ಕರ್ನಾಟಕ

karnataka

ETV Bharat / state

ಸರ್ಕಾರಿ ಜಮೀನು ರಕ್ಷಣೆಗೆ ಪ್ರಬಲ ಕಾನೂನು ತಂಡದ ಶಿಫಾರಸು: ಸುಧಾರಣಾ ಆಯೋಗ ಹುದ್ದೆ ಕಡಿತದ ಬಗ್ಗೆ ಹೇಳಿದ್ದೇನು? - Bengaluru News

ಆಡಳಿತ ಸುಧಾರಣೆ ಸಂಬಂಧ ಸುಧಾರಣಾ ಕ್ರಮಗಳನ್ನು ಕೈಗೊಳ್ಳುವಂತೆ ಸಲಹೆ ನೀಡಿರುವ ಆಯೋಗ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯಲ್ಲಿನ ಸರ್ಕಾರಿ ಜಮೀನನ್ನು ರಕ್ಷಿಸುವಲ್ಲಿ ಹೆಚ್ಚಿನ ಆದ್ಯತೆ ನೀಡಬೇಕು ಎಂದು ತಿಳಿಸಿದೆ. ಸರ್ಕಾರಿ ಜಮೀನು ಸಂಬಂಧ ನೂರಾರು ಕಾನೂನು ಅರ್ಜಿ ಸಲ್ಲಿಕೆಯಾಗಿರುವ ಕಾರಣ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ಆದಾಯ ನಷ್ಟವಾಗುತ್ತಿದೆ ಎಂದು ವರದಿಯಲ್ಲಿ ವಿವರಿಸಿದೆ.

Reform Commission
ಸುಧಾರಣಾ ಆಯೋಗ

By

Published : Jul 5, 2021, 6:39 AM IST

Updated : Jul 5, 2021, 6:47 AM IST

ಬೆಂಗಳೂರು:ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯಲ್ಲಿ ಬೆಲೆ ಬಾಳುವ ಸರ್ಕಾರಿ ಭೂಮಿಯನ್ನು ರಕ್ಷಿಸಲು ಪ್ರಬಲ ಕಾನೂನು ತಂಡ ರಚಿಸುವಂತೆ ಕರ್ನಾಟಕ ಆಡಳಿತ ಸುಧಾರಣಾ ಆಯೋಗ ತನ್ನ ಶಿಫಾರಸಿನಲ್ಲಿ ಸ್ಪಷ್ಟವಾಗಿ ತಿಳಿಸಿದೆ. ಸಿಎಂಗೆ ತನ್ನ ಮೊದಲ ವರದಿಯನ್ನು ಸಲ್ಲಿಸಿರುವ ಟಿ.ಎನ್. ವಿಜಯ ಭಾಸ್ಕರ್ ಅಧ್ಯಕ್ಷತೆಯ ಆಯೋಗ ಕೆಲ ಮಹತ್ವದ ಶಿಫಾರಸುಗಳನ್ನು ಮಾಡಿದೆ.

ಆಡಳಿತ ಸುಧಾರಣೆ ಸಂಬಂಧ ಸುಧಾರಣಾ ಕ್ರಮಗಳನ್ನು ಕೈಗೊಳ್ಳುವಂತೆ ಸಲಹೆ ನೀಡಿರುವ ಆಯೋಗವು ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯಲ್ಲಿನ ಸರ್ಕಾರಿ ಜಮೀನನ್ನು ರಕ್ಷಿಸುವಲ್ಲಿ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಹೇಳಿದೆ. ಸರ್ಕಾರಿ ಜಮೀನು ಸಂಬಂಧ ನೂರಾರು ಕಾನೂನು ಅರ್ಜಿ ಸಲ್ಲಿಕೆಯಾಗಿರುವ ಕಾರಣ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ಆದಾಯ ನಷ್ಟವಾಗುತ್ತಿದೆ ಎಂದು ವರದಿಯಲ್ಲಿ ವಿವರಿಸಿದೆ.

