ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಾಧನೆಗಳು ಹಾಗೂ ಅವರ ವ್ಯಕ್ತಿತ್ವ ಬಿಂಬಿಸುವ ಹಾಡುಗಳ ಧ್ವನಿ ಸುರುಳಿಯನ್ನು ವಿಧಾನ ಪರಿಷತ್ ಮಾಜಿ ಸದಸ್ಯ ಹಾಗೂ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷೆ ತಾರಾ ಅನುರಾಧ ಅವರು ಬಿಡುಗಡೆ ಮಾಡಿದರು.
ನಗರದ ಖಾಸಗಿ ಹೋಟೆಲ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಮಾನಿ ಬಳಗದವರು ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿಯಾಗಿ ಮಾಡಿರುವ ಸಾಧನೆಗಳು ಹಾಗೂ ಅವರ ವ್ಯಕ್ತಿತ್ವ ಬಿಂಬಿಸುವ ಐದು ಹಾಡುಗಳನ್ನು ಹೊರ ತಂದಿದ್ದಾರೆ.
ಧ್ವನಿ ಸುರುಳಿ ಬಿಡುಗಡೆ ಮಾಡಿ ಮಾತನಾಡಿದ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷೆ ತಾರಾ ಅನುರಾಧ, ಸಿಎಂ ಬಸವರಾಜ ಬೊಮ್ಮಾಯಿ ಅಭಿಮಾನಿ ಬಳಗದಿಂದ ಸಿಎಂ ಸಾಧನೆಗಳ ಕುರಿತು ಹಾಡುಗಳ ಬಿಡುಗಡೆ ಮಾಡಿದ್ದೇನೆ. ಶಿವಕುಮಾರ್ ಮೇಟಿ ಹಾಗೂ ಅವರ ಸ್ನೇಹಿತರೆಲ್ಲ ಸೇರಿ, ಮುಖ್ಯಮಂತ್ರಿಗಳ ಮೇಲಿನ ಅಭಿಮಾನದಿಂದ ಈ ಹಾಡುಗಳನ್ನು ರಚಿಸಿದ್ದಾರೆ. ನಮ್ಮ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಮಾಡಿರುವ ಸಾಧನೆಗಳ ಹಾಡುಗಳನ್ನು ಮಾಡಿದ್ದಾರೆ. ನಾನು ಖುಷಿಯಿಂದ ಹಾಡುಗಳನ್ನು ಬಿಡುಗಡೆ ಮಾಡಿದ್ದೇನೆ. ಹಾಡುಗಳು ಎಲ್ಲವೂ ಚೆನ್ನಾಗಿ ಬಂದಿವೆ ಎಂದು ಹೇಳಿದರು.
ಮುಖ್ಯಮಂತ್ರಿಯೊಬ್ಬರ ಸಾಧನೆಗಳ ಕುರಿತ ಧ್ವನಿಸುರುಳಿ ಬಿಡುಗಡೆ ಮಾಡಿರೋದು ಖುಷಿ ವಿಚಾರ, ನಾನು ಎರಡು ಬಾರಿ ಸ್ಟಾರ್ ಪ್ರಚಾರಕರಾಗಿ ಕ್ಯಾಂಪೇನ್ ಮಾಡಿದ್ದೆ, ಒಮ್ಮೆ ನೀರಾವರಿ ಮಂತ್ರಿಗಳಾಗಿದ್ದರು. ಮತ್ತೊಮ್ಮೆ ಗೃಹ ಸಚಿವರಾಗಿ ಈಗ ಮುಖ್ಯಮಂತ್ರಿಗಳಾಗಿದ್ದಾರೆ. ಬೊಮ್ಮಾಯಿ ಅವರು ನನಗೆ ಅಣ್ಣನ ಸಮಾನ, ಮೊದಲ ಬಜೆಟ್ನಲ್ಲಿ ಮಕ್ಕಳಿಗಾಗಿಯೇ ಪ್ರತ್ಯೇಕ ಬಜೆಟ್ ಕೊಟ್ಟಿದ್ದಾರೆ. ಬೊಮ್ಮಾಯಿ ಅವರು ತುಂಬಾ ಸರಳ ಜೀವಿ, ಮುಖ್ಯಮಂತ್ರಿಯವರ ಮಗನಾಗಿದ್ದರೂ, ಇಂಜಿನಿಯರ್ ಪದವೀಧರರಾಗಿದ್ದರೂ ತುಂಬಾ ಸರಳ ವ್ಯಕ್ತಿತ್ವದವರು ಎಂದು ಬಣ್ಣಿಸಿದರು.