ಬೆಂಗಳೂರು:ವಿಧಾನ ಪರಿಷತ್ ಸದಸ್ಯರಿಗೆ ನೀಡಿದ್ದ ಅನುದಾನವನ್ನು ಸರ್ಕಾರ ಕಿತ್ತುಕೊಂಡಿದೆ. ಅದಕ್ಕೆ ಉತ್ತರಬೇಕು ಎಂದು ಜೆಡಿಎಸ್ ಸದಸ್ಯ ಶ್ರೀಕಂಠೇಗೌಡ ಒತ್ತಾಯಿಸಿದರು. ವಿಧಾನ ಪರಿಷತ್ನಲ್ಲಿ ಮಾತನಾಡಿದ ಅವರು, ಇದು ವಿಧಾನ ಪರಿಷತ್ ಹಕ್ಕುಚ್ಯುತಿಯಾಗಿದೆ. ನಮಗೆ ಕೊಡುವ ಅನುದಾನ ಕಡಿತವಾಗಿದೆ. ಹೀಗಾದರೆ ಅಭಿವೃದ್ಧಿ ಮಾಡಲು ಹೇಗೆ ಸಾಧ್ಯ?. ಆದಷ್ಟು ಬೇಗ ನಮಗೆ ಆಗಿರುವ ಅನ್ಯಾಯಕ್ಕೆ ಉತ್ತರ ಸಿಗಬೇಕು ಎಂದು ಆಗ್ರಹಿಸಿದರು.
ಜೆಡಿಎಸ್ ಸದಸ್ಯ ಭೋಜೇಗೌಡ ಮಾತನಾಡಿ, ನಮಗೆ ಶಾಲೆಗಳನ್ನು ದತ್ತು ತೆಗೆದುಕೊಳ್ಳಿ ಎನ್ನುತ್ತಾರೆ. ಕೊಟ್ಟಿದ್ದ 2 ಕೋಟಿ ಅನುದಾನ ವಾಪಸ್ ಪಡೆಯಲಾಗಿದೆ. ಇದು ಸರಿಯಲ್ಲ ಎಂದರು. ರಘುನಾಥ್ ರಾವ್ ಮಲ್ಕಾಪುರೆ ಮಾತನಾಡಿ, ವಿಧಾನಸಭೆ ಸದಸ್ಯರಿಗೆ 50-60 ಕೋಟಿ ರೂ. ಅನುದಾನ ನೀಡಲಾಗುತ್ತದೆ. ಆದರೆ, ಪರಿಷತ್ ಸದಸ್ಯರಿಂದ ವಾಪಸ್ ಪಡೆಯುವುದು ಸರಿಯಲ್ಲ. ನಮ್ಮ ಕ್ಷೇತ್ರದ ಅಭಿವೃದ್ಧಿ ಕುಂಠಿತ ಆಗಿದೆ. ಆದ್ದರಿಂದ ಸರ್ಕಾರ ನಮ್ಮ ಅನುದಾನ ಕಿತ್ತುಕೊಳ್ಳುವುದು ಬೇಡ. ವಾಪಸ್ ನೀಡಲಿ ಎಂದು ಒತ್ತಾಯಿಸಿದರು.