ಬೆಂಗಳೂರು: ಹಾಲ್ ಟಿಕೆಟ್ ಇದ್ರೂ ಎಸ್ಎಸ್ಎಲ್ಸಿ ಪರೀಕ್ಷಾ ಕೊಠಡಿಯಲ್ಲಿ ತಮ್ಮ ರಿಜಿಸ್ಟರ್ ನಂಬರ್ ಇಲ್ಲದೆ ಇಬ್ಬರು ವಿದ್ಯಾರ್ಥಿಗಳು ಪರದಾಡಿದ ಘಟನೆ ಫ್ರೇಜರ್ ಟೌನ್ ಬಿಬಿಎಂಪಿ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ನಡೆದಿದೆ.
ಪರೀಕ್ಷಾ ಕೊಠಡಿಯಲ್ಲಿ ರಿಜಿಸ್ಟರ್ ನಂಬರ್ ಇಲ್ಲದೆ ಇಬ್ಬರು ವಿದ್ಯಾರ್ಥಿಗಳ ಪರದಾಟ - register number problem
ಹಾಲ್ ಟಿಕೆಟ್ ಇದ್ರೂ ಪರೀಕ್ಷಾ ಹಾಲ್ನಲ್ಲಿ ತಮ್ಮ ರಿಜಿಸ್ಟರ್ ನಂಬರ್ ಇಲ್ಲದೆ ಇಬ್ಬರು ವಿದ್ಯಾರ್ಥಿಗಳು ಕಣ್ಣೀರು ಹಾಕಿದ ಘಟನೆ ಬೆಂಗಳೂರಿನ ಪರೀಕ್ಷಾ ಕೇಂದ್ರವೊಂದರಲ್ಲಿ ನಡೆದಿದೆ.
ವಿದ್ಯಾರ್ಥಿಗಳ ಪರದಾಟ
ವಿದ್ಯಾರ್ಥಿಗಳು ಪರೀಕ್ಷಾ ಹಾಲ್ನಲ್ಲಿ ತಮ್ಮ ನಂಬರ್ ಕಾಣದೆ ಕಣ್ಣೀರು ಹಾಕಿದ್ದಾರೆ. ಪರೀಕ್ಷಾ ಕೇಂದ್ರದಲ್ಲಿ ನಿಮ್ಮ ನಂಬರ್ ಇಲ್ಲ, ನಿಮ್ಮ ಟೀಚರ್ ಅನ್ನು ಕರೆದುಕೊಂಡು ಬನ್ನಿ ಎಂದು ಎಕ್ಸಾಂ ಡ್ಯೂಟಿಯಲ್ಲಿದ್ದ ಶಿಕ್ಷಕರು ವಿದ್ಯಾರ್ಥಿಗಳಿಗೆ ತಿಳಿಸಿದರು. ಬಳಿಕ ಸ್ವಲ್ಪ ಸಮಯ ಗೊಂದಲದ ವಾತಾವರಣ ಸೃಷ್ಟಿಯಾಯ್ತು.
ನಂತರ ರಿಜಿಸ್ಟರ್ ನಂಬರ್ ಖಚಿತಪಡಿಸಿಕೊಂಡು ಪರೀಕ್ಷೆ ಬರೆಯಲು ಆ ವಿದ್ಯಾರ್ಥಿಗಳಿಗೆ ಅನುವು ಮಾಡಿಕೊಡಲಾಯಿತು.