ಕರ್ನಾಟಕ

karnataka

ETV Bharat / state

ಪಾವಗಡದಲ್ಲಿ ಸಂಸದ ನಾರಾಯಣಸ್ವಾಮಿ ಪ್ರವೇಶಕ್ಕೆ ನಿರಾಕರಣೆ: ಉಗ್ರಪ್ಪ ಹೇಳಿದ್ದೇನು? - ಪ್ರವೇಶ ನಿರಾಕರಣೆ

ಪಾವಗಡ ತಾಲೂಕಿನ ಗೊಲ್ಲರಹಟ್ಟಿಯಲ್ಲಿ ಬಿಜೆಪಿ ಸಂಸದ ನಾರಾಯಣಸ್ವಾಮಿಗೆ ಪ್ರವೇಶವನ್ನು ನಿರಾಕರಿಸಲಾಯಿತು ಎಂಬುದರ ಎಂಬ ಬಗ್ಗೆ ತನಿಖೆ ನಡೆಯಬೇಕೆಂದು ಮಾಜಿ ಸಂಸದ ವಿ ಎಸ್ ಉಗ್ರಪ್ಪ ಆಗ್ರಹಿಸಿದ್ದಾರೆ. ಅಲ್ಲದೆ, ಮನುಷ್ಯರೆಲ್ಲರೂ ಒಂದೇ. ಎಲ್ಲರ ಮೈಯಲ್ಲಿ ಹರಿಯುತ್ತಿರುವುದು ಕೆಂಪು ರಕ್ತವೇ ಎಂದು ಹೇಳಿದ್ದಾರೆ.

ಉಗ್ರಪ್ಪ

By

Published : Sep 17, 2019, 4:14 PM IST

Updated : Sep 17, 2019, 4:50 PM IST

ಬೆಂಗಳೂರು:ಪಾವಗಡ ತಾಲೂಕಿನ ಗೊಲ್ಲರಹಟ್ಟಿ ಗ್ರಾಮದಲ್ಲಿ ಬಿಜೆಪಿ ಸಂಸದ ನಾರಾಯಣಸ್ವಾಮಿಗೆ ಪ್ರವೇಶ ನಿರಾಕರಿಸಿರುವುದನ್ನು ಮಾಜಿ ಸಂಸದ ವಿ ಎಸ್ ಉಗ್ರಪ್ಪ ಖಂಡಿಸಿದ್ದಾರೆ. ಅಲ್ಲದೆ, ಈ ಕುರಿತು ತನಿಖೆ ನಡೆಸಬೇಕೆಂದು ಅವರು ಆಗ್ರಹಿಸಿದ್ದಾರೆ.

ಮಾಜಿ ಸಂಸದ ವಿ ಎಸ್ ಉಗ್ರಪ್ಪ

ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಈ ಘಟನೆ ಯಾಕೆ ನಡೀತು ಅನ್ನುವ ಬಗ್ಗೆ ತನಿಖೆಯಾಗಬೇಕು. ಕಳೆದ ಲೋಕಸಭೆ ಚುನಾವಣೆಯಲ್ಲಿ ನಾರಾಯಣಸ್ವಾಮಿ ಚಿತ್ರದುರ್ಗ ಕ್ಷೇತ್ರದಿಂದ ಆಯ್ಕೆಯಾಗಿ ಸಂಸದರಾಗಿದ್ದಾರೆ. ಸಂಬಂಧಪಟ್ಟ ಇಲಾಖೆಗಳು ಆ ಗ್ರಾಮಕ್ಕೆ ಭೇಟಿ ನೀಡಬೇಕು ಎಂದು ಆಗ್ರಹಿಸಿದರು.

ನಾವೆಲ್ಲರೂ ಮೊದಲು ಮನುಷ್ಯ ಜಾತಿ. ನಮ್ಮೆಲ್ಲರ ದೇಹದಲ್ಲಿರುವುದು ರಕ್ತ ಕೆಂಪು ಬಣ್ಣದ್ದೇ ಆಗಿದೆ. ಸಂವಿಧಾನದಲ್ಲಿ ಅಸ್ಪೃಶ್ಯತೆ ಇರಬಾರದು ಎಂದು ಹೇಳಲಾಗಿದೆ. ಆದರೆ ಇಂದಿಗೂ ಅದು ಆಚರಣೆಯಲ್ಲಿರುವುದು ವಿಷಾದದ ಸಂಗತಿ ಎಂದು ಘಟನೆಯನ್ನು ಉಗ್ರಪ್ಪ ಖಂಡಿಸಿದ್ದಾರೆ.

Last Updated : Sep 17, 2019, 4:50 PM IST

ABOUT THE AUTHOR

...view details