ಬೆಂಗಳೂರು:ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗಿದೆ. ಪ್ರಾಂತ್ಯವಾರು ಗೆಲುವಿನಲ್ಲಿ ಕಾಂಗ್ರೆಸ್ ಅತಿಹೆಚ್ಚು ಸ್ಥಾನಗಳನ್ನು ಸಂಪಾದಿಸಿದೆ. ಬೆಂಗಳೂರಿನ 28 ಕ್ಷೇತ್ರಗಳಲ್ಲಿ ಕಾಂಗ್ರೆಸ್ 13, ಬಿಜೆಪಿ 15 ಸ್ಥಾನಗಳನ್ನು ಗಳಿಸಿದ್ದರೆ, ಜೆಡಿಎಸ್ ಮತ್ತು ಇತರರು ಯಾವುದೇ ಕ್ಷೇತ್ರವನ್ನು ಗಳಿಸಿಲ್ಲ. ಮಧ್ಯ ಕರ್ನಾಟಕದ 25 ಕ್ಷೇತ್ರಗಳಲ್ಲಿ ಕಾಂಗ್ರೆಸ್ 19 ಸ್ಥಾನಗಳನ್ನು ಪಡೆದಿದೆ. ಬಿಜೆಪಿ 5, ಜೆಡಿಎಸ್ 1 ಸ್ಥಾನದಲ್ಲಿ ಗೆದ್ದಿದೆ. ಕರಾವಳಿ ಕರ್ನಾಟಕದಲ್ಲಿನ 19 ಕ್ಷೇತ್ರಗಳಲ್ಲಿ 13 ಕ್ಷೇತ್ರ, ಕಾಂಗ್ರೆಸ್ 6 ಸ್ಥಾನಗಳನ್ನು ಪಡೆದರೆ, ಜೆಡಿಎಸ್ ಯಾವುದೇ ಖಾತೆ ತೆರೆದಿಲ್ಲ.
ಇನ್ನೂ, ಕಲ್ಯಾಣ ಕರ್ನಾಟಕದ 41 ಸ್ಥಾನಗಳಲ್ಲಿ ಬಿಜೆಪಿ 10, ಕಾಂಗ್ರೆಸ್ 26, ಜೆಡಿಎಸ್ 3, ಇತರರಿಗೆ 2 ಸ್ಥಾನ ಲಭಿಸಿವೆ. ಕಿತ್ತೂರು ಕರ್ನಾಟಕದಲ್ಲಿನ 50 ಸ್ಥಾನಗಳಲ್ಲಿ 33 ಸ್ಥಾನ, ಬಿಜೆಪಿಗೆ 16, ಜೆಡಿಎಸ್ಗೆ 1 ಸ್ಥಾನ ಸಿಕ್ಕಿವೆ. ಹಳೆ ಮೈಸೂರು ಪ್ರಾಂತ್ಯದಲ್ಲಿನ 61 ಕ್ಷೇತ್ರಗಳಲ್ಲಿ ಬಿಜೆಪಿ 9 ಸ್ಥಾನ, 39 ಕ್ಷೇತ್ರ, ಜೆಡಿಎಸ್ಗೆ 14, ಇತರರು 2 ಸ್ಥಾನವನ್ನು ಗೆದ್ದುಕೊಂಡಿದ್ದಾರೆ.
ಕಳೆದ ಬಾರಿ 2018 ರ ಚುನಾವಣೆಯಲ್ಲಿ ಕಿತ್ತೂರು ಕರ್ನಾಟಕದಲ್ಲಿ ಕಾಂಗ್ರೆಸ್ 18, ಬಿಜೆಪಿ 31, ಜೆಡಿಎಸ್ 3 ಸ್ಥಾನ ಪಡೆದಿತ್ತು. ಮಧ್ಯ ಕರ್ನಾಟಕದಲ್ಲಿ ಬಿಜೆಪಿ 20, ಜೆಡಿಎಸ್ 1, ಕಾಂಗ್ರೆಸ್ 4 ಸ್ಥಾನ ಗೆದ್ದಿತ್ತು. ಕಲ್ಯಾಣ ಕರ್ನಾಟಕದಲ್ಲಿ ಕಾಂಗ್ರೆಸ್ 19, ಬಿಜೆಪಿ 18, ಜೆಡಿಎಸ್ 4 ಸ್ಥಾನಗಳನ್ನು ಸಂಪಾದನೆ ಮಾಡಿತ್ತು. ಮೈಸೂರು ಕರ್ನಾಟಕದಲ್ಲಿ ಜೆಡಿಎಸ್ 31, ಕಾಂಗ್ರೆಸ್ 19, ಬಿಜೆಪಿ 10, ಇತರ 1 ಕ್ಷೇತ್ರಗಳನ್ನು ಗೆದ್ದುಕೊಂಡಿತ್ತು. ಬೆಂಗಳೂರಿನಲ್ಲಿ ಬಿಜೆಪಿ 11, ಜೆಡಿಎಸ್ 3, ಕಾಂಗ್ರೆಸ್ 14 ಸ್ಥಾನ ಗಳಿಸಿದರೆ, ಕರಾವಳಿಯಲ್ಲಿ ಬಿಜೆಪಿ 16, ಕಾಂಗ್ರೆಸ್ 3 ಸ್ಥಾನಗಳನ್ನು ಪಡೆದುಕೊಂಡಿತ್ತು.
ಹೊಸ ಕ್ಷೇತ್ರದಲ್ಲಿ ಗೆಲುವು, ಹಳೆಯವು ಮಾಯ:ಆಡಳಿತದಲ್ಲಿ ಬಿಜೆಪಿ ಈ ಬಾರಿ ಭಾರೀ ಸಂಖ್ಯೆಯ ಕ್ಷೇತ್ರಗಳನ್ನು ಕಳೆದುಕೊಂಡಿದೆ. ಇದು ಆಡಳಿತ ವಿರೋಧಿ ಅಲೆಯನ್ನು ಪ್ರತಿಬಿಂಬಿಸುತ್ತದೆ. ಬಿಜೆಪಿ 2018 ರಲ್ಲಿ ಗೆದ್ದಿದ್ದ 68 ಕ್ಷೇತ್ರಗಳನ್ನು ಈ ಬಾರಿ ಕಳೆದುಕೊಂಡರೆ 15 ಹೊಸ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಅದೇ ರೀತಿ ಕಾಂಗ್ರೆಸ್ 16 ಹಳೆಯ ಕ್ಷೇತ್ರ ಕಳೆದುಕೊಂಡರೆ, 80 ಹೊಸ ಕ್ಷೇತ್ರಗಳನ್ನು ಕೊಳ್ಳೆ ಹೊಡೆದಿದೆ. ಜೆಡಿಎಸ್ 26 ಹಳೆಯ ಸ್ಥಾನಗಳ ಖೋತಾ ಹೊಂದಿದ್ದು, 13 ಹೊಸ ಕ್ಷೇತ್ರಗಳಲ್ಲಿ ಜಯ ಸಾಧಿಸಿದೆ. ಗೆದ್ದ ನಾಲ್ವರು ಇತರರು ಹೊಸ ಅಭ್ಯರ್ಥಿಗಳಾಗಿದ್ದಾರೆ.
ಓದಿ:ಬೆಳಗಾವಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪ್ರಾಬಲ್ಯ: 11 ಕ್ಷೇತ್ರ ಕೈ ವಶ, 8 ಸ್ಥಾನ ಬಿಜೆಪಿ ಮಡಿಲಿಗೆ