ಬೆಂಗಳೂರು:ರಾಜ್ಯ ವಿಧಾನಸಭೆಗೆ ಇಂದು ನಡೆದ ಚುನಾವಣೆಯಲ್ಲಿ ಮತ ಪ್ರಭುಗಳು ತಮ್ಮ ಕರ್ತವ್ಯ ನಿಭಾಯಿಸಿದ್ದಾರೆ. ಹಳೆ ಮೈಸೂರು ಭಾಗದಲ್ಲಿ ಅಧಿಕ ಮತದಾನವಾಗಿದ್ದು, ಸಂಜೆ 5 ಗಂಟೆಯ ವೇಳೆಗೆ ರಾಜ್ಯದ ಎಲ್ಲ ಭಾಗಕ್ಕಿಂತಲೂ ಅತ್ಯಧಿಕ ಅಂದರೆ ಶೇಕಡಾ 75 ರಷ್ಟು ಮತದಾನವಾಗಿದೆ. ಪ್ರತಿಬಾರಿಯಂತೆ ಬೆಂಗಳೂರು ಪ್ರದೇಶದಲ್ಲಿ ಕಡಿಮೆ ಮತದಾನವಾಗಿದೆ. ಇಲ್ಲಿ ಸುಮಾರು ಶೇ.50 ರಷ್ಟು ಮಾತ್ರ ಹಕ್ಕು ಚಲಾವಣೆ ನಡೆದಿದೆ.
ಮೈಸೂರು ಪ್ರಾಂತ್ಯದಲ್ಲಿ ಸರಾಸರಿ ಶೇಕಡಾ 75 ಮತದಾನ ವಾಗಿದೆ. ಈ ಭಾಗದ ಚಾಮರಾಜನಗರದಲ್ಲಿ ಶೇಕಡಾ 69%, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 76%, ಚಿಕ್ಕಬಳ್ಳಾಪುರದಲ್ಲಿ 77% ಹಾಸನದಲ್ಲಿ 74% ಕೊಡಗಿನಲ್ಲಿ 71% ಕೋಲಾರದಲ್ಲಿ 72% ಮಂಡ್ಯದಲ್ಲಿ 76% ಮೈಸೂರಿನಲ್ಲಿ 68% ರಾಮನಗರದಲ್ಲಿ 79% ತುಮಕೂರಿನಲ್ಲಿ 76% ರಷ್ಟು ಮತದಾನವಾಗಿದೆ.
ಇನ್ನೂ, ಪ್ರಾಂತ್ಯವಾರು ಎರಡನೇ ಅತಿಹೆಚ್ಚು ಮತದಾನವಾಗಿದ್ದು ಕರಾವಳಿ ಪ್ರದೇಶದಲ್ಲಿ. ಇಲ್ಲಿ ಶೇಕಡಾ 72 ರಷ್ಟು ಜನರು ತಮ್ಮ ಹಕ್ಕು ಚಲಾವಣೆ ಮಾಡಿದ್ದಾರೆ. ಇದರಲ್ಲಿ ಉಡುಪಿಯಲ್ಲಿ 74%, ದಕ್ಷಿಣ ಕನ್ನಡದಲ್ಲಿ 70%, ಉತ್ತರಕ ಕನ್ನಡದಲ್ಲಿ 68 ರಷ್ಟು ಮತ ನಡೆದಿದೆ.
ಮಧ್ಯ ಕರ್ನಾಕಟದಲ್ಲಿ ಉತ್ತಮ:ಮಧ್ಯ ಕರ್ನಾಟಕ ಭಾಗದಲ್ಲಿ ಶೇಕಡಾ 70 ರಷ್ಟು ಮತದಾನವಾಗಿದೆ. ಅದರಲ್ಲಿ ಶಿವಮೊಗ್ಗ 70% ಚಿಕ್ಕಮಗಳೂರು 72% ದಾವಣಗೆರೆ 71% ಚಿತ್ರದುರ್ಗದಲ್ಲಿ 70 ಪ್ರತಿಶತ ಮತದಾನ ನಡೆದಿದೆ.