ಬೆಂಗಳೂರು:ನಾಳೆಯಿಂದ ರಾಜ್ಯದಲ್ಲಿ ಲಾಕ್ಡೌನ್ 3.O ಪ್ರಾರಂಭವಾಗಲಿದ್ದು, ಕೇಂದ್ರ ಸರ್ಕಾರ ವರ್ಗೀಕರಿಸಿದ ರೆಡ್ ಝೋನ್ಗಳನ್ನೇ ರಾಜ್ಯ ಸರ್ಕಾರ ಪರಿಗಣಿಸಿದೆ.
ಕೇಂದ್ರದ ಪಟ್ಟಿಯಲ್ಲಿರುವ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ಮೈಸೂರು ಜಿಲ್ಲೆಗಳನ್ನು ಮಾತ್ರ ರೆಡ್ಝೋನ್ ಎಂದು ಪರಿಗಣಿಸಲಾಗಿದೆ. ಅದರಂತೆ ರಾಜ್ಯ ಸರ್ಕಾರ ವಲಯವಾರು ವರ್ಗೀಕರಣ ಮಾಡಿದೆ. ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್ ಈ ಸಂಬಂಧ ಆದೇಶ ಹೊರಡಿಸಿದ್ದು, ಕೇಂದ್ರ ಸರ್ಕಾರ ನೀಡಿರುವ ಪಟ್ಟಿಯಂತೆ ಬೆಂಗಳೂರು ನಗರ, ಬೆಂ.ಗ್ರಾಮಾಂತರ ಮತ್ತು ಮೈಸೂರನ್ನು ರೆಡ್ಝೋನ್ ಎಂದು ಪರಿಗಣಿಸಿದೆ.
ಆ ಮೂಲಕ ಈ ಮುಂಚೆ ತಾನೇ ವರ್ಗೀಕರಿಸಿದ ರೆಡ್ಝೋನ್ಗಳನ್ನು ರಾಜ್ಯ ಸರ್ಕಾರ ಕೈಬಿಟ್ಟಿದೆ. ರಾಜ್ಯ ಸರ್ಕಾರ ಈ ಮುಂಚೆ 6 ರೆಡ್ಝೋನ್ ಅಂತಲೂ, 10 ಆರೇಂಜ್ ಝೋನ್ ಅಂತಲೂ ಹಾಗೂ 14 ಗ್ರೀನ್ ಝೋನ್ ಅಂತಲೂ ವರ್ಗೀಕರಿಸಿತ್ತು. ರೆಡ್ ಝೋನ್ಗಳನ್ನೂ, ರೆಡ್ಝೋನ್ಗಳ ಕಂಟೈನ್ಮೆಂಟ್ ವಲಯಗಳನ್ನೂ ಬಿಟ್ಟು ಉಳಿದ ಎಲ್ಲಾ ಕಡೆ ಕೇಂದ್ರದ ಮಾರ್ಗಸೂಚಿಗಳು ಯಥಾವತ್ತು ಜಾರಿ ಮಾಡಿದೆ.