ಬೆಂಗಳೂರು : ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಸಂಘಟನೆ ವಿರುದ್ಧ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಟೀಕೆ ಮಾಡಿದ ಆರೋಪ ಪ್ರಕರಣದ ಬಗ್ಗೆ ಅಧೀನ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆಗೆ ತಡೆ ನೀಡಿ ಇಂದು ಹೈಕೋರ್ಟ್ ಆದೇಶ ನೀಡಿದೆ.
ಪಿಎಫ್ಐ ಪ್ರಕರಣದಲ್ಲಿ ಶೋಭಾ ಕರಂದ್ಲಾಜೆಗೆ ಹೈ ಕೋರ್ಟ್ನಿಂದ ರಿಲೀಫ್ - ಇತ್ತೀಚಿನ ಬೆಂಗಳೂರು ಸುದ್ದಿ
ಪಿಎಫ್ಐ ಸಂಘಟನೆ ವಿರುದ್ಧ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಟೀಕೆ ಮಾಡಿದ ಆರೋಪ ಪ್ರಕರಣದ ಬಗ್ಗೆ ಅಧೀನ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆಗೆ ತಡೆ ನೀಡಿ ಇಂದು ಹೈಕೋರ್ಟ್ ಆದೇಶ ನೀಡಿದೆ.
ಸಂಸದೆ ಶೋಭಾ ಕರಂದ್ಲಾಜೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಏಕ ಸದಸ್ಯ ಪೀಠದ ಮುಂದೆ ಶೋಭಾ ಕರಂದ್ಲಾಜೆ ಪರ ಹಿರಿಯ ವಕೀಲ ಎಸ್.ಕೆ ಚಲಪತಿ ಅವರು ವಾದ ಮಾಡಿ, ಪಿಎಫ್ ಐ ಉಗ್ರ ಸಂಘಟನೆ ಎಂದು ಹೇಳಿಲ್ಲ, ಐಎಂಎ ಪ್ರಕರಣದಲ್ಲಿ ಮೋಸ ಹೋದ ಬಡ ಮುಸ್ಲೀಮರ ಪರ ಮಾತನಾಡಿದ್ದರು ಎಂದರು. ವಾದ ಆಲಿಸಿದ ನ್ಯಾಯಾಲಯ ಅಧೀನ ನ್ಯಾಯಾಲಯದ ವಿಚಾರಣೆಗೆ ತಡೆ ನೀಡಿದೆ.
ಐಎಂಎ ವಂಚನೆ ಪ್ರಕರಣದಲ್ಲಿ ಮನ್ಸೂರ್ ಖಾನ್ ಹಣವನ್ನು ಪಿಎಫ್ಐ ಸಂಘಟನೆಗೆ ಬಳಸುತ್ತಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದ್ದರು. ಪ್ರೆಸ್ ಮೀಟ್ನಲ್ಲಿ ಸಹ ಹೇಳಿಕೆ ನೀಡಿದ್ದರೆಂದು ಪಿಎಫ್ಐ ಆರೋಪಿಸಿತ್ತು. ಅಧೀನ ನ್ಯಾಯಾಲಯ ಈ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಿ ನ್ಯಾಯಾಲಯಕ್ಕೆ 50 ಸಾವಿರ ರೂಪಾಯಿ ವೈಯಕ್ತಿಕ ಬಾಂಡ್ ಮತ್ತು 10 ಸಾವಿರ ರೂಪಾಯಿ ನಗದು ಭದ್ರತೆ ಒದಗಿಸಿ ಎಂದು ಶೋಭಾ ಕರಂದ್ಲಾಜೆಗೆ ಆದೇಶಿಸಿತ್ತು. ಅದಕ್ಕೀಗ ಕೋರ್ಟ್ ತಡೆಯಾಜ್ಞೆ ನೀಡಿದೆ.