್ಪಾದಕರಂತೆ ಸೋಂಕು ಹರಡುತ್ತಿದ್ದಾರೆ ಎಂದು ಆರೋಪಿಸಿದರು.

ಸಿಎಂ ರಾಜಕೀಯ ಕಾರ್ಯದರ್ಶಿ ಎಂ.‌ ಪಿ. ರೇಣುಕಾಚಾರ್ಯ

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನನ್ನ ಮೇಲೆ ಎಫ್ಐಆರ್ ದಾಖಲಿಸಿ ಬಂಧಿಸುವಂತೆ ಒತ್ತಾಯಿಸಿದ್ದಾರೆ. ನನ್ನನ್ನು ಬಂಧಿಸಿದರೂ ಪರವಾಗಿಲ್ಲ.‌ ಕೊರೊನಾ‌ ಸೋಂಕು‌ ಮುಕ್ತವಾಗಬೇಕು ಎಂದು ಹೇಳಿದ್ದಾರೆ.‌

ಕೆಲ‌ ಕೊರೊನಾ ಸೋಂಕಿತರು ವೈದ್ಯರು, ನರ್ಸ್​​​ಗಳು ಸೇರಿದಂತೆ ವೈದ್ಯಕೀಯ ಸಿಬ್ಬಂದಿ ಮೇಲೆ ಉಗುಳುವಂತಹ ಕೃತ್ಯಕ್ಕೆ ಮುಂದಾಗಿದ್ದಾರೆ. ಆಶಾ ಕಾರ್ಯಕರ್ತೆಯರು, ಪೌರ ಕಾರ್ಮಿಕರಿಗೆ ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ಸಿದ್ದರಾಮಯ್ಯ ಯಾಕೆ ಮಾತನಾಡುತ್ತಿಲ್ಲ ಎಂದು ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details