ಬೆಂಗಳೂರು: ರಾಜಧಾನಿಯಲ್ಲಿ ಇತ್ತೀಚೆಗೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಅದರಲ್ಲಿಯೂ ಮೊಬೈಲ್ ರಾಬರಿ, ಲಾಂಗು ಮಚ್ಚು ತೋರಿಸಿ ಹಣ ಸುಲಿಗೆ ಮಾಡೋ ಕೇಸ್ಗಳಂತೂ ವಿಪರೀತವಾಗಿದ್ದವು. ಆದರೆ ಕಳೆದೊಂದು ವಾರದಿಂದ ಸಿಲಿಕಾನ್ ಸಿಟಿಯಲ್ಲಿ ಮಳೆ ಅಬ್ಬರದಲ್ಲಿ ರಾಬರ್ಸ್ ಕೂಡ ಫುಲ್ ಸೈಲೆಂಟ್ ಆಗಿದ್ದಾರೆ.
ಕಳೆದ ಒಂದು ವಾರದಲ್ಲಿ ನಗರದಲ್ಲಿ ರಾಬರಿ ಕೇಸ್ಗಳೇ ರಿಪೋರ್ಟ್ ಆಗಿಲ್ಲ. ಪ್ರತಿನಿತ್ಯ ಡಿವಿಷನ್ಗೆ ಎರಡು ಮೂರು ರಾಬರಿ ಕೇಸ್ಗಳು ದಾಖಲಾಗುತ್ತಿತ್ತು. ಆದರೆ ವಾರದಿಂದ ಕಂಟ್ರೋಲ್ ರೂಂಗೂ ಕಳ್ಳತನ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ. ನಗರದ 8 ಡಿವಿಷನ್ಗಳಲ್ಲಿ ಪ್ರತಿನಿತ್ಯ 15-20 ರಾಬರಿ ಕೇಸ್ ವರದಿ ಆಗುತ್ತಿದ್ದವು. ರಾತ್ರಿ ಒಂಟಿಯಾಗಿ ಬರೋರನ್ನು ಗುರಿಯಾಗಿಸಿ ಮಾಡುತ್ತಿದ್ದ ಕಳ್ಳತನ ಮತ್ತು ಐಟಿ ಬಿಟಿ ಕಂಪನಿ ಹೆಚ್ಚಾಗಿರೋ ಏರಿಯಾದ ಕಳ್ಳತನ ಕೇಸ್ ದಾಖಲಾಗಿಲ್ಲ.