ಬೆಂಗಳೂರು: ಕೋವಿಡ್ ಹಿನ್ನೆಲೆ ಸ್ವಯಂ ಪ್ರೇರಿತ ರಕ್ತದಾನ ಶಿಬಿರಗಳು ಕಡಿಮೆಯಾದ ಹಿನ್ನೆಲೆ ರೆಡ್ ಕ್ರಾಸ್ ರಾಜ್ಯ ಶಾಖೆಯು ನೂತನ ರಕ್ತ ಸಂಗ್ರಹ ವಾಹನಕ್ಕೆ ಚಾಲನೆ ನೀಡಲಾಯಿತು.
ವಾಹನಕ್ಕೆ ಚಾಲನೆ ನೀಡಿ ಮಾತನಾಡಿದ ರೆಡ್ ಕ್ರಾಸ್ ರಾಜ್ಯ ಶಾಖೆ ಸಭಾಪತಿ ಎಸ್ ನಾಗಣ್ಣ, ಈ ಪರ್ಯಾಯ ರಕ್ತ ಸಂಗ್ರಹ ವಾಹನ ವ್ಯವಸ್ಥೆಯ ಮೂಲಕ ಸ್ವಯಂ ಪ್ರೇರಿತ ರಕ್ತದಾನಿಗಳಿಂದ ರಕ್ತ ಸಂಗ್ರಹಿಸಿ ಅಗತ್ಯವಿರುವವರಿಗೆ ತಲುಪಿಸುವ ಉದ್ದೇಶವಿದೆ.
ಕೋವಿಡ್ ಸಂದರ್ಭದಲ್ಲಿ 15 ರಿಂದ 20 ಜನ ಸ್ವಯಂ ಪ್ರೇರಿತರಾಗಿ ಒಂದೆಡೆ ರಕ್ತದಾನ ಮಾಡಲು ಇಚ್ಛಿಸಿದ್ರೇ, ರೆಡ್ ಕ್ರಾಸ್ ಸಂಸ್ಥೆ ಸಂಪರ್ಕಿಸಬೇಕು. ರಕ್ತದಾನ ಶಿಬಿರವನ್ನು ಇಚ್ಛಿಸಿದ ಸ್ಥಳದಲ್ಲಿ ಈ ವಾಹನದ ಮೂಲಕ ರೆಡ್ ಕ್ರಾಸ್ ರಕ್ತದಾನ ಶಿಬಿರ ಆಯೋಜಿಸಲಾಗುತ್ತದೆ.
ಆಯೋಜನೆಯ ಸಂದರ್ಭದಲ್ಲಿ ಕೋವಿಡ್ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದು. ಈ ನಿಟ್ಟಿನಿಂದ ಬೆಂಗಳೂರು ನಗರದ ಮಹಾಜನತೆ ಈ ಅಮೂಲ್ಯ ಯೋಜನೆಗೆ ಸ್ಪಂದಿಸಿ ಸ್ವಯಂಪ್ರೇರಿತ ರಕ್ತದಾನಕ್ಕೆ ಮುಂದಾಗಬೇಕು ಎಂದು ಮನವಿ ಮಾಡಿದ್ದಾರೆ.