ಬೆಂಗಳೂರಿನಲ್ಲಿರುವ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ (ಐಐಎಸ್ಸಿ) ಖಾಲಿ ಇರುವ ಒಂದು ಲೈಬ್ರರಿಯನ್ (ಗ್ರಂಥಾಪಾಲಕರ) ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ನಿಯೋಜನೆ ಹಾಗೂ ಒಪ್ಪಂದದ ಆಧಾರದ ಮೇಲೆ ಈ ಹುದ್ದೆ ನೇಮಕಾತಿ ನಡೆಯಲಿದೆ. ಐದು ವರ್ಷದ ಒಪ್ಪಂದದ ಹುದ್ದೆ ಇದಾಗಿದ್ದು, ಈ ಹುದ್ದೆಯಲ್ಲಿ ಆಸಕ್ತಿ ಹೊಂದಿರುವ ಸೂಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆ ನೇಮಕಾತಿ, ಅರ್ಜಿ ಸಲ್ಲಿಕೆ, ವೇತನ ಸೇರಿದಂತೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಹುದ್ದೆ ವಿವರ: ಐಐಎಸ್ಸಿಯಲ್ಲಿ ಖಾಲಿ ಇರುವ ಒಂದು ಲೈಬ್ರರಿಯನ್ ಹುದ್ದೆಗೆ ಅರ್ಜಿ ಆಹ್ವಾನ
ವಿದ್ಯಾರ್ಹತೆ: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಧಿಕೃತ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ ಮಾಹಿತಿ ವಿಜ್ಞಾನ ಅಥವಾ ಲೈಬ್ರರಿ ಸೈನ್ಸ್ನಲ್ಲಿ ಸ್ನಾತಕೋತ್ತರ ಪದವಿ ಅಥವಾ ಪಿಎಚ್ಡಿಯನ್ನು ಪೂರ್ಣಗೊಳಿಸಿರಬೇಕು.
ಅಪೇಕ್ಷಿತ ಅರ್ಹತೆ:ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆಧುನಿಕ ತಂತ್ರಜ್ಞಾನ ಮಾಹಿತಿ ಹೊಂದಿದ್ದು, ಸಂಗ್ರಹ ಮಾಡುವುದನ್ನು ತಿಳಿದಿರಬೇಕು, ಲೈಬ್ರರಿಯಲ್ಲಿನ ಹೊಸ ತಂತ್ರಜ್ಞಾನದ ಬಗ್ಗೆ ಅರಿವು ಇರಬೇಕು.
ಅನುಭವ: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಸರ್ಕಾರ, ಸರ್ಕಾರದ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ 10 ವರ್ಷದ ಹುದ್ದೆ ಅನುಭವ ಅಥವಾ ಲೈಬ್ರರಿ ಸೈನ್ಸ್ ಅಸಿಸ್ಟಂಟ್/ ಅಸೋಸಿಯೇಟ್ ಪ್ರೊಫೆಸರ್ ಆಗಿ 10 ವರ್ಷದ ಅನುಭವ ಹೊಂದಿರಬೇಕಿದೆ.
ಡೆಪ್ಯೂಟೇಷನ್ ಬಯಸುತ್ತಿರುವ ಅಭ್ಯರ್ಥಿಗಳು ಈಗಾಗಲೇ ಹೊಂದಿರುವ ಹುದ್ದೆ ಕುರಿತ ವಿವರಣೆ ನೀಡಬೇಕಿದೆ.