ಬಜಾರ್ ಹಾಗು ಬೈ ಟೂ ಲವ್ ಸಿನಿಮಾ ಮೂಲಕ ಸ್ಯಾಂಡಲ್ವುಡ್ನಲ್ಲಿ ಭರವಸೆ ಹುಟ್ಟಿಸಿರೋ ನಟ ಧನ್ವೀರ್ ಗೌಡ. ಸದ್ಯ ಇವರು ವಾಮನ ಸಿನಿಮಾ ಶೂಟಿಂಗ್ನಲ್ಲಿ ಬಿಜಿಯಾಗಿದ್ದಾರೆ. ಸಿನಿಮಾದ ನಾಯಕಿ ಯಾರು ಎಂದು ಕಾದಿದ್ದ ಇವರಿಗೆ ಕೊಡಗಿನ ಬೆಡಗಿ ಸಾಥ್ ನೀಡಲು ಸಿದ್ದರಾಗಿದ್ದಾರೆ.
ಏಕ್ ಲವ್ ಯಾ ಸಿನಿಮಾ ಮೂಲಕ ಚಂದನವನ ಪ್ರವೇಶಿಸಿದ್ದ ರೀಷ್ಮಾ ನಾಣಯ್ಯ ಈ ಚಿತ್ರದಲ್ಲಿ ತೆರೆ ಹಂಚಿಕೊಳ್ಳಲಿದ್ದಾರೆ. ಕಮರ್ಷಿಯಲ್ ಆಕ್ಷನ್ ಸಿನಿಮಾ ವಾಮನದಲ್ಲಿ ಒಂದೊಳ್ಳೆ ಲವ್ ಸ್ಟೋರಿ ಇರಲಿದೆ ಎಂದು ಚಿತ್ರತಂಡ ತಿಳಿಸಿದೆ.