ಕರ್ನಾಟಕ

karnataka

ತಾಯಿಯಾಗುವುದೇ ಒಂದು ಮಹಾಭಾಗ್ಯ: ಖ್ಯಾತ ಪ್ರಸೂತಿ ತಜ್ಞೆ ಗಾಯಿತ್ರಿ ಕಾಮತ್ ಹೇಳೋದಿಷ್ಟು!

By

Published : May 9, 2021, 6:00 AM IST

Updated : May 9, 2021, 1:39 PM IST

ತಾಯಿಯಾಗುವುದೇ ಒಂದು ಮಹಾಭಾಗ್ಯ. ಅವಕಾಶವನ್ನು ಕಳೆದುಕೊಳ್ಳದೇ ಕೋವಿಡ್ ಸೋಂಕಿಗೆ ಆತಂಕಪಡದೇ ಜಾಗೃತಿವಹಿಸಿದರೆ ಯಾವುದೇ ರೀತಿ ತೊಂದರೆಯಿಲ್ಲ ಎಂದು ಖ್ಯಾತ ಪ್ರಸೂತಿ ತಜ್ಞರಾದ ಗಾಯಿತ್ರಿ ಕಾಮತ್ ತಾಯಂದಿರಿಗೆ ಧೈರ್ಯ ತುಂಬಿದ್ದಾರೆ.

opinion-of-renowned-obstetrician-gayitri-kamath
ಖ್ಯಾತ ಪ್ರಸೂತಿ ತಜ್ಞೆ ಗಾಯಿತ್ರಿ ಕಾಮತ್ ಅಭಿಪ್ರಾಯ

ಬೆಂಗಳೂರು:ತಾಯಿಯಾಗುವುದೇ ಒಂದು ಮಹಾಭಾಗ್ಯ. ಅವಕಾಶವನ್ನು ಕಳೆದುಕೊಳ್ಳದೇ ಕೋವಿಡ್ ಸೋಂಕಿಗೆ ಆತಂಕಪಡದೇ ಜಾಗೃತಿವಹಿಸಿದರೆ ಯಾವುದೇ ರೀತಿ ತೊಂದರೆಯಿಲ್ಲ ಎಂದು ಖ್ಯಾತ ಪ್ರಸೂತಿ ತಜ್ಞರಾದ ಗಾಯಿತ್ರಿ ಕಾಮತ್ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ತಾಯಿ ತನ್ನ ಎಲ್ಲ ಕಷ್ಟವನೆಲ್ಲಾ ನುಂಗಿ ಮಕ್ಕಳಿಗೆ ಅಮೃತವನ್ನು ಉಣಿಸುತ್ತಾಳೆ, ಅವಳಿಗೆ ಸರಿಸಾಟಿ ಯಾರು ಇಲ್ಲ. ಯಾವುದೇ ನಿರೀಕ್ಷೆ ಇಲ್ಲದ, ಕಲ್ಮಷವಿಲ್ಲದ ಏಕೈಕ ಜೀವಿ ಎಂದರೆ ಅದು ತಾಯಿ ಮಾತ್ರ. ಕೋವಿಡ್​ ಸಮಯದಲ್ಲಿ ತಾಯಂದಿರ ದಿನದ ಸಂದರ್ಭದಲ್ಲಿ ಕೋವಿಡ್​ ಹೆಮ್ಮಾರಿ ತಾಯಿಯ ಮನದಲ್ಲಿ ಆತಂಕ ಮಡುಗಟ್ಟುವಂತೆ ಮಾಡಿದೆ.

ತಾಯಿಯಾಗುವುದೇ ಒಂದು ಮಹಾಭಾಗ್ಯ: ಖ್ಯಾತ ಪ್ರಸೂತಿ ತಜ್ಞೆ ಗಾಯಿತ್ರಿ ಕಾಮತ್

ಕೋವಿಡ್​ ಮಹಾಮಾರಿಗೆ ಹೆದರಿ ಎಷ್ಟೋ ತಾಯಂದಿರು ಮಕ್ಕಳಿಗೆ ಜನ್ಮ‌ ನೀಡುವಲ್ಲಿ ಹಿಂಜರಿಯುತ್ತಿದ್ದಾರೆ. ನಾಳೆ ವಿಶ್ವ ತಾಯಂದಿರ ದಿನಾಚರಣೆ ಇದ್ದು ಒಂದು ಹೆಣ್ಣಿನ ಜೀವನ ಸಾರ್ಥಕವಾಗಬೇಕಾದರೆ ಮತ್ತೊಂದು ಜೀವಕ್ಕೆ ಜನ್ಮ ನೀಡಿದಾಗಲೇ ಎನ್ನುವ ಪ್ರತೀತಿ ಇದೆ. ಪ್ರತಿ ತಾಯಿಯು ತನ್ನ ಮಗುವಿನ ಬಗ್ಗೆ ಯಾವಾಗಲೂ ಯೋಚಿಸುತ್ತಾಳೆ. ಆದರೆ, ಈ ಸಮಯದಲ್ಲಿ ತಾಯಂದಿರ ಮನಸ್ಸಿನಲ್ಲಿ ಬೇರೆ ಆತಂಕವೇ ಆವರಿಸಿದೆ. ಈ ಕೋವಿಡ್​ ಆತಂಕದಲ್ಲಿ ಎಷ್ಟೋ ಮಹಿಳೆಯರು ತಾಯಿ ಆಗುವುದಿಲ್ಲ ಎಂದು ತಾಯ್ತನಕ್ಕೆ ಹಿಂಜರಿಯುತ್ತಿದ್ದಾರೆ.

ದಿನದಿಂದ ದಿನಕ್ಕೆ ಕೋವಿಡ್​ ಹೆಚ್ಚಾಗುತ್ತಿದ್ದು, ಈ ಸಮಯದಲ್ಲಿ ತಾಯಿಯಾದರೆ ತನ್ನಿಂದ ತನ್ನ ಮಗುವಿಗೆ ಎಲ್ಲಿ ತೊಂದರೆಯಾಗುತ್ತೋ ಎನ್ನುವ ಆತಂಕ ಮನೆ ಮಾಡುತ್ತಿದೆ. ಈ ಬಗ್ಗೆ ಕೂಡ ತಜ್ಞರಾದ ಗಾಯಿತ್ರಿ ಕಾಮತ್ ಮಾತನಾಡಿದ್ದು, ಈ ಬಗ್ಗೆ ಯಾವುದೇ ಭಯ ಬೇಡ ಎಂದು ಮಹಿಳೆಯರಿಗೆ ಧೈರ್ಯ ತಂದಿದೆ. ಈ ರೀತಿ ಆತಂಕಪಾಡುವ ಅಗತ್ಯವಿಲ್ಲ, ಒಂದು ವೇಳೆ ಕೋವಿಡ್​ ಅಟ್ಯಾಕ್ ಆದರೂ ಯಾವುದೇ ತೊಂದರೆ ಇಲ್ಲ ಎಂದು ತಾಯಂದಿರ ಹಾಗೂ ತಾಯ್ತನದ ಬಗ್ಗೆ ಮಾಹಿತಿ ನೀಡುತ್ತಾ ಹೇಳಿದ್ದಾರೆ.

Last Updated : May 9, 2021, 1:39 PM IST

ABOUT THE AUTHOR

...view details