ಕರ್ನಾಟಕ

karnataka

ETV Bharat / state

ಮುದ್ರಾಂಕ ಮತ್ತು ನೋಂದಣಿ ಶುಲ್ಕ ಮೂಲದ ಆದಾಯದಲ್ಲಿ ಚೇತರಿಕೆ!

ಕೊರೊನಾ ಸೋಂಕಿನಿಂದ ಜರ್ಜರಿತವಾಗಿದ್ದ ಮುದ್ರಾಂಕ ಮತ್ತು ನೋಂದಣಿ ಶುಲ್ಕ ಮೂಲದ ಆದಾಯ ಸದ್ಯ ಏರುಗತಿ ಸಾಧಿಸುತ್ತಿದೆ ಎಂದು ಉನ್ನತ ಮೂಲಗಳು ತಿಳಿಸುತ್ತಿವೆ.

Recovery in registration fee source income
ನೋಂದಣಿ ಶುಲ್ಕ ಮೂಲದ ಆದಾಯದಲ್ಲಿ ಚೇತರಿಕೆ

By

Published : Sep 17, 2020, 6:35 PM IST

ಬೆಂಗಳೂರು:ಕೊರೊನಾದಿಂದ ಹಿನ್ನೆಡೆ ಕಂಡಿದ್ದ ಮುದ್ರಾಂಕ ಮತ್ತು ನೋಂದಣಿ ಶುಲ್ಕ ಮೂಲದ ಆದಾಯದಲ್ಲಿ ಸದ್ಯ ಚೇತರಿಕೆ ಕಂಡು ಬರುತ್ತಿದೆ.

2020ನೇ ಸಾಲಿನ ಆಗಸ್ಟ್‌ನಲ್ಲಿ 946.33 ಕೋಟಿ ರೂಪಾಯಿ ಆದಾಯ ಸಂಗ್ರಹವಾಗಿದ್ದು, ಕಳೆದ ವರ್ಷದ ಆದಾಯಕ್ಕೆ ಹೋಲಿಸಿದರೆ 6 ಕೋಟಿ ರೂಪಾಯಿ ಹೆಚ್ಚುವರಿ ಆದಾಯ ಸಂಗ್ರಹವಾಗಿರುವುದು ವಿಶೇಷ. ಲಾಕ್​ಡೌನ್‌ ಹಿನ್ನೆಲೆಯಲ್ಲಿ ಕಳೆದ ಏಪ್ರಿಲ್‌ನಲ್ಲಿ 23 ದಿನ ಆಸ್ತಿ ನೋಂದಣಿ ಸ್ಥಗಿತವಾಗಿತ್ತು. ಏ.24ರಿಂದ ನೋಂದಣಿ ಪ್ರಕ್ರಿಯೆ ಪ್ರಾರಂಭ ಮಾಡಲಾಗಿತ್ತು.

ಹಾಗಾಗಿ ಏಪ್ರಿಲ್​ನಲ್ಲಿ ಕೇವಲ 29.81 ಕೋಟಿ ರೂಪಾಯಿ ಆದಾಯ ಸಂಗ್ರಹವಾಗಿತ್ತು, 2019-20ರ ಏಪ್ರಿಲ್​ನಲ್ಲಿ 679.89 ಕೋಟಿ ರೂಪಾಯಿ ಆದಾಯವಾಗಿತ್ತು. ಈ ಬಾರಿ ಮೇ ತಿಂಗಳಲ್ಲಿ 358.95 ಕೋಟಿ ಆದಾಯ ಸಂಗ್ರಹವಾಗಿದ್ದು, 2019ರ ಮೇ ಆದಾಯಕ್ಕೆ ಹೋಲಿಸಿದರೆ ಒಂದೇ ತಿಂಗಳಲ್ಲಿ 700 ಕೋಟಿ ರೂಪಾಯಿ ಇಳಿಕೆ ಕಂಡಿದೆ.

ಜೂನ್​ನಲ್ಲಿ 780 ಕೋಟಿ ರೂಪಾಯಿ ಸಂಗ್ರಹವಾಗಿದೆ. ಜುಲೈನಲ್ಲೂ 705 ಕೋಟಿ ರೂಪಾಯಿ ಆದಾಯ ಬಂದಿದೆ. ಆಗಸ್ಟ್​ನಲ್ಲಿ ಸುಮಾರು 1.80 ಲಕ್ಷ ಆಸ್ತಿಗಳ ನೋಂದಣಿಯಾಗಿದ್ದು, 946.25 ಕೋಟಿ ರೂಪಾಯಿ ಆದಾಯ ಸಂಗ್ರಹವಾಗಿದೆ. ಇದು 2019ರ ಆಗಸ್ಟ್‌ ತಿಂಗಳ ಆದಾಯಕ್ಕಿಂತ 6 ಕೋಟಿ ರೂಪಾಯಿ ಹೆಚ್ಚಳವಾಗಿದೆ.

ಹಿಂದಿನ ವರ್ಷಕ್ಕೆ ಹೋಲಿಸಿದರೆ ಕಳೆದ ಐದು ತಿಂಗಳಲ್ಲಿ ಶೇ. 40ರಷ್ಟು ಆದಾಯ ಇಳಿಕೆಯಾಗಿದೆ. ಮುಂದಿನ ದಿನಗಳಲ್ಲಿ ಆಸ್ತಿ ನೋಂದಣಿ ಪ್ರಕ್ರಿಯೆ ಹೆಚ್ಚಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಅಧಿಕಾರಿಗಳು.

ABOUT THE AUTHOR

...view details