ಬೆಂಗಳೂರು :ನಗರದಲ್ಲಿ ಕೊರೊನಾದಿಂದ ಗುಣಮುಖರಾದವರ ಪ್ರಮಾಣ ಇಂದು ದಿಢೀರನೆ ಏರಿಕೆಯಾಗಿದೆ. ಒಟ್ಟು 10,722 ಮಂದಿ ಗುಣಮುಖರಾಗಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 52,455 ಸಕ್ರಿಯ ಪ್ರಕರಣಗಳು ಇನ್ನೂ ಉಳಿದಿವೆ. ಆದರೆ, ಪಾಲಿಕೆ ಅಧಿಕಾರಿಗಳ ಪ್ರಕಾರ ಸದ್ಯ ಸಕ್ರಿಯ ಪಾಸಿಟಿವ್ ಪ್ರಕರಣಗಳು 20 ಸಾವಿರ ಅಷ್ಟೇ ಇದ್ದು, ಉಳಿದವರ ಸಂಪರ್ಕ ಹಾಗೂ ಮಾಹಿತಿ ಸಿಗದ ಕಾರಣ ಸಕ್ರಿಯ ಪ್ರಕರಣಗಳಲ್ಲೇ ಉಳಿಸಿಕೊಳ್ಳಲಾಗಿದೆ.
ಆದರೆ, ವ್ಯಾಪಕವಾಗಿ ಪೊಲೀಸರು ಹಾಗೂ ಆಸ್ಪತ್ರೆ ಆಡಿಟ್, ಸಹಾಯವಾಣಿ ಮೂಲಕ ಪತ್ತೆ ಹಚ್ಚಿ, ಈ ತಿಂಗಳಾಂತ್ಯದಲ್ಲಿ ನಿಖರ ಮಾಹಿತಿ ಕೊಡಲಾಗುವುದು ಎಂದು ತಿಳಿಸಿದ್ದರು. ಹೀಗಾಗಿ, ಮೊದಲ ಭಾಗವಾಗಿ ಇಂದು 10 ಸಾವಿರಕ್ಕೂ ಹೆಚ್ಚು ಜನರ ಮಾಹಿತಿ ಕಲೆ ಹಾಕಲಾಗಿದೆ. ಗುಣಮುಖರಾಗಿರುವುದು ದೃಢಪಟ್ಟಿರುವ ಕಾರಣ ಈ ಪಟ್ಟಿಗೆ ಸೇರಿಸಲಾಗಿದೆ.