ಕರ್ನಾಟಕ

karnataka

ETV Bharat / state

ಬೆಂಗಳೂರಿಗೆ ಐದು ಅತೃಪ್ತ ಶಾಸಕರು ವಾಪಸ್.. ಡಿಕೆಶಿ ಸವಾಲ್ ಸ್ವೀಕರಿಸಿದ ಎಂಟಿಬಿ - Bangalore from mumbai

ನ್ಯಾಯಾಂಗದ ಮೂಲಕ ನಾವು ಹೋರಾಟ ನಡೆಸುತ್ತೇವೆ.  ನಮಗೆ  ನ್ಯಾಯ ಸಿಗುವ ವಿಶ್ವಾಸ ಇದೆ ಎಂದ ಅವರು, ಬಿಜೆಪಿಯವರ ಸಂಪರ್ಕದ ಕುರಿತು ಪ್ರತಿಕ್ರಿಯಿಸಿದ ಅವರು, ನಮಗೆ ಯಾರ ಸಂಪರ್ಕವೂ ಇಲ್ಲ. ಯಾರೂ ನಮ್ಮನ್ನು ಸಂಪರ್ಕ ಮಾಡಿಲ್ಲ ಎಂದು ಎಂಟಿಬಿ ಹೇಳಿದರು.

ಬೆಂಗಳೂರಿಗೆ ವಾಪಸ್ಸಾದ ಅತೃಪ್ತ ಐವರು ಶಾಸಕರು

By

Published : Jul 29, 2019, 8:37 AM IST

Updated : Jul 29, 2019, 9:23 AM IST

ಬೆಂಗಳೂರು: ಕಳೆದ 21 ದಿನಗಳಿಂದ ಮುಂಬೈನಲ್ಲಿ ಬೀಡುಬಿಟ್ಟಿದ್ದ ಅತೃಪ್ತ ಶಾಸಕರು ಬೆಂಗಳೂರಿಗೆ ಆಗಮಿಸಿದ್ದಾರೆ.

ಸ್ಪೀಕರ್ ಅನರ್ಹಗೊಳಿಸಿದ ಐವರು ಅತೃಪ್ತ ಶಾಸಕರ ತಂಡ ಮಧ್ಯರಾತ್ರಿ 12:20 ರ ವೇಳೆ ವಿಮಾನದಲ್ಲಿ ನಗರಕ್ಕೆ ಆಗಮಿಸಿದ್ದಾರೆ. ಭೈರತಿ ಬಸವರಾಜ್, ಮುನಿರತ್ನ, ಎಸ್ ಟಿ ಸೋಮಶೇಖರ್, ಶಿವರಾಮ್ ಹೆಬ್ಬಾರ್, ಎಂಟಿಬಿ ನಾಗರಾಜ್ ಜೊತೆಯಲ್ಲಿ ಬಿಜೆಪಿಯ ಆರ್.ಅಶೋಕ್ ಕೂಡ ಇದ್ದರು.

ಈ ವೇಳೆ ಮಾತನಾಡಿದ ಅತೃಪ್ತ ಶಾಸಕ ಎಂಟಿಬಿ ನಾಗರಾಜ್, ನಾವು ಮುಂಬೈನಿಂದ ಐದು ಜನರು ಬಂದಿದ್ದೇವೆ. ಉಳಿದವರಲ್ಲಿ ಕೆಲವರು ದೆಹಲಿಗೆ ಹೋಗ್ತಾರೆ. ಸ್ಪೀಕರ್​ಗೆ ರಾಜೀನಾಮೆ ಕೊಟ್ಟಿದ್ದೆವು. ಅವರು ರಾಜೀನಾಮೆ ಪಡೆಯದೇ, ಅನರ್ಹಗೊಳಿಸಿದ್ದಾರೆ. ನ್ಯಾಯಾಂಗದ ಮೂಲಕ ನಾವು ಹೋರಾಟ ನಡೆಸುತ್ತೇವೆ. ನಮಗೆ ನ್ಯಾಯ ಸಿಗುವ ವಿಶ್ವಾಸ ಇದೆ ಎಂದ ಅವರು, ಬಿಜೆಪಿಯವರ ಸಂಪರ್ಕದ ಕುರಿತು ಪ್ರತಿಕ್ರಿಯಿಸಿದ ಅವರು, ನಮಗೆ ಯಾರ ಸಂಪರ್ಕವೂ ಇಲ್ಲ. ಯಾರೂ ನಮ್ಮನ್ನು ಸಂಪರ್ಕ ಮಾಡಿಲ್ಲ ಎಂದು ಹೇಳಿದರು.

ಬೆಂಗಳೂರಿಗೆ ಐದು ಅತೃಪ್ತ ಶಾಸಕರು ವಾಪಸ್..

ಡಿಕೆ ಶಿವಕುಮಾರ್ ಹೊಸಕೋಟೆ ಕ್ಷೇತ್ರದಲ್ಲಿ ಎದುರಾಗ್ತೀನಿ ಎನ್ನುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಅವರ ಸವಾಲ್‌ನ ನಾ‌ನು ಸಂತೋಷದಿಂದ ಸ್ವೀಕರಿಸುವೆ. ಅದನ್ನ ಎದುರಿಸಲು ನಾನು ಸಿದ್ಧನಿದ್ದೇನೆ. ನಾನು ಮಾಡಿರುವ ಅಭಿವೃದ್ಧಿ ಕೆಲಸಗಳೇ ನನಗೆ ಜಯ ದೊರಕಿಸಿಕೊಡುತ್ತದೆ. 40 ವರ್ಷಗಳಿಂದ ಹೋರಾಟ ಮಾಡಿಕೊಂಡು ರಾಜಕೀಯದಲ್ಲಿದ್ದೇನೆ. ನನಗೆ ಯಾವುದೇ ಭಯವಿಲ್ಲ ಎಂದು ಡಿಕೆಶಿಗೆ ಪರೋಕ್ಷವಾಗಿ ಟಾಂಗ್​ ನೀಡಿದರು.

Last Updated : Jul 29, 2019, 9:23 AM IST

ABOUT THE AUTHOR

...view details