ಕರ್ನಾಟಕ

karnataka

ETV Bharat / state

ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ: ಅರಸರ ಕೊಡುಗೆ ಸ್ಮರಿಸಿ‌ ಸಿಎಂ ಟ್ವೀಟ್‌ - Krishnaraja Wodeyar Jayanti

ನಾಲ್ವಡಿ ಕೃಷ್ಣರಾಜ ಒಡೆಯರ್​​ ಜಯಂತಿಯಂದು ಅವರನ್ನು ಸ್ಮರಿಸಿ ಗೌರವಿಸೋಣ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.

CM BS Yeddyurappa
ಬಿ.ಎಸ್.ಯಡಿಯೂರಪ್ಪ ಟ್ವೀಟ್

By

Published : Jun 4, 2020, 9:56 AM IST

ಬೆಂಗಳೂರು: ಮೈಸೂರು ಸಂಸ್ಥಾನದ 'ಸಾಮಾಜಿಕ ನ್ಯಾಯ ಮತ್ತು ಕಾನೂನುಗಳ ಹರಿಕಾರ', ಕನ್ನಡ ಸಾಹಿತ್ಯ ಪರಿಷತ್ ಪ್ರಾರಂಭಕ್ಕೆ ಕಾರಣರಾದ ನಾಲ್ವಡಿ ಕೃಷ್ಣರಾಜ ಒಡೆಯರ್​​ ಜಯಂತಿಯಂದು ಅವರನ್ನು ಸ್ಮರಿಸಿ ಗೌರವಿಸೋಣ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.

ನಾಡ ಕಟ್ಟಿದ ದೊರೆ ಎಂದೇ ಇತಿಹಾಸದಲ್ಲಿ ಅಜರಾಮರವಾಗಿರುವ ಮೈಸೂರು ಸಂಸ್ಥಾನದ ಸರ್ವತೋಮುಖ ಅಭಿವೃದ್ಧಿ ಸಾಧಿಸಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜನ್ಮದಿನದಂದು ನಾಡು ಅವರನ್ನು ಅತ್ಯಂತ ಕೃತಜ್ಞತೆಗಳಿಂದ ಸ್ಮರಿಸುತ್ತದೆ. ಡಿ.ವಿ.ಜಿಯವರು ಹೇಳಿದಂತೆ ಮೈಸೂರಿನ ಸುವರ್ಣ ಯುಗಕ್ಕೆ ಕಾರಣರಾದ ಅವರಿಗೆ ನಾಡು ಸದಾ ಋಣಿಯಾಗಿದೆ ಎಂದು ಸಿಎಂ ಟ್ವೀಟ್ ಮಾಡಿದ್ದಾರೆ.

ABOUT THE AUTHOR

...view details