ಬೆಂಗಳೂರು‌ ನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿನ ಸರ್ಕಾರಿ ಭೂಮಿ ಅತ್ಯಂತ ಬೆಲೆ ಬಾಳುವ ಆಸ್ತಿಯಾಗಿದೆ. ಇದರ ರಕ್ಷಣೆಯನ್ನು ಪರಿಣಾಮಕಾರಿಯಾಗಿ ಮಾಡುವ ಅಗತ್ಯತೆಯ ಬಗ್ಗೆ ಅಭಿಪ್ರಾಯಪಟ್ಟಿದೆ.

ಕರ್ನಾಟಕ ಆಡಳಿತ ಸುಧಾರಣಾ ಆಯೋಗ

ಪ್ರಬಲ ಕಾನೂನು ತಂಡ ರಚನೆಗೆ ಶಿಫಾರಸು:ಸರ್ಕಾರಿ ಜಮೀನನ್ನು ರಕ್ಷಿಸಲು ನ್ಯಾಯಾಲಯದಲ್ಲಿ ಬಲವಾದ ವಾದ‌ ಮಂಡಿಸುವ ಅಗತ್ಯ ಇದೆ. ಹೀಗಾಗಿ ಪ್ರಬಲ ಕಾನೂನು ತಂಡವನ್ನು ರಚಿಸುವ ಅಗತ್ಯತೆ ಇದೆ ಎಂದು ಆಯೋಗ ಶಿಫಾರಸು ಮಾಡಿದೆ. ಈ ಎರಡು ಜಿಲ್ಲೆಗಳಲ್ಲಿನ ಸರ್ಕಾರಿ ಜಮೀನನ್ನು ರಕ್ಷಿಸಲು ವಿಫಲವಾದರೆ, ಸರ್ಕಾರದ ಬೊಕ್ಕಸಕ್ಕೆ ಭಾರಿ ನಷ್ಟವಾಗಲಿದೆ ಎಂದು ಆಯೋಗ ಆತಂಕ ವ್ಯಕ್ತಪಡಿಸಿದೆ. ಹೀಗಾಗಿ ಜಿಲ್ಲಾ ಮಟ್ಟದಲ್ಲಿ ನಿವೃತ್ತ ನ್ಯಾಯಾಧೀಶರನ್ನು ಕಾನೂನು ಸಲಹೆಗಾರನ್ನಾಗಿ ನೇಮಿಸುವ ಅಗತ್ಯ ಇದೆ. ಎರಡು ಜಿಲ್ಲೆಗಳಲ್ಲಿನ ಪ್ರತಿ ತಹಶೀಲ್ದಾರರಿಗೆ ಕಾನೂನು ಸಲಹೆಗಾರರ ಸೇವೆ ಕಲ್ಪಿಸುವುದು ಉತ್ತಮ ಎಂದು ಶಿಫಾರಸು ಮಾಡಿದೆ.

ಇದನ್ನು ಓದಿ: ಗೋವಿನ ಹೆಸರಲ್ಲಿ ಹಿಂಸೆ ಹಿಂದುತ್ವ ವಿರೋಧಿ ನಡೆ; ದೇಶದಲ್ಲಿ ಹಿಂದೂ ಅಥವಾ ಮುಸ್ಲಿಂ ಪ್ರಾಬಲ್ಯ ಸಾಧ್ಯವಿಲ್ಲ: ಮೋಹನ್ ಭಾಗವತ್

ಮುದ್ರಾಂಕ ಮತ್ತು ನೋಂದಣಿ ಇಲಾಖೆಯ ಮೊಬೈಲ್ ಸಂಖ್ಯೆಯ ಡೇಟಾಬೇಸ್‌ನಲ್ಲಿ ತೀವ್ರ ವ್ಯತ್ಯಯ ಇರುವ ಬಗ್ಗೆ ಆಯೋಗ ಬೆಳಕು ಹರಿಸಿದೆ. ಅನೇಕ ಮೊಬೈಲ್ ಸಂಖ್ಯೆ ಅನುಪಯುಕ್ತವಾಗಿದ್ದು, ಇನ್ನೂ ಕೆಲ ಸಂಖ್ಯೆಗಳು ತಪ್ಪಾಗಿ ಇವೆ ಎಂದು ತಿಳಿಸಿದೆ. ಸುಮಾರು 25% ಸಂಖ್ಯೆಗಳು ಲೋಪಪೂರಿತವಾಗಿವೆ. ಹೀಗಾಗಿ ಸರಿಯಾದ ಸಂಖ್ಯೆಯನ್ನು ಒದಗಿಸುವ ಅಗತ್ಯ ಇದೆ ಎಂದು ತಿಳಿಸಿದೆ.

