ಕರ್ನಾಟಕ

karnataka

ETV Bharat / state

ಗೂಡ್ಸ್ ವಾಹನ ಸಂಚಾರ ನಿರ್ಬಂಧ: ಹೆಬ್ಬಾಳದಲ್ಲಿ ಕಡಿಮೆಯಾಯ್ತು ಟ್ರಾಫಿಕ್ ಜಾಮ್! - ಈಟಿವಿ ಭಾರತ ಕನ್ನಡ

ಗೂಡ್ಸ್ ವಾಹನ ಸಂಚಾರ ನಿರ್ಬಂಧದಿಂದಾಗಿ ಹೆಬ್ಬಾಳದಲ್ಲಿ ಟ್ರಾಫಿಕ್ ಜಾಮ್ ಕಡಿಮೆಯಾಗಿದೆ.

reduced-traffic-jam-in-hebbal
ಗೂಡ್ಸ್ ವಾಹನ ಸಂಚಾರ ನಿರ್ಬಂಧದಿಂದ ಹೆಬ್ಬಾಳದಲ್ಲಿ ಕಡಿಮೆಯಾಯ್ತು ಟ್ರಾಫಿಕ್ ಜಾಮ್!

By

Published : Nov 25, 2022, 3:32 PM IST

Updated : Nov 25, 2022, 3:50 PM IST

ಬೆಂಗಳೂರು:ಗೂಡ್ಸ್ ವಾಹನಗಳಿಗೆ ಬೆಳಗಿನ ಅವಧಿಯಲ್ಲಿ ಸಂಚಾರ ನಿಷೇಧ ಹಿನ್ನೆಲೆ ಹೆಬ್ಬಾಳದಲ್ಲಿ ಟ್ರಾಫಿಕ್ ಜಾಮ್ ಕಡಿಮೆಯಾಗಿದ್ದು, ಈ ಹಿಂದಿನ 25 ನಿಮಿಷಗಳ ಪ್ರಯಾಣವನ್ನು ಏಳೆಂಟು ನಿಮಿಷಗಳಿಗೆ ಇಳಿಸಲಾಗಿದೆ ಎಂದು ಸಂಚಾರಿ ವಿಭಾಗದ ವಿಶೇಷ ಆಯುಕ್ತ ಡಾ.ಎಂ‌.ಸಲೀಂ ತಿಳಿಸಿದ್ದಾರೆ‌‌.

ಗೂಡ್ಸ್ ವಾಹನ ಸಂಚಾರ ನಿರ್ಬಂಧ: ಹೆಬ್ಬಾಳದಲ್ಲಿ ಕಡಿಮೆಯಾಯ್ತು ಟ್ರಾಫಿಕ್ ಜಾಮ್!

ವಾಹನ ಸಂಚಾರ ದಟ್ಟಣೆಯಿಂದಾಗಿ ನಿತ್ಯ ಲಕ್ಷಾಂತರ ವಾಹನ ಸವಾರರು ಟ್ರಾಫಿಕ್ ಜಾಮ್ ನಿಂದ ಹೈರಾಣಾಗಿದ್ದರು. ‌ ‌ಹೀಗಾಗಿ ಸಾದಹಳ್ಳಿ ಟೋಲ್ ನಿಂದ ಹೆಬ್ಬಾಳದವರೆಗೆ ಗೂಡ್ಸ್ ವಾಹನಗಳನ್ನು ನಿತ್ಯ 8.30ರಿಂದ 10.30ರವರೆಗೆ ನಿಷೇಧ ಮಾಡಿದ್ದ ಪರಿಣಾಮ ಶೇಕಡಾ 25ರಷ್ಟು ಸಂಚಾರ ದಟ್ಟಣೆ ತಗ್ಗಿದೆ‌‌. ಈ ಹಿಂದೆ ಹೆವಿ ವೈಕಲ್ ಗಳ ಸಂಚಾರದಿಂದ ಹೆಬ್ಬಾಳ ಜಂಕ್ಷನ್ ದಾಟಲು ಸುಮಾರು 25 ನಿಮಿಷ ಬೇಕಾಗುತಿತ್ತು.

ಇದೀಗ ಏಳೆಂಟು ನಿಮಿಷಗಳಿಗೆ ತರಲಾಗಿದೆ. ವಾಹನ ದಟ್ಟಣೆ ಅನುಗುಣವಾಗಿ ರಸ್ತೆ ಮೂಲಸೌಕರ್ಯ ಕಲ್ಪಿಸಿದರೆ ಸಂಚಾರ ಸಮಸ್ಯೆ ನಿವಾರಿಸಬಹುದು ಎಂದು ಅಭಿಪ್ರಾಯಪಟ್ಟರು.

ಹೆಬ್ಬಾಳ ರೀತಿ ನಗರದಲ್ಲಿ ಹಲವು ಜಂಕ್ಷನ್​​​​ಗಳಲ್ಲಿ ಟ್ರಾಫಿಕ್‌ ದಟ್ಟಣೆ ಬಗ್ಗೆ ಅಧ್ಯಯನ ನಡೆಸಲಾಗುವುದು. ಕೆಲವು ಕಡೆ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಕಡೆಯಿಂದ ಲೋಪವಾದರೆ ಇನ್ನೂ ಕೆಲವಡೆ ತಾಂತ್ರಿಕ ಸಮಸ್ಯೆಯಿದೆ. ಗೊರಗುಂಟೆಪಾಳ್ಯದಲ್ಲಿ ಟ್ರಾಫಿಕ್ ಸಮಸ್ಯೆಯೆಗೆ ಪ್ರತಿಕ್ರಿಯಿಸಿ ಅಲ್ಲಿ ಬೇರೆ ರೀತಿಯಲ್ಲಿ ಕಾರ್ಯರೂಪಕ್ಕೆ ತರಲು ಅಧ್ಯಯನ ನಡೆಸಲಾಗುತ್ತಿದೆ. ಇನ್ನೊಂದು ವಾರದಲ್ಲಿ ಈ ಬಗ್ಗೆ ಸುತ್ತೋಲೆ ಹೊರಡಿಸುತ್ತೇವೆ ಎಂದರು.

ಇದನ್ನೂ ಓದಿ:ಬೆಂಗಳೂರು ಟ್ರಾಫಿಕ್ ನಿಯಂತ್ರಿಸಲು ಈ ರಸ್ತೆಯಲ್ಲಿ ಸರಕು ಸೇವಾ ವಾಹನ ಸಂಚಾರ ಬಂದ್

Last Updated : Nov 25, 2022, 3:50 PM IST

ABOUT THE AUTHOR

...view details