ಬೆಂಗಳೂರು : ನಗರದಲ್ಲಿ ಇಂದು ಒಂದೇ ದಿನ 346 ಮಂದಿ ಕೋವಿಡ್ ಸೋಂಕಿಗೆ ಮೃತಪಟ್ಟಿರುವುದು ವರದಿಯಾಗಿದೆ.
ಈ ಪ್ರಮಾಣದಲ್ಲಿ ಜನ ಸಾವನ್ನಪ್ಪಿರುವುದು ಇದೇ ಮೊದಲಾಗಿದೆ. ನಗರದ ಐಸಿಯು, ವೆಂಟಿಲೇಟರ್ ಕೊರತೆಯಿಂದಾಗಿಯೇ ಜನ ಬಲಿಯಾಗುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಇಡೀ ನಗರದ ಯಾವುದೇ ಆಸ್ಪತ್ರೆ ಹುಡುಕಿದರೂ ಆಕ್ಸಿಜನ್ ಬೆಡ್ ಸಿಗುತ್ತಿಲ್ಲ. ಇದು ಸಾವು-ನೋವು ಹೆಚ್ಚಾಗಲು ಕಾರಣವಾಗಿದೆ.
ನಗರದಲ್ಲಿ ಈವರೆಗೆ ಕೋವಿಡ್‌ಗೆ ಬಲಿಯಾದವರ ಸಂಖ್ಯೆ 7,491ಕ್ಕೆ ಏರಿಕೆಯಾಗಿದೆ. 21,376 ಜನರಿಗೆ ಸೋಂಕು ಹಬ್ಬಿದ್ದು, 11,784 ಜನ ಇಂದು ಬಿಡುಗಡೆಯಾಗಿದ್ದಾರೆ. 341,978 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಈವರೆಗೆ ಒಂದೇ ದಿನದ ಸಾವಿನ ಪ್ರಕರಣ 162 ಅನ್ನು ಮೀರಿರಲಿಲ್ಲ. ಇಂದು ಒಂದೇ ದಿನ 346 ಜನರ ಸಾವು ವರದಿಯಾಗಿದ್ದು ದಾಖಲೆಯಾಗಿದೆ.