ಬೆಂಗಳೂರು:ಕೋವಿಡ್ ಕೇರ್ ಸೆಂಟರ್ ಆಗಿರುವ ಹಜ್ ಭವನಕ್ಕೆ ದಾಖಲಾಗಿದ್ದ ಸೋಂಕು ಲಕ್ಷಣಗಳಿಲ್ಲದ ಪಾಸಿಟಿವ್ ರೋಗಿಗಳು ಚೇತರಿಸಿಕೊಂಡಿದ್ದು, ಇಂದು ಬಿಡುಗಡೆಯಾಗಿದ್ದಾರೆ.
ಕೊರೊನಾ ಲಕ್ಷಣಗಳಿಲ್ಲದ ಸೋಂಕಿತರು ಗುಣಮುಖ: ಹಜ್ ಭವನದ ಕೋವಿಡ್ ಕೇರ್ ಸೆಂಟರ್ನಿಂದ ಬಿಡುಗಡೆ - Bengaluru Covid update
ಕೋವಿಡ್ ಗುಣಲಕ್ಷಣಗಳಿಲ್ಲದೆ ಪಾಸಿಟಿವ್ ಬಂದಿದ್ದ ರೋಗಿಗಳು ಇದೀಗ ಸೋಂಕು ಮುಕ್ತರಾಗಿದ್ದು, ಹಜ್ ಭವನದ ಕೋವಿಡ್ ಕೇರ್ ಸೆಂಟರ್ನಿಂದ ಬಿಡಗಡೆಯಾಗಿ ಮನೆಗೆ ತೆರಳಿದ್ದಾರೆ.

ಸೋಂಕು ಲಕ್ಷಣಗಳಿಲ್ಲದ ರೋಗಿಗಳು ಗುಣಮುಖ
ಸೋಂಕಿನಿಂದ ಮುಕ್ತರಾದ ಎಲ್ಲರಿಗೂ ಗುಲಾಬಿ ಹೂವು ಕೊಟ್ಟು ಬೀಳ್ಕೊಡಲಾಯಿತು. ಇನ್ನು ಮುಂದೆಯೂ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ತಿಳಿಸಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಬಿ.ಹೆಚ್.ಅನಿಲ್ ಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಅಲ್ಲದೆ ಹಜ್ ಭವನದಲ್ಲಿ ಐನೂರು ಹಾಸಿಗೆಗಳ ವ್ಯವಸ್ಥೆ ಇದೆ ಎಂದು ತಿಳಿಸಿದ್ದಾರೆ.
ಹದಿನಾಲ್ಕು ದಿನಗಳ ಅವಧಿ ಮುಗಿದಿದೆಯಾ ಅಥವಾ ಮತ್ತೊಮ್ಮೆ ಕೋವಿಡ್ ಪರೀಕ್ಷೆ ಮಾಡಲಾಗಿದೆಯಾ ಎಂಬುವುದರ ಬಗ್ಗೆ ಮಾಹಿತಿ ನೀಡಿಲ್ಲ.