ಕರ್ನಾಟಕ

karnataka

ETV Bharat / state

ನೈಋತ್ಯ ರೈಲ್ವೆಯ ಬೆಂಗಳೂರು ವಿಭಾಗದಿಂದ ದಾಖಲೆಯ ಸರಕು ಸಾಗಣೆ - Record freight from South Western Railway bengaluru

ಅಕ್ಟೋಬರ್ ತಿಂಗಳಿನಲ್ಲಿ ನೈಋತ್ಯ ರೈಲ್ವೆಯ ಬೆಂಗಳೂರು ವಿಭಾಗವು 0.141 ಮಿಲಿಯನ್ ಟನ್‌ಗಳಷ್ಟು ಸರಕು ಲೋಡ್ ಮಾಡುವ ಮೂಲಕ ದಾಖಲೆಯ ಸರಕು ಸಾಗಣೆ ಮಾಡಿದೆ.

Record freight from the Bangalore section of the Southwest Railway
ದಾಖಲೆಯ ಸರಕು ಸಾಗಣೆ

By

Published : Nov 6, 2021, 5:25 PM IST

ಬೆಂಗಳೂರು: ನೈಋತ್ಯ ರೈಲ್ವೆಯ ಬೆಂಗಳೂರು ವಿಭಾಗವು ಇತ್ತೀಚಿನ ದಿನಗಳಲ್ಲಿ ಸರಕು ಸಾಗಣೆಯಲ್ಲಿ ದಾಪುಗಾಲು ಹಾಕುತ್ತಿದೆ.

ಅಕ್ಟೋಬರ್ ತಿಂಗಳಿನಲ್ಲೇ ವಿಭಾಗವು 0.141 ಮಿಲಿಯನ್ ಟನ್‌ಗಳಷ್ಟು ಸರಕು ಲೋಡ್ ಮಾಡಿದ್ದು, 14.48 ಕೋಟಿ ರೂಪಾಯಿ ಮೌಲ್ಯದ ಸರಕು ಸಾಗಣೆ ಆದಾಯ ದಾಖಲಿಸಿದೆ. ಇದು 2021-22ನೇ ಹಣಕಾಸು ವರ್ಷದಲ್ಲಿ ಅತ್ಯಧಿಕ ಮಾಸಿಕ ಸಾಧನೆಯಾಗಿದೆ.

2020ರ ಅಕ್ಟೋಬರ್‌ನಲ್ಲಿ ದಿನಕ್ಕೆ 148 ವ್ಯಾಗನ್‌ಗಳಿಗೆ ಹೋಲಿಸಿದರೆ 2021ರ ಅಕ್ಟೋಬರ್‌ನಲ್ಲಿ ದಿನಕ್ಕೆ ಸರಾಸರಿ 166 ವ್ಯಾಗನ್‌ಗಳನ್ನು ಲೋಡ್ ಮಾಡಲಾಗಿದೆ. ಇದು ಶೇ 28ರಷ್ಟು ಬೆಳವಣಿಗೆ ದಾಖಲಿಸಿದೆ.

ಒಟ್ಟಾರೆಯಾಗಿ, ಕಳೆದ ಹಣಕಾಸು ವರ್ಷದಲ್ಲಿ ಅಕ್ಟೋಬರ್ 2020 ರವರೆಗಿನ ಸಂಚಿತ ಅಂಕಿಅಂಶಗಳಿಗೆ ಹೋಲಿಸಿದರೆ ವಿಭಾಗವು ಶೇ 7 ಟನ್ ಮತ್ತು ಶೇ 36.23 ಸರಕು ಸಾಗಣೆ ಆದಾಯದಲ್ಲಿ ಹೆಚ್ಚಳವನ್ನು ಕಂಡಿದೆ. ಬಿಡದಿ ಗೂಡ್ಸ್ ಶೆಡ್‌ನಲ್ಲಿ ಟೊಯಟಾ ಎಸ್‌ಯುವಿ ಲೋಡಿಂಗ್, ಹೊಸೂರಿನಲ್ಲಿ ಅಶೋಕ್ ಲೇಲ್ಯಾಂಡ್ ಟ್ರಕ್ ಲೋಡಿಂಗ್, ಧರ್ಮಪುರಿ ಮತ್ತು ಹೊಸೂರು ಗೂಡ್ಸ್ ಶೆಡ್‌ಗಳಿಂದ ರೈಸ್ ಲೋಡಿಂಗ್ ವಿಭಾಗದ ಈ ಸಾಧನೆಗೆ ಕಾರಣವೆಂದು ಅಧಿಕಾರಿಯೊಬ್ಬರು ಹೇಳಿದ್ದಾರೆ‌‌.

ಇದನ್ನೂ ಓದಿ:'ಐ ಮಿಸ್​ ಹಿಮ್​ ಸೋ ಮಚ್'​: ಬಹುಭಾಷಾ ನಟಿ ಜಯಪ್ರದಾ ಭಾವುಕ

ABOUT THE AUTHOR

...view details