ಪ್ರಾದೇಶಿಕ ಆಯುಕ್ತ ಕಚೇರಿ ಹುದ್ದೆ ರದ್ದು: ಆಯೋಗ ವರದಿಯಲ್ಲಿ ಪ್ರಾದೇಶಿಕ ಆಯಕ್ತರ ಹುದ್ದೆ ರದ್ದತಿಗೆ ಶಿಫಾರಸು ಮಾಡಿದೆ. ಇದರಿಂದ ಸರ್ಕಾರಕ್ಕೆ ಉಳಿತಾಯವಾಗಲಿದೆ ಎಂದು ಸಲಹೆ ನೀಡಿದೆ. ಪ್ರಾದೇಶಿಕ ಆಯುಕ್ತರ ಹುದ್ದೆ ಬದಲಿಗೆ ಕಂದಾಯ ಆಯುಕ್ತರ ಹುದ್ದೆ ಸೃಜಿಸಲು ಶಿಫಾರಸು ಮಾಡಿದೆ. ಕಂದಾಯ ಆಯುಕ್ತರ ಕಚೇರಿಗೆ ಉಳಿಸಿಕೊಳ್ಳಬಹುದಾದ ಅಥವಾ ರಚಿಸಬಹುದಾದ ಹುದ್ದೆಗಳನ್ನು ಹೊರತುಪಡಿಸಿ, ಒಟ್ಟು ಪ್ರಾದೇಶಿಕ ಆಯುಕ್ತರ ಕಚೇರಿಗಳಲ್ಲಿನ 378 ಹುದ್ದೆಗಳನ್ನು ರದ್ದುಗೊಳಿಸಬಹುದಾಗಿದೆ ಎಂದು ತಿಳಿಸಿದೆ. ಅದರಲ್ಲಿ 18 ಗುಂಪು ಎ ಹುದ್ದೆಗಳು, 12 ಗ್ರೂಪ್ ಬಿ ಹುದ್ದೆಗಳು. 311 ಗ್ರೂಪ್ ಸಿ ಹುದ್ದೆಗಳು ಮತ್ತು 47 ಗ್ರೂಪ್ ಡಿ ಹುದ್ದೆಗಳನ್ನು ರದ್ದು ಪಡಿಸಬಹುದಾಗಿದೆ ಎಂದು ತಿಳಿಸಿದೆ.

ರದ್ದುಪಡಿಸಿದ ಹುದ್ದೆಗಳಲ್ಲಿರುವ ಅಧಿಕಾರಿಗಳು, ಸಿಬ್ಬಂದಿಯನ್ನು ತೀವ್ರ ಅವಶ್ಯವಿರುವ ತಾಲೂಕು, ಜಿಲ್ಲೆಗಳ ಕಚೇರಿಗಳಿಗೆ ವರ್ಗಾಯಿಸಬಹುದು ಎಂದು ಶಿಫಾರಸು ಮಾಡಿದೆ. ಪ್ರತಿ ನಾಲ್ಕು ಪ್ರಾದೇಶಿಕ ಆಯುಕ್ತಾಲಯದಲ್ಲಿ ತಲಾ 141 ಹುದ್ದೆಗಳಂತೆ ಒಟ್ಟು 564 ಹುದ್ದೆಗಳು ಮುಂಜೂರಾಗಿವೆ. ಕಂದಾಯ ಆಯುಕ್ತಾಲಯಕ್ಕೆ ಕೇವಲ 186 ಹುದ್ದೆಗಳು ಬೇಕಾಗಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿದುಬಂದಿದೆ.

Last Updated : Jul 5, 2021, 6:47 AM IST

ABOUT THE AUTHOR

...view details