ಕರ್ನಾಟಕ

karnataka

ETV Bharat / state

ಪರಿಹಾರ ವಿಚಾರವನ್ನು ಹಾದಿ ಬೀದಿಯಲ್ಲಿ ಚರ್ಚಿಸದೆ ಪ್ರಧಾನಿಗೆ ಮನವರಿಕೆ ಮಾಡಿ: ರೇಣುಕಾಚಾರ್ಯ - ಜೆಡಿಎಸ್ ಶಾಸಕ ಶ್ರೀನಿವಾಸ್

ಹಾದಿ ಬೀದಿಯಲ್ಲಿ ದಯಮಾಡಿ ಪರಿಹಾರ ಸಂಬಂಧ ಚರ್ಚೆ ಮಾಡದೆ, ಪ್ರಧಾನಿಗೆ ಮನವರಿಕೆ ಮಾಡಿ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಮನವಿ ಮಾಡಿದ್ದಾರೆ.

ಎಂ ಪಿ ರೇಣುಕಾಚಾರ್ಯ

By

Published : Oct 4, 2019, 5:31 PM IST

Updated : Oct 4, 2019, 5:41 PM IST

ಬೆಂಗಳೂರು:ಹಾದಿ ಬೀದಿಯಲ್ಲಿ ದಯಮಾಡಿ ನೆರೆ ಪರಿಹಾರ ವಿಚಾರ ಚರ್ಚಿಸದೆ ಪ್ರಧಾನಿಗೆ ರಾಜ್ಯದ ಸಮಸ್ಯೆಯನ್ನು ಮನವರಿಕೆ ಮಾಡಿ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಮನವಿ ಮಾಡಿದ್ದಾರೆ.

ರೇಣುಕಾಚಾರ್ಯ ಮಾತನಾಡಿದ್ದಾರೆ
ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಮೈತ್ರಿ ಸರ್ಕಾರ ಖಜಾನೆ ಲೂಟಿ ಮಾಡಿದೆ. ಆದರೂ ನೆರೆ ಪರಿಹಾರ ನಿಂತಿಲ್ಲ. ಖಜಾನೆ ಖಾಲಿಯಾಗಿರುವುದರಿಂದ ತಾತ್ಕಾಲಿಕವಾಗಿ ಕಷ್ಟ ಆಗಿರಬಹುದು. ಆದರೆ ಸಂತ್ರಸ್ತರಿಗೆ ಪರಿಹಾರ ‌ನೀಡುವಲ್ಲಿ ಸರ್ಕಾರ ಹಿಂದೆ ಬಿದ್ದಿಲ್ಲ. ಸಿಎಂ ಸಂಪನ್ಮೂಲ ಕ್ರೂಢೀಕರಿಸುವ ಕೆಲಸ‌ ಮಾಡುತ್ತಿದ್ದಾರೆ. ಪ್ರಧಾನಿಯವರಿಗೂ ಕರ್ನಾಟಕದ ಬಗ್ಗೆ ವಿಶೇಷ ಕಾಳಜಿ ಇದೆ. ಆದಷ್ಟು ಬೇಗ ಹಣ ಬಿಡುಗಡೆ ಮಾಡುವ ವಿಶ್ವಾಸ ಇದೆ. ಈ ಬಗ್ಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ನವರು ರಾಜಕಾರಣ ಮಾಡಬಾರದು ಎಂದು ಮನವಿ ಮಾಡಿದರು.
ಡಿಸಿಎಂ ಸವದಿ ವಿರುದ್ಧ ಗರಂ:
ನೆರವು ಕೇಳಲು ಬಂದ ಸಂಸತ್ರಸ್ತರ ಬಗ್ಗೆ ವಿವಾದಾತ್ಮಕ ಹೇಳಿಕೆ‌ ನೀಡಿದ ಡಿಸಿಎಂ ಲಕ್ಷ್ಮಣ್ ಸವದಿ ವಿರುದ್ಧ ರೇಣುಕಾಚಾರ್ಯ ಅಸಮಾಧಾನ ವ್ಯಕ್ತಪಡಿಸಿದರು. ಸವದಿ ಬಳಿ ಸಾವಿರಾರು ಎಕರೆ ಜಮೀನು ಇರಬಹುದು. ಅವರು ಶ್ರೀಮಂತರಿರಬಹುದು.‌ ಆದರೆ ಸಂತ್ರಸ್ತರು ಬಂದಾಗ ಹಾಗೆ ಮಾತನಾಡುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಸಿಎಂ ಬಗ್ಗೆ ಮಾತನಾಡಿದರೆ ಹುಷಾರ್:
ನಮ್ಮ ಸಿಎಂ ಬಗ್ಗೆ ಜೆಡಿಎಸ್ ಶಾಸಕ ಶ್ರೀನಿವಾಸ್ ಮತ್ತು ಸಿ.ಎಂ.ಇಬ್ರಾಹಿಂ ಏಕವಚನದಲ್ಲಿ ಮಾತನಾಡುತ್ತಿದ್ದಾರೆ. ಇಬ್ರಾಹಿಂ ಮತ್ತು ಶ್ರೀನಿವಾಸ್‌ಗೆ ಎಚ್ಚರಿಕೆ ಕೊಡುತ್ತೇನೆ. ಎಲುಬು ಇಲ್ಲದ ನಾಲಿಗೆಯನ್ನು ಹರಿಬಿಟ್ಟರೆ ಜನ‌ ಒಪ್ಪಲ್ಲ‌ ಎಂದರು.
14 ತಿಂಗಳು ಶ್ರೀನಿವಾಸ್ ಸಣ್ಣ ಕೈಗಾರಿಕಾ ಸಚಿವರಾಗಿದ್ದವರು. ದೇವೇಗೌಡರನ್ನು ತುಮಕೂರಿಗೆ ಕರೆತಂದು ಸೋಲಿಸಿದ ಮಹಾನುಭಾವ. ದೇವೇಗೌಡರ ವಿರುದ್ದವೇ ಮಾತನಾಡುತ್ತಾರೆ. ಈಗ ಸಿಎಂ ಬಗ್ಗೆ ಕೆಟ್ಟ ಪದ‌ ಬಳಸಿ, ಧೀರನಂತೆ, ಶೂರನಂತೆ, ವೀರನಂತೆ ಮಾಧ್ಯಮದಲ್ಲಿ ಹೇಳಿಕೆ ಕೊಟ್ಟರೆ ನೀನು ಧೀರನೂ ಆಗಲ್ಲ, ಶೂರನೂ ಆಗಲ್ಲ ಎಂದು ಕಿಡಿ ಕಾರಿದರು.
Last Updated : Oct 4, 2019, 5:41 PM IST

ABOUT THE AUTHOR

...view details