ಕರ್ನಾಟಕ

karnataka

ETV Bharat / state

ಎಸ್​ಎಸ್​ಎಲ್​ಸಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳ ನೋಂದಣಿ ದಿನಾಂಕ ವಿಸ್ತರಣೆ - ಈಟಿವಿ ಭಾರತ ಕನ್ನಡ

2023 ಮಾರ್ಚ್​-ಎಪ್ರಿಲ್​ನಲ್ಲಿ ನಡೆಯಲಿರುವ ಎಸ್​ಎಸ್​ಎಲ್​ಸಿ ಪರೀಕ್ಷೆ- ವಿದ್ಯಾರ್ಥಿಗಳ ನೋಂದಣಿ ದಿನಾಂಕ ವಿಸ್ತರಣೆ

SSLC examination
ಎಸ್​ಎಸ್​ಎಲ್​ಸಿ ಪರೀಕ್ಷೆ

By

Published : Dec 29, 2022, 8:28 AM IST

ಬೆಂಗಳೂರು: ಮುಂಬರುವ ಮಾರ್ಚ್​-ಎಪ್ರಿಲ್​ನಲ್ಲಿ ನಡೆಯಲಿರುವ ಎಸ್​ಎಸ್​ಎಲ್​ಸಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳ ನೋಂದಣಿಯ ದಿನಾಂಕವನ್ನು ರಾಜ್ಯ ಸರ್ಕಾರ ವಿಸ್ತರಿಸಿದೆ.

​ಎಸ್​ಎಸ್​ಎಲ್​ಸಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳ ನೋಂದಣಿಗೆ ಸಂಬಂಧಿಸಿದಂತೆ ಉಲ್ಲೇಖಿತ-3ರ ಸುತ್ತೋಲೆಗಳನ್ವಯ ದಿನಾಂಕವನ್ನು ವಿಸ್ತರಿಸಲಾಗಿದ್ದರೂ ಸಹ, ದೂರವಾಣಿಯ ಮುಖಾಂತರ ಖುದ್ದಾಗಿ ಕೆಲವು ಅಭ್ಯರ್ಥಿಗಳು, ಪೋಷಕರು ಮತ್ತು ಮುಖ್ಯೋಪಾಧ್ಯಾಯರು ಪುನ: ಶಾಲಾ ದಿನಾಂಕವನ್ನು ವಿಸ್ತರಿಸಲು ಮಂಡಳಿಗೆ ಮನವಿ ಮಾಡಿದ್ದಾರೆ. ಈ ಹಿನ್ನೆಲೆ ಪರಿಶೀಲನೆ ನಡೆಸಿ ದಿನಾಂಕ ವಿಸ್ತರಣೆ ಮಾಡಲಾಗಿದ್ದು ಕೊನೆಯ ದಿನಾಂಕ 2023 ರ ಜನವರಿ 5 ಆಗಿದೆ ಎಂದು ಶಿಕ್ಷಣ ಇಲಾಖೆ ಸುತ್ತೋಲೆಯಲ್ಲಿ ತಿಳಿಸಿದೆ.

ಅಂತಿಮ ದಿನಾಂಕದೊಳಗೆ ಎಲ್ಲಾ ಅರ್ಹ ಶಾಲಾ, ಖಾಸಗಿ ಮತ್ತು ಪುನರಾವರ್ತಿತ ವಿದ್ಯಾರ್ಥಿಗಳ ನೋಂದಣಿ ಮತ್ತು ಪರೀಕ್ಷಾ ಶುಲ್ಕವನ್ನು ಪಾವತಿ ಮಾಡುವಂತೆ ತಮ್ಮ ಜಿಲ್ಲಾ ಅಥವಾ ತಾಲೂಕು ವ್ಯಾಪ್ತಿಗೆ ಬರುವ ಶಾಲೆಗಳ ಮುಖ್ಯೋಪಾಧ್ಯಾಯರಿಗೆ ಸೂಚಿಸುವುದು. ಜಿಲ್ಲೆ ಅಥವಾ ತಾಲೂಕು ವ್ಯಾಪ್ತಿಯ ಸ್ಥಳೀಯ ದಿನಪತ್ರಿಕೆ ಮತ್ತು ಇತರ ಮಾಧ್ಯಮಗಳ ಮೂಲಕ ಈ ವಿಷಯದ ಬಗ್ಗೆ ಶಾಲಾ ಮುಖ್ಯೋಪಾಧ್ಯಾಯರು, ಪೋಷಕರು ಮತ್ತು ವಿದ್ಯಾರ್ಥಿಗಳ ಗಮನಕ್ಕೆ ಬರುವಂತೆ ವ್ಯಾಪಕ ಪ್ರಚಾರವಾಗವಂತಹ ಅಗತ್ಯ ಕ್ರಮ ಕೈಗೊಳ್ಳುವುದು. ಅಲ್ಲದೇ ಮಾರ್ಚ್-2023ರ ತಿಂಗಳಲ್ಲಿ ಪರೀಕ್ಷೆಯು ಪ್ರಾರಂಭವಾಗುತ್ತಿದ್ದು, ಸಮಯದ ಕೊರತೆಯಿರುವ ಕಾರಣ ಪುನ: ನೋಂದಣಿ ಮತ್ತು ಪರೀಕ್ಷಾ ಶುಲ್ಕ ಪಾವತಿಸಲು ದಿನಾಂಕ ವಿಸ್ತರಣೆಗೆ ಅವಕಾಶ ಕಲ್ಪಿಸಲಾಗುವುದಿಲ್ಲ ಎಂದು ಹೇಳಿದೆ.

ಇದನ್ನೂ ಓದಿ:ಎಸ್​ಎಸ್​ಎಲ್​ಸಿ ಪಿಯುಸಿ ವೇಳಾಪಟ್ಟಿ ನಕಲಿ.. ಸಾಮಾಜಿಕ ಜಾಲತಾಣ ನಂಬದಂತೆ ಸಿಬಿಎಸ್​ಸಿ ಸೂಚನೆ

ABOUT THE AUTHOR

...view details