ಕರ್ನಾಟಕ

karnataka

ETV Bharat / state

2021ನೇ ಸಾಲಿನ ಮುಖ್ಯಮಂತ್ರಿ ಪದಕ ಪಟ್ಟಿ ಪ್ರಕಟ - 135 ವಿವಿಧ ಪೊಲೀಸ್ ಅಧಿಕಾರಿಗಳಿಗೆ ರಾಜ್ಯ ಸರ್ಕಾರ ಪದಕ ಘೋಷಣೆ

ಒಟ್ಟು 135 ಅಧಿಕಾರಿ ಮತ್ತು ಸಿಬ್ಬಂದಿಗೆ ಪದಕ ಪುರಸ್ಕಾರ ಲಭ್ಯವಾಗಲಿದೆ. ಏಪ್ರಿಲ್ 2ರಂದು ಕೋರಮಂಗಲದ ಕೆಎಸ್ಆರ್​ಪಿ ಮೈದಾನದಲ್ಲಿ ಪದಕ ಪ್ರದಾನ ಕಾರ್ಯಕ್ರಮ ಜರುಗಲಿದೆ.

2021ನೇ ಸಾಲಿನ ಮುಖ್ಯಮಂತ್ರಿ ಪದಕ ಪಟ್ಟಿ ಪ್ರಕಟ
2021ನೇ ಸಾಲಿನ ಮುಖ್ಯಮಂತ್ರಿ ಪದಕ ಪಟ್ಟಿ ಪ್ರಕಟ

By

Published : Mar 30, 2022, 6:54 PM IST

ಬೆಂಗಳೂರು: 2021ನೇ ಸಾಲಿನ ಮುಖ್ಯಮಂತ್ರಿ ಪದಕ ಪಟ್ಟಿ ಪ್ರಕಟವಾಗಿದ್ದು, ಇಲಾಖೆಯಲ್ಲಿ ದಕ್ಷತೆ, ಕಾರ್ಯಕ್ಷಮತೆ ಆಧಾರದಲ್ಲಿ 135 ವಿವಿಧ ಪೊಲೀಸ್ ಅಧಿಕಾರಿಗಳಿಗೆ ರಾಜ್ಯ ಸರ್ಕಾರ ಪದಕ ಪ್ರಕಟಿಸಿದೆ.

ಬೆಂಗಳೂರು ಸಿಐಡಿ ಡಿವೈಎಸ್ಪಿ ವೀರೇಂದ್ರ ಕುಮಾರ್, ಉಡುಪಿ ಡಿಎಆರ್ ವಿಭಾಗದ ಡಿವೈಎಸ್ಪಿ ರಾಘವೇಂದ್ರ ಆರ್. ನಾಯಕ್, ಇನ್​ಸ್ಪೆಕ್ಟರ್​​ಗಳಾದ ಪ್ರಕಾಶ್, ಮಂಜುನಾಥ್, ನಟರಾಜ್, ಶಿವಕುಮಾರ್, ರಾವ್ ಗಣೇಶ್ ಜನಾರ್ಧನ್ ಸೇರಿದಂತೆ ಒಟ್ಟು 135 ಅಧಿಕಾರಿ ಮತ್ತು ಸಿಬ್ಬಂದಿಗೆ ಪದಕ ಪುರಸ್ಕಾರ ಲಭ್ಯವಾಗಲಿದೆ. ಏಪ್ರಿಲ್ 2ರಂದು ಕೋರಮಂಗಲದ ಕೆಎಸ್ಆರ್​ಪಿ ಮೈದಾನದಲ್ಲಿ ಪ್ರದಾನ ಕಾರ್ಯಕ್ರಮ ಜರುಗಲಿದೆ.

For All Latest Updates

TAGGED:

ABOUT THE AUTHOR

...view details